ಬ್ರೇಕಿಂಗ್ ನ್ಯೂಸ್
10-01-21 02:08 pm Source: FILMIBEAT Manjunatha C ಸಿನಿಮಾ
ಖ್ಯಾತ ಗಾಯಕಿ ಸುನಿತಾ ಮದುವೆಯಾಗಿದ್ದಾರೆ. ಮಕ್ಕಳೇ ಮುಂದೆ ನಿಂತು ಅಮ್ಮನ ಮದುವೆಯನ್ನು ನೆರವೇರಿಸಿದ್ದಾರೆ.
43 ವರ್ಷದ ತೆಲುಗಿನ ಖ್ಯಾತ ಗಾಯಕಿ ಸುನಿತಾ ಜನವರಿ 09 ರಂದು ರಾಮ್ ವೀರಪನೇನಿ ಎಂಬುವರನ್ನು ವಿವಾಹವಾಗಿದ್ದಾರೆ. ಗಾಯಕಿ ಸುನಿತಾ ಗೆ ಇದು ಎರಡನೇ ವಿವಾಹ. ಮಕ್ಕಳೇ ಮುಂದೆ ನಿಂತು ಈ ವಿವಾಹ ಕಾರ್ಯ ನೆರವೇರಿಸಿದ್ದಾರೆ.
ಗಾಯಕಿ ಸುನಿತಾ ಹಾಗೂ ರಾಮ್ ವೀರಪನೇನಿ ಅವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದ್ಧೂರಿಯಾಗಿಯೇ ನಡೆದ ಈ ಮದುವೆಗೆ ಹಲವು ಅತಿಥಿಗಳು ಭಾಗವಹಿಸಿ, ನವ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.
19 ವರ್ಷಕ್ಕೆ ಸುನೀತಾಗೆ ಮದುವೆಯಾಗಿತ್ತು
ಸುನಿತಾ ಅವರಿಗೆ 19 ನೇ ವರ್ಷಕ್ಕೆ ಮದುವೆ ಮಾಡಲಾಗಿತ್ತು. ಮೊದಲ ಪತಿ, ಪತ್ರಕರ್ತ ಕಿರಣ್ ಗೋಪುರಾಜು ಇಂದು ವಿಚ್ಛೇಧನ ಪಡೆದು ಹಲವು ವರ್ಷಗಳಾಗಿದ್ದವು ಸುನಿತಾ. ಇದೀಗ ಕೆಲವು ತಿಂಗಳ ಹಿಂದೆ ಮಕ್ಕಳ ಸಮ್ಮುಖದಲ್ಲಿಯೇ ಸುನೀತಾ ಹಾಗೂ ರಾಮ್ ನಿಶ್ಚಿತಾರ್ಥ ಮಾಡಿಕೊಂಡು ಈಗ ಮದುವೆ ಆಗಿದ್ದಾರೆ.
ಡಿಜಿಟಲ್ ಮಿಡಿಯಾ ಸಂಸ್ಥೆಯೊಂದರ ಸಿಇಒ
ರಾಮ್ ವೀರಪನೇನಿ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿದ್ದು, 'ನನ್ನ ಬಾಳಿಗೆ ಸ್ನೇಹಿತನಾಗಿ ಬಂದು ಈಗ ನನ್ನ ಜೀವನದ ಭಾಗವೇ ಆಗುತ್ತಿದ್ದಾರೆ ರಾಮ್' ಎಂದು ಹೇಳಿದ್ದಾರೆ ಸುನೀತಾ. ಸುನೀತಾ ಅವರ ಮರು ಮದುವೆ ನಿರ್ಧಾರಕ್ಕೆ ಹಲವಾರು ಮಂದಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಸುನೀತಾ ಗೆ ಇಬ್ಬರು ಮಕ್ಕಳಿದ್ದಾರೆ
ಸುನಿತಾಗೆ ಮತ್ತು ಮೊದಲ ಪತಿ ಕಿರಣ್ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.
ಮದುವೆ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು
ಗಾಯಕಿ ಸುನಿತಾ ತಾವು ಮದುವೆ ಆಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದಾಗ ಸಾಕಷ್ಟು ಮಂದಿ ಟೀಕಿಸಿದ್ದರು. ಆದರೆ ಎಲ್ಲ ಟೀಕೆಯನ್ನು ನಿರ್ಲಕ್ಷಿಸಿ ಮದುವೆ ಆಗಿದ್ದಾರೆ ಸುನೀತಾ. 'ನನ್ನ ಮಕ್ಕಳು ಸೆಟಲ್ ಆಗಲಿ ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ನಾನೂ ಸಹ ಸೆಟಲ್ ಆಗಲಿ ಎಂದು ನನ್ನ ಮಕ್ಕಳು ಯೋಚಿಸಿದ್ದಾರೆ. ಅದ್ಭುತವಾದ ಮಕ್ಕಳನ್ನು ನಾನು ಪಡೆದಿದ್ದೇನೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಸುನೀತಾ.
This News Article is a Copy of FILMIBEAT
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am