ಬ್ರೇಕಿಂಗ್ ನ್ಯೂಸ್
01-03-21 03:00 pm Source: FILMIBEAT ಸಿನಿಮಾ
ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಆರಂಭವಾಗಿದ್ದು, ಹದಿನೇಳು ಸ್ಪರ್ಧಿಗಳು ಈಗಾಗಲೇ ದೊಡ್ಮನೆ ಪ್ರವೇಶಿಸಿದ್ದಾರೆ. ಭಾನುವಾರ ಸಂಜೆ ಅದ್ಧೂರಿಯಾಗಿ ನಡೆದ ಓಪನಿಂಗ್ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳು 'ಬಿಗ್' ಮನೆ ಸೇರಿದ್ದಾರೆ.
ಈ ಆವೃತ್ತಿಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು, ಕಿರುತೆರೆ ಕಲಾವಿದರು ಹಾಗೂ ಸಿನಿಮಾ ನಟರು ಹೆಚ್ಚಿದ್ದಾರೆ. ಹದಿನೇಳು ಸ್ಪರ್ಧಿಗಳು, ನೂರು ದಿನ, ಅರ್ಧಕೋಟಿ ರೂಪಾಯಿಗಾಗಿ ಪೈಪೋಟಿ ನಡೆಸಲಿದ್ದಾರೆ. ಮಾರ್ಚ್ 1 ರಿಂದ ಪ್ರತಿದಿನದ ಸಂಚಿಕೆ ಪ್ರಸಾರವಾಗಲಿದೆ. ಸೋಮವಾರ ಎಪಿಸೋಡ್‌ಗೂ ಮುಂಚೆ ಪ್ರೋಮೋವೊಂದು ರಿಲೀಸ್ ಆಗಿದ್ದು, ಮೊದಲ ದಿನದಲ್ಲೇ ದಿವ್ಯ ಸುರೇಶ್ ಅವರು ಮಂಜುಪಾವಗಡ ಹೃದಯ ಕದ್ದಿದ್ದಾರೆ. ಮುಂದೆ ಓದಿ...
ಮಂಜು ಹೃದಯ ಕದ್ದ ದಿವ್ಯ ಸುರೇಶ್
ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯ ಮೊದಲ ದಿನದ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋ ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ನಡುವಿನ ಸಂಭಾಷಣೆಯಾಗಿದ್ದು, ದಿವ್ಯ ಮಾತಿಗೆ ಮಜಾಭಾರತ ಮಂಜು ಫಿದಾ ಆಗಿದ್ದಾರೆ.
ನಿಮಗೋಸ್ಕರ ಏನು ಬೇಕಾದರು ಮಾಡ್ತೀನಿ
ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಸ್ಪರ್ಧಿಗಳ ತಮ್ಮ ಲಗೇಜ್‌ಗಳನ್ನು ಪಡೆದುಕೊಂಡು ಜೋಡಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ದಿವ್ಯ ಸುರೇಶ್ ಅವರ ಬಳಿ ಬಂದ ಮಂಜು ಪಾವಗಡ, ''ನಿಮಗೆ ಏನು ಬೇಕು ಕೇಳಿ, ನಿಮಗೋಸ್ಕರ ಏನು ಬೇಕಾದರೂ ಮಾಡ್ತೀನಿ' ಅಂದರು. ಬಳಿಕ, ''ನಿಮ್ಮ ಕೈಯಲ್ಲಿ ಕೆಲಸ ಮಾಡಿಸಿ ಕಷ್ಟ ಕೊಡಲ್ಲ, ನಿಮ್ಮ ಕೈಗಳಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ'' ಎಂದುಬಿಟ್ಟರು.
ಏನೋ ಏನೋ ಆಗಿದೆ...
''ನಿಮ್ಮ ಕೈಗಳಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ'' ಎಂದು ದಿವ್ಯ ಸುರೇಶ್ ಅವರ ಮಾತು ಮಂಜು ಪಾವಗಡ ಹೃದಯ ಸ್ಪರ್ಶಿಸಿದೆ. ಇದೇ ಸಮಯಕ್ಕೆ ಬ್ಯಾಕ್ ಗ್ರೌಂಡ್‌ನಲ್ಲಿ ''ಏನೋ ಏನೋ ಆಗಿದೆ'' ಹಾಡು ಬೇರೆ ಹಾಕಿಬಿಟ್ಟಿದ್ದಾರೆ. ಇದರ ಮುಂದುವರಿದ ಭಾಗವನ್ನು ಇಂದಿನ ಸಂಚಿಕೆ ರಾತ್ರಿ 9.30ಕ್ಕೆ ನೋಡಬಹುದು.

ಯಾರು ಈ ದಿವ್ಯಾ ಸುರೇಶ್?
ದಿವ್ಯ ಸುರೇಶ್ ರೂಪದರ್ಶಿ, ಸಿನಿಮಾ ನಟಿ. 2017ರಲ್ಲಿ 'ಸೌತ್ ಇಂಡಿಯಾ ಮಿಸ್' ಪಟ್ಟ ಗೆದ್ದಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ದಿವ್ಯ ಸುರೇಶ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ನರೇಂದ್ರ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. 2019ರಲ್ಲಿ ತೆರೆಕಂಡ ''ಡಿಗ್ರಿ ಕಾಲೇಜ್'' ಮೂಲಕ ಟಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದರು.
This News Article Is A Copy Of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm