ಬ್ರೇಕಿಂಗ್ ನ್ಯೂಸ್
04-03-21 11:41 am Source: FILMIBEAT ಸಿನಿಮಾ
ಬಿಗ್‌ಬಾಸ್ ಮನೆ ದಿನದಿಂದ ದಿನಕ್ಕೆ ಬಿಸಿ ಏರುತ್ತಿದೆ. ಮೊದಲ ಎರಡು ದಿನ ಹಾಸ್ಯ-ನಗು ತುಂಬಿಕೊಂಡಿದ್ದ ಮನೆಯಲ್ಲಿ ಸಣ್ಣದಾಗಿ ಮನಸ್ತಾಪ, ಕೋಪ, ದೂರು, ಜಗಳಗಳು ಏಳುತ್ತಿವೆ.
ನಿನ್ನೆಯ (ಬುಧವಾರ) ಎಪಿಸೋಡ್‌ನಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ಬ್ರೋ ಗೌಡನ ನಡುವೆ ಈಗಾಗಲೇ ಜಗಳವಾಗಿದ್ದನ್ನು ಪ್ರೇಕ್ಷಕರು ನೋಡಿದ್ದಾರೆ. ಗುರುವಾರದ ರಾತ್ರಿಯ ಎಪಿಸೋಡ್‌ನಲ್ಲಿ ಇನ್ನೂ ಭಾರಿ ದೊಡ್ಡ ಜಗಳವೇ ನಡೆಯಲಿದೆ.
ಹೌದು, ಇಬ್ಬರು ಮಹಿಳಾ ಸ್ಪರ್ಧಿಗಳು ಪರಸ್ಪರ ಕುಸ್ತಿಗೆ ಬಿದ್ದಿದ್ದಾರೆ ಆದರೆ ಇದು ಯಾವುದೇ ಜಗಳ ಕಾರಣಕ್ಕೆ ಅಲ್ಲ ಬದಲಿಗೆ ಟಾಸ್ಕ್‌ನ ಕಾರಣಕ್ಕೆ. ಇಬ್ಬರು ಮಹಿಳಾ ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಿರುವ ಪ್ರೋಮೊ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಕುತೂಹಲ ದುಪ್ಪಟ್ಟಾಗಿದೆ.
ಕಿತ್ತಾಡಿದ ಧನುಶ್ರಿ-ದಿವ್ಯಾ ಸುರೇಶ್
ಸ್ಪರ್ಧಿಗಳಾದ ದಿವ್ಯಾ ಸುರೇಶ್ ಹಾಗೂ ಟಿಕ್‌ಟಾಕ್ ಸ್ಟಾರ್ ಧನುಶ್ರಿ ಅವರು ಟಾಸ್ಕ್‌ನಲ್ಲಿ ಗೆಲ್ಲಲು ಆಟವೊಂದನ್ನು ಆಡುತ್ತಿದ್ದು, ಆಟದಲ್ಲಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಈ ಕಿತ್ತಾಟ ಬಹು ತೀವ್ರವಾಗಿಯೇ ಇದೆ. ಇಬ್ಬರೂ ಸ್ಪರ್ಧಿಗಳು ಒಬ್ಬರನ್ನೊಬ್ಬರು ಎಳೆದಾಡಿ-ತಳ್ಳಾಡಿ ಹಿಡಿದು ಬೀಳಿಸಿ ಆಟದಲ್ಲಿ ಗೆಲ್ಲುವ ಪ್ರಯತ್ನ
ಬಿಗ್‌ಬಾಸ್ ಕೊಟ್ಟಿದ್ದಾರೆ ಅವಕಾಶ
ಧನುಶ್ರಿ ಈಗಾಗಲೇ ನಾಮಿನೇಟ್ ಆಗಿದ್ದು, ಗೀತಾ ಭಟ್ ಅವರ ಮೇಲೆ ಆಟದಲ್ಲಿ ಸೋತು ಸೇಫ್ ಜೋನ್‌ಗೆ ಹೋಗಲು ಇದ್ದ ಒಂದು ಅವಕಾಶವನ್ನು ಕಳೆದುಕೊಂಡಿದ್ದಾರೆ. ಆದರೆ ಬಿಗ್‌ಬಾಸ್ ಕೊಟ್ಟಿರುವ ಮತ್ತೊಂದು ಅವಕಾಶದಲ್ಲಿ ದಿವ್ಯಾ ಸುರೇಶ್ ಎದುರು ಆಡಿದ್ದಾರೆ ಧನುಶ್ರಿ.
ಚೆಂಡಿಗಾಗಿ ಧನುಶ್ರಿ-ದಿವ್ಯಾ ಸುರೇಶ್ ಕಿತ್ತಾಟ
ಕೋರ್ಟ್‌ನ ಮಧ್ಯದಲ್ಲಿರುವ ಚೆಂಡನ್ನು ಇಬ್ಬರು ಸ್ಪರ್ಧಿಗಳು ಬೇಗನೇ ಎತ್ತಿಕೊಂಡು ಎದುರಾಳಿ ಅಂಗಳದಲ್ಲಿರುವ ಬಾಸ್ಕೆಟ್‌ಗೆ ಹಾಕುವ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದಾರೆ. ಬಾಸ್ಕೆಟ್ ಬಾಲ್ ಆಟದ ಮಾದರಿಯಲ್ಲಿಯೇ ಈರುವ ಆಟವನ್ನು ಧನುಶ್ರಿ ಹಾಗೂ ದಿವ್ಯಾ ಇಬ್ಬರೂ ಬಹಳ ಬಲಪ್ರಯೋಗಿಸಿ ಆಡುತ್ತಿರುವುದು ಪ್ರೋಮೋ ನಲ್ಲಿ ಗೊತ್ತಾಗುತ್ತಿದೆ.
ಗಾಯಗೊಂಡ ದಿವ್ಯಾ ಸುರೇಶ್
ಪ್ರೊಮೋದಲ್ಲಿ ಕಾಣುತ್ತಿರುವಂತೆ ಈ ಆಟದಲ್ಲಿ ದಿವ್ಯಾಗೆ ದೊಡ್ಡ ಪೆಟ್ಟೇ ಆಗಿದೆ. ದಿವ್ಯಾ ಅವರ ಕಾಲಿಗೆ ಏಟಾಗಿ ರಕ್ತ ಹರಿದಿದೆ. ಮನೆಯ ಇತರ ಸ್ಪರ್ಧಿಗಳು ದಿವ್ಯಾ ಅವರ ಶುಶ್ರೂಶೆಯಲ್ಲಿ ತೊಡಗಿದ್ದಾರೆ. ಆಟದ ಅಂತ್ಯದ ಫಲಿತಾಂಶ ಏನಾಯಿತು. ಧನುಶ್ರಿ ಸೇಫ್ ಆದರಾ ಅಥವಾ ದಿವ್ಯಾ ಸೇಫ್ ಆದರಾ ಎಂಬುದು ಗುರುವಾರ ರಾತ್ರಿ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.
This News Article Is A Copy Of FILMIBEAT
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm