ಬ್ರೇಕಿಂಗ್ ನ್ಯೂಸ್
26-01-21 04:38 pm Source: FILMIBEAT Shruthi Gk ಸಿನಿಮಾ
ಬಾಲಿವುಡ್ ನಟ ವರುಣ್ ಧವನ್ ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ಭಾನುವಾರ (ಜನವರಿ 24) ಹಸೆಮಣೆ ಏರಿದ್ದಾರೆ. ವರುಣ್ ಮದುವೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ದಿ ಮ್ಯಾನ್ಷನ್ ಹೌಸ್ ನಲ್ಲಿ ನೆರವೇರಿದೆ.
ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ವರುಣ್ ಮತ್ತು ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ 150 ರಿಂದ 200 ಮಂದಿ ಮಾತ್ರ ಮದುವೆಯಲ್ಲಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ವರುಣ್ ಮತ್ತು ನತಾಶಾ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಹೊಸ ಜೋಡಿಗೆ ಬಾಲಿವುಡ್ ಗಣ್ಯರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಟ ವರುಣ್ ಧವನ್ ಬಗ್ಗೆ ಮಾಡಿರುವ ಶಾಕಿಂಗ್ ಕಾಮೆಂಟ್ ಎಲ್ಲರ ಗಮನ ಸೆಳೆಯುತ್ತಿದೆ.

ವರುಣ್ ಧವನ್ ದಂಪತಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಶ್ರದ್ಧಾ ವ್ಯಂಗ್ಯವಾಡಿದ್ದಾರೆ. ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿರುವ ಶ್ರದ್ಧಾ 'ಇನ್ನೊಬ್ಬ ಉತ್ತಮ ನಟನ ವೃತ್ತಿ ಬದುಕು ಕೊನೆಯಾಯಿತು. ನಾವು ಮತ್ತೆ ಅವರನ್ನು ಪರದೆ ಮೇಲೆ ನೋಡಲು ಸಾಧ್ಯವಿಲ್ಲ ಎನ್ನುವ ಬೇಸರವಿದೆ. ಅವರ ಪತ್ನಿ ಮತ್ತು ಅತ್ತೆ ಮನೆಯರು ಬೇರೆ ನಾಯಕಿಯರ ಜೊತೆ ನಟಿಸುವದನ್ನು ಇಷ್ಟಪಡುವುದಿಲ್ಲ' ಎಂದಿದ್ದಾರೆ.

ಪುರುಷ ಪ್ರಧಾನ ಸಿನಿಮಾಗಳನ್ನು ಮಾತ್ರ ಮಾಡುತ್ತಾರಾ?
'ಬಹುಶಃ ಅವರು ಇನ್ಮುಂದೆ ಪುರುಷ ಪ್ರಧಾನ ಸಿನಿಮಾಗಳನ್ನು ಮಾತ್ರ ಮಾಡಲು ಬದಲಾಗುತ್ತಾರೆಯೇ? ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನವನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ. ತುಂಬಾ ಕಷ್ಟ. ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಭಿನಂದನೆಗಳು ವರುಣ್ ಧವನ್' ಎಂದು ವ್ಯಂಗ್ಯ ವಾಡಿದ್ದಾರೆ.

ಪುರುಷ ಪ್ರಧಾನ ವ್ಯಸ್ಥೆಯನ್ನು ಅಣಕಿಸಿದ ಶ್ರದ್ಧಾ
ಮದುವೆಯ ಬಳಿಕ ನಟಿಮಣಿಯರಿಗೆ ಎದುರಾಗುವ ಪ್ರಶ್ನೆಗಳನ್ನು ವರುಣ್ ಧವನ್ ಗೆ ಹೇಳುವ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯನ್ನು ಅಣಕಿಸಿದ್ದಾರೆ. ನಟಿಯರು ಮದುವೆಯಾದ ಬಳಿಕ ವೃತ್ತಿ ಜೀವನ ಕೊನೆೆಯಾಯಿತು, ಗಂಡನ ಮನೆಯವರ ಅನುಮತಿ ಪಡೆಯಬೇಕು ಎನ್ನುವ ಮಾತುಗಳು ಬರುತ್ತಿವೆ. ಹಾಗಾಗಿ ವರುಣ್ ಧವನ್ ಮದುವೆಯನ್ನು ಶ್ರದ್ಧಾ ವ್ಯಂಗ್ಯವಾಡಿದ್ದಾರೆ.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm