ಬ್ರೇಕಿಂಗ್ ನ್ಯೂಸ್
10-01-21 02:01 pm Source: FILMIBEAT Manjunatha C ಸಿನಿಮಾ
ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್ ಫೇಸ್ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು.
ಅಂತೆಯೇ ದರ್ಶನ್ ಅವರ ಫೇಸ್ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್ಬುಕ್ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು.
ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು, ಆ ದಿನ ಯಾವ ಅಭಿಮಾನಿಗಳೂ ಸಹ ಮನೆಯ ಬಳಿ ಬರಬೇಡಿರೆಂದು ನಟ ದರ್ಶನ್ ಫೇಸ್ಬುಕ್ ಲೈವ್ ನಲ್ಲಿ ಮನವಿ ಮಾಡಿದರು. ಇದೇ ವಿಷಯವನ್ನು ತಿಳಿಸಲೆಂದೇ ತಾವು ಫೇಸ್ಬುಕ್ ಲೈವ್ ಬಂದಿರುವುದಾಗಿ ಹೇಳಿದರು ನಟ ದರ್ಶನ್.

ಕೊರೊನಾ ಕಾರಣದಿಂದಾಗಿ ಯಾರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಯಾರ ಜೇಬಿನಲ್ಲೂ ಹಣವಿಲ್ಲ. ಅಭಿಮಾನಿಗಳು ನೀವು ಕರ್ನಾಟಕದ ಮೂಲೆ-ಮೂಲೆಗಳಿಂದ ಹಣ, ಸಮಯ ಖರ್ಚು ಮಾಡಿಕೊಂಡು ಹುಟ್ಟುಹಬ್ಬಕ್ಕೆ ಬರುತ್ತೀರ. ಆದರೆ ಈ ವರ್ಷ ಅದು ಬೇಡ ಎಂದರು ದರ್ಶನ್.

ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ, ಅದರ ಮುಂದೆ ಬೇರೆ ಇನ್ನಾವ ಜವಾಬ್ದಾರಿಗಳೂ ಇಲ್ಲ. ನೀವು ಸೆಟ್ಲ್ ಆಗಿ. ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಯಾರೂ ಏನೂ ಆಚರಣೆ ಮಾಡುವುದು ಬೇಡ ಎಲ್ಲಿದ್ದೀರೊ ಅಲ್ಲಿಂದಲೇ ಹಾರೈಸಿ ಸಾಕು ಎಂದು ಮನವಿ ಮಾಡಿದರು ನಟ ದರ್ಶನ್.

ನಾನು ಸಹ ಫೆಬ್ರವರಿ 15 ರಿಂದ 18 ರ ವರೆಗೆ ಊರಿನಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲದೆ ಮನೆಯ ಬಳಿ ಹುಟ್ಟುಹಬ್ಬ ಆಚರಿಸಲು ಪೊಲೀಸರು ಅನುಮತಿ ಕೊಡುವುದಿಲ್ಲ. ಸಿಸಿಟಿವಿ ಗಳನ್ನು ಹಾಕಿಸಬೇಕಾಗುತ್ತದೆ, ಬ್ಯಾರಿಕೇಡ್ಗಳನ್ನು ಹಾಕಿಸಬೇಕಾಗುತ್ತದೆ. ಈ ಬಾರಿ ಅದೆಲ್ಲ ಯಾವುದು ಬೇಡ, ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸೋಣ ಎಂದರು ದರ್ಶನ್
ಪ್ರತಿ ಊರಿಗೆ ನಾನೇ ಹೋಗಿ ಅಭಿಮಾನಿ ಸಂಘಗಳನ್ನು ಭೇಟಿ ಮಾಡುವ ಯೋಚನೆ ಇದೆ. ಆದರೆ ಅದೆಲ್ಲವೂ ಮಾರ್ಚ್ ನಂತರವೇ. ಈ ನಡುವೆ ಭಾನುವಾರಗಳಂದು ನಾನೇ ಕೆಲವು ಸಂಘಗಳಿಗೆ ತಿಳಿಸುತ್ತೇನೆ ಅವರು ಬಂದು ಭೇಟಿ ಮಾಡಬಹುದು ಎಂದು ಮಾಹಿತಿ ನೀಡಿದರು ದರ್ಶನ್.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm