ಬ್ರೇಕಿಂಗ್ ನ್ಯೂಸ್
11-02-21 12:28 pm Source: FILMIBEAT Bharath Kumar K ಸಿನಿಮಾ
2020ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಪಟ್ಟವನ್ನು ತೆಲಂಗಾಣ ಮೂಲದ ಮಾನಸ ವಾರಣಾಸಿ ಮುಡಿಗೇರಿಸಿಕೊಂಡಿದ್ದಾರೆ. ಫೆಬ್ರವರಿ 11 ರಂದು ಸಂಜೆ ಮಿಸ್ ಇಂಡಿಯಾ ವಿನ್ನರ್ ಹೆಸರು ಪ್ರಕಟಿಸಲಾಯಿತು. 2019ರ ಮಿಸ್ ಇಂಡಿಯಾ ರಾಜಸ್ಥಾನದ ಸುಮನ್ ರತನ್ ಸಿಂಗ್ ರಾವ್ ಅವರು ನೂತನ ಮಿಸ್ ಇಂಡಿಯಾ ಮಾನಸ ಅವರಿಗೆ 'ಮಿಸ್ ಇಂಡಿಯಾ 2020' ಪಟ್ಟಾಭಿಷೇಕ ಮಾಡಿದರು. ಮಾನಸ ವಾರಣಾಸಿ ತೆಲಂಗಾಣದ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಬುಧವಾರ ರಾತ್ರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಇಂಜಿನಿಯರ್ ಪದವಿ ಮುಗಿಸಿರುವ ಮಾನಸ ವೃತ್ತಿಯಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿ ಆಗಿದ್ದಾರೆ.

ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರವೇಶ
2021ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತದಿಂದ 23 ವರ್ಷದ ಮಾನಸ ವಾರಣಾಸಿ ಆಯ್ಕೆಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯುವ ಐತಿಹಾಸಿಕ 70ನೇ ವರ್ಷದ ಮಿಸ್ ವರ್ಲ್ಡ್ ವೇದಿಕೆಯಲ್ಲಿ ಮಾನಸ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಾನಸ ವಾರಣಾಸಿ ಕುರಿತು
ಮಾನಸ ವಾರಣಾಸಿ ಪುಸ್ತಕಗಳನ್ನು ಓದುವುದು, ಸಂಗೀತ ಮತ್ತು ಯೋಗ ಅಭ್ಯಾಸ ಸೇರಿದಂತೆ ಹಲವು ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಾನಸಾ ಬಹಳ ನಾಚಿಕೆ ಸ್ವಭಾವದ ಮಗುವಾಗಿದ್ದಳು. ಬೆಳೆಯುತ್ತಿದ್ದಂತೆ ಭರತನಾಟ್ಯ ಮತ್ತು ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡಿದರು. ಈ ಕಲಾ ಪ್ರಕಾರಗಳು ಮಾನಸಾ ಅವರ ಜೀವನದಲ್ಲಿ ಧೈರ್ಯ ಮತ್ತು ಸ್ವಯಂ ಆತ್ಮವಿಶ್ವಾಸ ಹೆಚ್ಚಾಗಲು ಸಹಕಾರಿಯಾಗಿದೆ ಹಾಗೂ ಪ್ರಮುಖ ಪಾಠಗಳನ್ನು ಕಲಿಸಿದೆ ಎಂದು ಮಿಸ್ ಇಂಡಿಯಾ ವರದಿ ಮಾಡಿದೆ.

ರನ್ನರ್ ಅಪ್ ಯಾರು?
ಮಾನಸ ವಾರಣಾಸಿ ಮಿಸ್ ಇಂಡಿಯಾ ವಿನ್ನರ್ ಆಗಿದ್ದರೆ, ಹರಿಯಾಣದ ಮಾನಿಕಾ ಶಿಯೋಕಾಂಡ್ 'ಮಿಸ್ ಗ್ರ್ಯಾಂಡ್ ಇಂಡಿಯಾ 2020' ಪಟ್ಟ ಪಡೆದುಕೊಂಡರು. ಮತ್ತು ಉತ್ತರ ಪ್ರದೇಶದ ಮಾನ್ಯಾ ಸಿಂಗ್ 'ಮಿಸ್ ಇಂಡಿಯಾ 2020 ರನ್ನರ್ ಅಪ್' ಆಗಿ ಕಿರೀಟವನ್ನು ಪಡೆದುಕೊಂಡರು.

ಜ್ಯೂರಿಗಳು ಯಾರಿದ್ದರು?
ಅಂದ್ಹಾಗೆ, ಮಿಸ್ ಇಂಡಿಯಾ 2020 ಸ್ಪರ್ಧೆಗೆ ತೀರ್ಪುಗಾರರಾಗಿ ನಟಿ ನೇಹಾ ಧೂಪಿಯಾ, ಚಿತ್ರಾಂಗದ ಸಿಂಗ್, ಪುಲ್ಕಿತ್ ಸಾಮ್ರಾಟ್ ಮತ್ತು ಖ್ಯಾತ ಡಿಸೈನರ್ ಡ್ಯೂ ಫಾಲ್ಗುನಿ ಮತ್ತು ಶೇನ್ ಪೀಕಾಕ್ ಅವರಂತಹ ಸೆಲೆಬ್ರಿಟಿಗಳನ್ನು ಒಳಗೊಂಡಿತ್ತು. ಈ ಐವರ ಸಮಿತಿಯೂ ಮಿಸ್ ಇಂಡಿಯಾ ಫಲಿತಾಂಶ ನಿರ್ಧರಿಸಿದೆ.
Photo Gallery: 'ಮಿಸ್ ಇಂಡಿಯಾ 2020' ಪ್ರಶಸ್ತಿ ಗೆದ್ದ ತೆಲಂಗಾಣ ಸುಂದರಿ ಮಾನಸ
This News Article is a Copy of FILMIBEAT
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
29-09-26 01:25 pm
HK News Staffer
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
29-09-26 03:48 pm
HK News Staffer
ಕರಂಗಲ್ಪಾಡಿಯಲ್ಲಿ ಅಪಘಾತ ; ನ್ಯಾಯಾಧೀಶರಿದ್ದ ಕಾರಿಗೆ...
29-09-26 01:22 pm
ಪತಿಯನ್ನು ಬಿಟ್ಟು ಪ್ರತ್ಯೇಕ ವಾಸ ; ಮಾಂಸದಂಗಡಿ ಮಾಲೀ...
29-09-26 09:20 am
ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು...
28-09-26 11:03 pm
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm