ಬ್ರೇಕಿಂಗ್ ನ್ಯೂಸ್
07-03-21 03:34 pm Source: FILMIBEAT ಸಿನಿಮಾ
ಸ್ಯಾಂಡಲ್ ವುಡ್ ಪ್ರಿನ್ಸೆಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ವಸಂತಕ್ಕೆ ಕಾಲಿಡುತ್ತಿರುವ ಸಡಗರದಲ್ಲಿದ್ದಾರೆ ನಟಿ ರಾಧಿಕಾ ಪಂಡಿತ್. ಈ ಸಂಭ್ರಮ-ಸಡಗರದಲ್ಲಿ ತಮ್ಮೆಲ್ಲ ಪ್ರೀತಿಯ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಒಂದು ಪತ್ರ ಬರೆದಿದ್ದಾರೆ.
ರಾಧಿಕಾ ಪಂಡಿತ್ ಬರೆದಿರುವ ಪತ್ರದಲ್ಲಿ ಏನಿದೆ.?
''ನಮಸ್ಕಾರ ಎಲ್ಲರಿಗೂ..
ಪ್ರತಿ ವರ್ಷ ಬೇರೆ ಜಾಗಗಳಿಂದ ಬೇರೆ ಊರಿನಿಂದ ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡಲು ಭೇಟಿ ಮಾಡಲು ಬರುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಲಿಲ್ಲ. ಕೊರೊನಾ ಎಲ್ಲೆಡೆ ಇರುವುದರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತುಂಬಾ ಕಾಡುತ್ತಿದೆ. ಈ ಬಾರಿ ಯಾವುದೇ ಆಚರಣೆ ಮನೆಯ ಬಳಿ ಇರುವುದಿಲ್ಲ. ದಯವಿಟ್ಟು ಯಾರೂ ಬೇಜಾರಾಗಬೇಡಿ. ಆದರೂ ನಿಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಮೆಸೇಜ್ ನೋಡುತ್ತಿದ್ದೇನೆ. ಸಾಧ್ಯವಾದಷ್ಟು ರಿಪ್ಲೈ ಕೊಡುತ್ತೇನೆ. ಮತ್ತು ಎಲ್ಲಾ ಪ್ರೀತಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ - ನಿಮ್ಮ ರಾಧಿಕಾ ಪಂಡಿತ್'' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪ್ರತಿ ವರ್ಷ ಆಚರಣೆ
ಜನ್ಮದಿನದ ಸಡಗರವನ್ನು ರಾಧಿಕಾ ಪಂಡಿತ್ ಪ್ರತಿ ವರ್ಷ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುತ್ತಿದ್ದರು. ಅಭಿಮಾನಿಗಳು ತರುತ್ತಿದ್ದ ಕೇಕ್ ಕಟ್ ಮಾಡುವ ಮೂಲಕ ಖುಷಿ ಪಡುತ್ತಿದ್ದರು ರಾಧಿಕಾ ಪಂಡಿತ್. ಆದ್ರೀಗ ಕೋವಿಡ್ ಇರುವ ಕಾರಣ ಅಭಿಮಾನಿಗಳ ಜೊತೆಗಿನ ಬರ್ತಡೇ ಸೆಲೆಬ್ರೇಷನ್ ಗೆ ರಾಧಿಕಾ ಪಂಡಿತ್ ಬ್ರೇಕ್ ಹಾಕಿದ್ದಾರೆ.
ಫ್ಯಾಮಿಲಿ ಜೊತೆಗೆ ಬರ್ತಡೇ
ಪತಿ ರಾಕಿಂಗ್ ಸ್ಟಾರ್ ಯಶ್, ಪುತ್ರ ಯಥರ್ವ್, ಪುತ್ರಿ ಆಯ್ರಾ ಹಾಗೂ ತಂದೆ-ತಾಯಿ ಜೊತೆಗೆ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ರಾಧಿಕಾ ಪಂಡಿತ್.
ಅಂದ್ಹಾಗೆ, ಪುಟಾಣಿ ಮಕ್ಕಳ ಆರೈಕೆಯಲ್ಲೇ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಯಾವ ಚಿತ್ರವನ್ನೂ ಸದ್ಯಕ್ಕೆ ಒಪ್ಪಿಕೊಂಡಿಲ್ಲ. 'ಆದಿಲಕ್ಷ್ಮಿ ಪುರಾಣ' ಚಿತ್ರದ ಬಳಿಕ ಯಾವುದೇ ಚಿತ್ರಕ್ಕೆ ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
This News Article Is A Copy Of FILMIBEAT
15-04-21 10:27 pm
Headline Karnataka News Network
ಕರ್ನಾಟಕದಿಂದ ಕುಂಭಮೇಳಕ್ಕೆ ಹೋಗಿ ಬಂದವರಿಗೆ ಕೊವಿಡ್...
15-04-21 05:37 pm
ಎಕ್ಸಲೆಂಟ್ ಎಲಿವೇಟರ್ ; ಲಿಫ್ಟ್ ಕಂಪನಿಗಳಿಗೇ ಹೊಸ ಮ...
15-04-21 03:18 pm
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ಜನ...
15-04-21 02:33 pm
ಧಾರವಾಡದ ಆಫೋಸ್ ಮಾವುಗಳಿಗೆ ಭಾರೀ ಡಿಮ್ಯಾಂಡ್ ; ಮೊದಲ...
15-04-21 02:22 pm
15-04-21 10:15 pm
Headline Karnataka News Network
ಕೊರೊನಾ ಸೋಂಕು ಹೆಚ್ಚಳ ; NEET ಪಿಜಿ ಪರೀಕ್ಷೆ ಮುಂದೂ...
15-04-21 09:29 pm
ತಿಹಾರ್ ಜೈಲಿನಿಂದ ಸಾವಿರಾರು ಕೈದಿಗಳು ಮಿಸ್ಸಿಂಗ್ ;...
15-04-21 05:27 pm
ಕೊರೊನಾ ಹಾಟ್ ಸ್ಪಾಟ್ ಆಗ್ತಿದ್ಯಾ ಕುಂಭಮೇಳ ! 1700 ಜ...
15-04-21 05:16 pm
ಸಂಸತ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿದ ಸಂಸದ ; ವರ್...
15-04-21 02:06 pm
15-04-21 04:57 pm
Mangalore Correspondent
ಸರಿರಾತ್ರಿಯಲ್ಲಿ ಗಾಳಿ ಮಳೆಗೆ ಹಡಗು ಕಾಣಲೇ ಇಲ್ಲ.. ಬ...
15-04-21 11:34 am
ಜೋಕಟ್ಟೆ ; ಗೂಡ್ಸ್ ರೈಲಿನ ಮೇಲಕ್ಕೇರಿ ಡೇಂಜರಸ್ ಸೆಲ್...
14-04-21 10:03 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟಿದ್ದೇ...
14-04-21 06:56 pm
ಪೊಳಲಿ ಜಾತ್ರೆಯಲ್ಲಿ ಕಳಕೊಂಡ ಚಿನ್ನಾಭರಣ ; ಹಿಂತಿರುಗ...
14-04-21 03:35 pm
15-04-21 05:51 pm
Mangalore Correspondent
ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ಕ್ರೂರಿ ವಾರ್ಡ್ ಬಾಯ...
15-04-21 03:30 pm
ಮಗಳ ಅತ್ಯಾಚಾರಕ್ಕೆ ರಿವೇಂಜ್ ತೀರಿಸಿದ ತಂದೆ ; ಒಂದೇ...
15-04-21 03:27 pm
30 ಕೇಜಿ ಹೆರಾಯಿನ್ ಸಹಿತ ಗುಜರಾತ್ ಕರಾವಳಿಗೆ ಬಂದ ಪಾ...
15-04-21 02:53 pm
84 ಲಕ್ಷ ಮೌಲ್ಯದ ಗಾಂಜಾ ಜಪ್ತಿ ; ಇಬ್ಬರ ಬಂಧನ
14-04-21 03:15 pm