ಬ್ರೇಕಿಂಗ್ ನ್ಯೂಸ್
22-03-21 11:57 am Source: FILMIBEAT ಸಿನಿಮಾ
ಕೊರೊನಾ ಲಾಕ್‌ಡೌನ್ ನಂತರ ನಟ ಸೋನು ಸೂದ್ ಎಂಬ 'ಖಳನಟ'ನ ಮಾನವೀಯ ಮುಖ ದೇಶಕ್ಕೆ ಪರಿಚಯವಾಯ್ತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರು, ಬಡವರ ಪಾಲಿಗೆ ದೇವರಂತೆ ಒದಗಿಬಂದ ಸೋನು ಸೂದ್, ಲಾಕ್‌ಡೌನ್‌ನಿಂದಾಗಿ ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಮಂದಿಯನ್ನು ತಮ್ಮದೇ ಖರ್ಚಿನ ಮೂಲಕ ಅವರವರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದರು. ಕೊರೊನಾ ಸಮಯದಲ್ಲಿ ಸೋನು ಸೂದ್ ಮಾಡಿದ ಕಾರ್ಯ ದೇಶವ್ಯಾಪಿ ಪ್ರಶಂಸೆಗೆ ಪ್ರಾಪ್ತಿಯಾಯಿತು. ಖಳನಟನ ಪಾತ್ರಗಳಲ್ಲಿ ನಟಿಸುತ್ತಿದ್ದ ಸೋನು ಸೂದ್ ನಿಜಜೀವನದಲ್ಲಿ 'ಹೀರೋ' ಎಂಬುದು ಮನದಟ್ಟಾಯಿತು.
ಇದೀಗ ಜನಪ್ರಿಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಸೋನು ಸೂದ್‌ಗೆ ಗೌರವ ಸೂಚಿಸಲೆಂದು, ತನ್ನ ವಿಮಾನದ ಮೇಲೆ ದೊಡ್ಡದಾಗಿ ಸೋನು ಸೂದ್‌ರ ಚಿತ್ರವನ್ನು ಪ್ರಕಟಿಸಿದೆ. ಜೊತೆಗೆ 'ಸಂರಕ್ಷಕ ಸೋನು ಸೂದ್‌ಗೆ ಸೆಲ್ಯೂಟ್' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದಾರೆ. ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸೋನು ಸೂದ್,
'ಪಂಜಾಬ್‌ನ ಮೋಗಾ ದಿಂದ ಮುಂಬೈಗೆ ರಿಸರ್ವ್ ಇಲ್ಲದ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದಿದ್ದು ಇನ್ನೂ ನೆನಪಿದೆ. ಈ ಪ್ರೀತಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ. ನನ್ನ ಪೋಷಕರನ್ನು ನಾನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ ಸೋನು.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಅವರ ರೈಲ್ವೆ ಪಾಸ್‌ನ ಚಿತ್ರವೊಂದು ವೈರಲ್ ಆಗಿತ್ತು. ರೈಲಿನಲ್ಲಿ ಓಡಾಡಲು ಕಷ್ಟಪಡುತ್ತಿದ್ದ ಸೋನು ಸೂದ್ ಇಂದು ಸಾವಿರಾರು ಜನರನ್ನು ವಿಮಾನಗಳ ಮೂಲಕ ಮನೆಗಳಿಗೆ ಕಳಿಸುತ್ತಿದ್ದಾರೆ ಎಂಬ ವಾಕ್ಯಗಳೊಂದಿಗೆ ಆ ಚಿತ್ರ ಸಖತ್ ವೈರಲ್ ಆಗಿತ್ತು. ಮುಂಬೈನ ಲೋಕಲ್ ರೈಲಿನಲ್ಲಿ ಪಾಸ್ ಪಡೆದು ಓಡಾಡುತ್ತಿದ್ದ ಸೋನು ಸೂದ್ ಚಿತ್ರ ಇಂದು ವಿಮಾನದ ಮೇಲೆ ಮದ್ರಿತವಾಗಿದೆ.
This News Article Is A Copy Of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm