ಬ್ರೇಕಿಂಗ್ ನ್ಯೂಸ್
14-03-21 02:14 pm Source: FILMIBEAT ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿದೆ. ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದ ಸಿನಿಮಾ ಮೊದಲ ದಿನ ಒಟ್ಟು 20 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿತ್ತು. ರಾಬರ್ಟ್ ವಿಜಯಯಾತ್ರೆ ಮುಂದುವರೆದಿದ್ದು, ಎರಡನೇ ದಿನ ಸಹ ದಾಖಲೆಯ ಹಣ ಬಾಚಿಕೊಂಡಿದೆ.
ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ರಾಬರ್ಟ್ 3ನೇ ದಿನದ ಗಳಿಕೆ ಸಹ ಅಚ್ಚರಿ ಮೂಡಿಸಿದೆ. ರಾಬರ್ಟ್ ಪೈರಸಿ: 'ಬಿಗ್ ಬ್ರದರ್ಸ್' ವಿರುದ್ಧ ಉಮಾಪತಿ ಶ್ರೀನಿವಾಸ್ ಗುಡುಗು ರಾಬರ್ಟ್ 3ನೇ ದಿನವೂ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮೂರನೇ ದಿನ ರಾಬರ್ಟ್ 14.10 ಕೋಟಿ ರೂ. ಗಳಿಕೆ ಮಾಡುವ ಮೂಲಕ ದಾಖಲೆ ಮಾಡಿದೆ.
ಕನ್ನಡ ಸಿನಿಮಾವೊಂದು ಅದರಲ್ಲೂ ಕೊರೊನಾ ಬಳಿಕ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ನೋಡಿ ಸ್ಯಾಂಡಲ್ ವುಡ್ ಬೆರಗಾಗಿದೆ. ಮೂರು ದಿನಗಳಲ್ಲಿ ರಾಬರ್ಟ್ ಒಟ್ಟು ಗಳಿಸಿದ್ದೆಷ್ಟು, ಜಿಲ್ಲಾವಾರು ಕಲೆಕ್ಷನ್ ಎಷ್ಟು? ಎನ್ನುವ ವಿವರ ಇಲ್ಲಿದೆ.
3ನೇ ದಿನ 14.10 ಕೋಟಿ ರೂ. ಗಳಿಕೆ
ರಾಬರ್ಟ್ ಸಿನಿಮಾ 3ನೇ ದಿನವೂ ಭರ್ಜರಿ ಕಮಾಯಿ ಮಾಡಿದೆ. ಈಗಾಗಲೇ ಕೋಟಿ ಕೋಟಿ ಜೇಬಿಗಿಳಿಸಿರುವ ನಿರ್ಮಾಪಕರಿಗೆ 3ನೇ ದಿನದ ಗಳಿಕೆ ಸಹ ಭರ್ಜರಿಯಾಗಿ ಸಿಕ್ಕಿದೆ. ಕರ್ನಾಟಕದಲ್ಲಿ ರಾಬರ್ಟ್ 14.10 ಕೋಟಿ ರೂ. ಗಳಿಕೆ ಮಾಡಿದೆ.
ಜಿಲ್ಲಾವಾರು ಕಲೆಕ್ಷನ್
ಬೆಂಗಳೂರು, ಕೋಲಾರ ಮತ್ತು ತುಮಕೂರು ಹಾಗೂ ಸೌತ್ ಕೆನರಾ ಭಾಗರದಲ್ಲಿ ಒಟ್ಟು 6 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನು ಮೈಸೂರು, ಮಂಡ್ಯ, ಹಾಸನ್ ಭಾಗದಲ್ಲಿ 2.5 ಕೋಟಿ ರೂ. ಗಳಿಸಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 1.10 ಕೋಟಿ ರೂ., ಶಿವಮೊಗ್ಗದಲ್ಲಿ 1ಲಕ್ಷ, ಹೈದರಾಬಾದ್ ಕರ್ನಾಟಕ 2 ಕೋಟಿ ಮತ್ತು ಬಾಂಬೆ ಕರ್ನಾಟಕ ಭಾಗದಲ್ಲಿ 2 ಕೋಟಿ ರೂ. ಕಲೆಕ್ಷನ್ ಆಗಿದೆ.
ರಾಬರ್ಟ್ ಇದುವರೆಗಿನ ಗಳಿಕೆ ಎಷ್ಟು?
ರಾಬರ್ಟ್ ಸಿನಿಮಾ ರಿಲೀಸ್ ಆಗಿ 3ದಿನಗಳಾಗಿದ್ದು, ಕರ್ನಾಕಟದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಇದುವರೆಗೂ ರಾಬರ್ಟ್ 44.12 ಕೋಟಿ ರೂ. ಗಳಿಕೆ ಮಾಡಿದ್ದು, ಕನ್ನಡದಲ್ಲಿ ಅತಿ ವೇಗದಲ್ಲಿ ಇಷ್ಟು ಮೊತ್ತದ ಕಲೆಕ್ಷನ್ ಮಾಡಿರುವ ಮೊದಲ ಸಿನಿಮಾ ಇದಾಗಿದೆ. ವೀಕೆಂಡ್ ಬಂದಿರುವುದರಿಂದ ಇವತ್ತಿನ ಕಲೆಕ್ಷನ್ ಕೂಡ ಕುತೂಹಲ ಮೂಡಿಸಿದ್ದು, ನಾಲ್ಕು ದಿನಗಳಲ್ಲೇ 50 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ನಿರ್ಮಿಸಲಿದೆ.

ಆಂಧ್ರ-ತೆಲಂಗಾಣದ ಲೆಕ್ಕ
ರಾಬರ್ಟ್ ಸಿನಿಮಾ ಕರ್ನಾಟಕದ ಜೊತೆಗೆ ಆಂಧ್ರ ಮತ್ತು ತೆಲಂಗಾಣದಲ್ಲೂ ಅದ್ದೂರಿಯಾಗಿ ತೆರೆಗೆ ಬಂದಿದೆ. ದರ್ಶನ್ ಸಿನಿಮಾ ತೆಲುಗಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವುದು ಇದೇ ಮೊದಲು. ಆಂಧ್ರ ಮತ್ತು ತೆಲಂಗಾಣದಲ್ಲಿ ಮೊದಲ ದಿನದ ಕಲೆಕ್ಷನ್ ಉತ್ತಮವಾಗಿತ್ತು. ಆದರೆ ನಂತರದ ದಿನಗಳ ಕಲೆಕ್ಷನ್ ರಿಪೋರ್ಟ್ ಬಹಿರಂಗವಾಗಿಲ್ಲ. ತೆಲುಗಿನಲ್ಲೂ ಭರ್ಜರಿ ಕಲೆಕ್ಷನ್ ಆಗಿರುವ ಸಾಧ್ಯತೆ ಇದೆ.
This News Article Is A Copy Of FILMIBEAT
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm