ಬ್ರೇಕಿಂಗ್ ನ್ಯೂಸ್
14-01-21 04:15 pm Source: FILMIBEAT Manjunatha C ಸಿನಿಮಾ
ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ನಟ ಪುನೀತ್ ರಾಜ್‌ಕುಮಾರ್ ಮನೆಗೆ ಇಂದು ಭೇಟಿ ನೀಡಿದ್ದರು.
ಜಮೀರ್ ಅಹ್ಮದ್ ಪುತ್ರಿಯ ವಿವಾಹ ಇದೇ ತಿಂಗಳು ನಡೆಯಲಿದ್ದು, ಮದುವೆಗೆ ಆಮಂತ್ರಣ ಪತ್ರಿಕೆ ನೀಡಲು ಜಮೀರ್ ಅಹ್ಮದ್ ಅವರು ತಮ್ಮ ಪುತ್ರನನ್ನೂ ಜೊತೆ ಮಾಡಿಕೊಂಡು ಪುನೀತ್ ರಾಜ್‌ಕುಮಾರ್ ಸೇರಿ ಹಲವು ಸಿನಿ ತಾರೆಗಳ ನಿವಾಸಕ್ಕೆ ಭೇಟಿ ನೀಡಿದ್ದರು.
ಜಮೀರ್ ಅವರು ಪುತ್ರಿಯ ವಿವಾಹಕ್ಕೆ ಜಮೀರ್ ಅನ್ನು ಆಹ್ವಾನಿಸಿದ್ದು, ಪುನೀತ್ ಜೊತೆಯಲ್ಲಿ ಕೆಲ ಕಾಲ ಕಳೆದು ಉಭಯ ಕುಶಲೋಪರಿಯನ್ನು ಸಹ ಮಾಡಿದ್ದಾರೆ. ಪುನೀತ್ ಅವರನ್ನು ಜಮೀರ್ ಮಗಳ ಮದುವೆಗೆ ಆಹ್ವಾನಿಸುತ್ತಿರುವ ಚಿತ್ರಗಳನ್ನು ಜಮೀರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯಶ್, ಸುದೀಪ್, ರಾಘಣ್ಣನ ಮನೆಗೆ ಭೇಟಿ
ಪುನೀತ್ ಮನೆಗೆ ಭೇಟಿ ಕೊಟ್ಟ ಬಳಿಕ ನಟರಾದ ಸುದೀಪ್, ಯಶ್ ನಿವಾಸಗಳಿಗೂ ಭೇಟಿ ಕೊಟ್ಟ ಜಮೀರ್ ಹಾಗೂ ಅವರ ಪುತ್ರ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಟ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೂ ಜಮೀರ್ ಭೇಟಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ, ಶಿವರಾಜ್ ಕುಮಾರ್, ದುನಿಯಾ ವಿಜಯ್ ಅವರಿಗೂ ಆಹ್ವಾನ ನೀಡಿದ್ದಾರೆ ಜಮೀರ್.

ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೂ ಆಹ್ವಾನ
ಜಮೀರ್ ಅವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು, ಹಲವಾರು ರಾಜಕೀಯ ಮುಖಂಡರನ್ನು, ಸಿನಿಮಾ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ್ದಾರೆ. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನೂ ಸಹ ಜಮೀರ್ ಅವರು ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರನ್ನೂ ಮದುವೆಗೆ ಆಹ್ವಾನಿಸಿದ್ದಾರೆ ಜಮೀರ್.

ಬಾಲಿವುಡ್‌ನಿಂದ ಅತಿಥಿಗಳು ಆಗಮಿಸುವ ನಿರೀಕ್ಷೆ
ಬಾಲಿವುಡ್‌ನಲ್ಲಿಯೂ ಸಾಕಷ್ಟು ಪರಿಚಯ ಜಮೀರ್ ಅವರಿಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಸಹ ಜಮೀರ್ ಪುತ್ರಿಯ ಮದುವೆಗೆ ಆಗಮಿಸುವ ಸಂಭವ ಇದೆ. ಈ ಹಿಂದೆ ಜಮೀರ್ ಹುಟ್ಟುಹಬ್ಬಕ್ಕೆ ಸಂಜಯ್ ದತ್, ಸೋಹೆಲ್ ಖಾನ್, ಅರ್ಬಾಜ್ ಖಾನ್ ಅವರುಗಳು ಹಾಜರಾಗಿದ್ದರು.

ಜನವರಿ 21 ರಂದು ಮದುವೆ
ಜಮೀರ್ ಅಹ್ಮದ್ ಪುತ್ರಿಯ ವಿವಾಹವು ಜನವರಿ 21 ರಂದು ಭಾರಿ ಅದ್ಧೂರಿಯಾಗಿ ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜಕೀಯ ನಾಯಕರ, ಸಿನಿಮಾ ಸೆಲೆಬ್ರಿಟಿಗಳ ದಂಡೇ ಅಂದು ಅರಮನೆ ಮೈದಾನದಲ್ಲಿ ನೆರೆಯಲಿದೆ ಎನ್ನಲಾಗುತ್ತಿದೆ.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm