ಬ್ರೇಕಿಂಗ್ ನ್ಯೂಸ್
11-01-21 11:45 am Source: FILMIBEAT ಸಿನಿಮಾ
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಚಿತಾ ರಾಮ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರ ವಲ್ಲದೇ ತೆಲುಗು ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಈ ನಡುವೆ ರಚಿತಾ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಲವ್ ಮಾಕ್ ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ರಚಿತಾ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಲವ್ ಮಾಕ್ ಟೇಲ್ ಬಳಿಕ ಕೃಷ್ಣಗೆ ಬೇಡಿಕೆ ಜಾಸ್ತಿ ಆಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕನಾಗಿ ನಟಿಸುವ ಜೊತೆಗೆ ಲವ್ ಮಾಕ್ ಟೇಲ್-2 ಸಿನಿಮಾದ ನಿರ್ದೇಶನದಲ್ಲೂ ಕೃಷ್ಣ ನಿರತರಾಗಿದ್ದಾರೆ.
ಈ ನಡುವೆ ರಚಿತಾ ರಾಮ್ ಜೊತೆ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿ ಅಚ್ಚರಿ ಮೂಡಿಸಿದೆ. ಮೊದಲ ಬಾರಿಗೆ ರಚಿತಾ ಮತ್ತು ಡಾರ್ಲಿಂಗ್ ಕೃಷ್ಣ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಅಂದಹಾಗೆ ಇಬ್ಬರನ್ನು ಒಟ್ಟಿಗೆ ಕರೆತರುತ್ತಿದ್ದಾರೆ. ನಿರ್ದೇಶಕ ದೀಪಕ್ ಗಂಗಾಧರ್. ದೀಪಕ್ ಗೆ ಇದು ಚೊಚ್ಚಲ ಸಿನಿಮಾ. ಪಕ್ಕ ಲವ್ ಸ್ಟೋರಿ ಸಿನಿಮಾ ಇದಾಗಿದ್ದು, ಇನ್ನು ಟೈಟಲ್ ಬಹಿರಂಗ ಪಡಿಸಿಲ್ಲ.

ರೊಮ್ಯಾಂಟಿಕ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ ಶ್ರೀಧರ್ ವಿ ಸಂಭ್ರಮ್. ಉಳಿದಂತೆ ಪಾತ್ರವರ್ಗ ಮತ್ತು ತಂತ್ರಜ್ಞರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ಸಿನಿಮಾ ಏಪ್ರಿಲ್ ಅಥವಾ ಮಾರ್ಚ್ ತಿಂಗಳಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಡಾರ್ಲಿಂಗ್ ಕೃಷ್ಣ ಸದ್ಯ ಶ್ರೀಕೃಷ್ಣ@ಜಿಮೇಲ್.ಕಾಮ್, MR.ಬ್ಯಾಚುಲರ್, ಶುಗರ್ ಫ್ಯಾಕ್ಟರಿ ಮತ್ತು ಲವ್ ಮಾಕ್ ಟೇಲ್-2ನಲ್ಲಿ ನಿರತರಾಗಿದ್ದಾರೆ. ಜನವರಿ 22ರಿಂದ ಶುಗರ್ ಫ್ಯಾಕ್ಟರಿ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಸಿನಿಮಾಗಳ ಜೊತೆಗೆ ಕೃಷ್ಣ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ ಬಹುಕಾಲದ ಗೆಳತಿ, ನಟಿ ಮಿಲನಾ ನಾಗರಾಜ್ ಜೊತೆ ಹಸೆಮಣೆ ಏರುತ್ತಿದ್ದಾರೆ.
ಇನ್ನು ನಟಿ ರಚಿತಾ ರಾಮ್ ಬಳಿಯೂ ಸಾಲು ಸಾಲು ಸಿನಿಮಾಗಳಿವೆ. ಸದ್ಯ ರಚಿತಾ, ಪ್ರಜ್ವಲ್ ದೇವರಾಜ್ ಜೊತೆ ವೀರಂ ಸಿನಿಮಾದಲ್ಲಿ ನಿರತರಾಗಿದ್ದಾರೆ. ಮೊದಲ ಬಾರಿಗೆ ಪ್ರಜ್ವಲ್ ಗೆ ಜೋಡಿಯಾಗಿ ರಚಿತಾ ನಟಿಸುತ್ತಿದ್ದಾರೆ. ಖಾದರು ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm