ಬ್ರೇಕಿಂಗ್ ನ್ಯೂಸ್
31-07-20 03:26 pm Headline Karnataka News Network ಸಿನಿಮಾ
ಮುಂಬೈ: ಬಾಲಿವುಡ್ ನಟನ ಮಗಳ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಯುವಕನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮುಂಬೈನ ಮಲಾಡ್ ನಿವಾಸಿ ಕುಮೇಲ್ ಹನೀಫ್ ಪಟಾನಿ (25) ಎಂದು ಗುರುತಿಸಲಾಗಿದೆ. ಒಂದು ವೇಳೆ ಹಣ ಕೊಡದಿದ್ದರೆ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿಯ ಮಗಳಿಗೆ ಆರೋಪಿ ಇನ್‍ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದನು. ಕಾಲೇಜು ದಿನಗಳಿಂದ ನೀನು ನನಗೆ ಗೊತ್ತು. ನಿನ್ನ ಕೆಲವು ಖಾಸಗಿ ಫೋಟೋಗಳು ನನ್ನ ಬಳಿ ಇವೆ. ಹೀಗಾಗಿ ನಾನು ಕೇಳಿದಷ್ಟು ಹಣ ಕೊಡಬೇಕು. ಒಂದು ವೇಳೆ ಹಣ ಕೊಡದಿದ್ದರೆ ನಿನ್ನ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಅಲ್ಲದೇ ಆರೋಪಿ ಮೆಸೇಜ್ ಮಾಡಿದ ನಂತರ ತಾನು ಯಾರೆಂದು ಗೊತ್ತಾಗಬಾರದೆಂದು ತಕ್ಷಣ ಅವುಗಳನ್ನು ಡಿಲೀಟ್ ಮಾಡಿದ್ದಾನೆ. ಸ್ವಲ್ಪ ದಿನದ ನಂತರ ನಟನ ಮಗಳಿಗೆ ಫೋನ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಕೊನೆಗೆ ಆರೋಪಿಯ ಬೆದರಿಕೆಗೆ ಹೆದರಿ ನಟನ ಮಗಳು 15,000 ರಿಂದ 20,000 ರೂಪಾಯಿ ನೀಡಿದ್ದಾರೆ. ಆದರೆ ಆರೋಪಿ ಮತ್ತೆ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆಗ ಆಕೆ ತನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಪೋಷಕರು ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಆರೋಪಿ ಪಟಾನಿ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಸಹೋದರಿ ಮತ್ತು ಬಾಲಿವುಡ್ ನಟನ ಮಗಳು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇಬ್ಬರು ಸ್ನೇಹಿತರು ಕೂಡ ಆಗಿದ್ದರು. ಆದರೂ ಆರೋಪಿ ಈ ರೀತಿ ಹಣಕ್ಕಾಗಿ ನಟನ ಮಗಳಿಗೆ ಬ್ಲ್ಯಾಕ್‍ಮೇಲೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
09-11-24 02:34 pm
HK News Desk
Waqf dispute, BBMP: ವಕ್ಫ್ ವಿವಾದ ನಡುವಲ್ಲೇ ಮತ್ತ...
09-11-24 01:19 pm
ಸೋಮಶೇಖರ್ ಪಾರ್ಟಿ ಯಾವುದಪ್ಪ..? ಅವ್ರು ತ್ರಿಶಂಕು ಸ್...
08-11-24 09:43 pm
HC Mahadevappa: ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ...
08-11-24 01:58 pm
ಜಂಟಿ ಸದನ ಸಮಿತಿ ಭೇಟಿ ಬೆನ್ನಲ್ಲೇ ರಾಜ್ಯ ಸರ್ಕಾರ ಎಲ...
07-11-24 06:49 pm
09-11-24 02:19 pm
HK News Desk
ಲಾರೆನ್ಸ್ ಬಿಷ್ಣೋಯಿ, ದಾವೂದ್ ಇಬ್ರಾಹಿಂ ಚಿತ್ರವುಳ್ಳ...
08-11-24 10:49 pm
ಭಾರತದ ಕಮಲಕ್ಕ ಬೌಲ್ಡ್ ; ಅಮೆರಿಕಕ್ಕೆ ಮತ್ತೆ ಡೋನಾಲ್...
06-11-24 03:35 pm
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ತನ್ನದೆಂದ ವಕ್ಫ್...
05-11-24 03:30 pm
Edneer Math Swamiji, Attack, Kasaragod: ಎಡನೀರ...
05-11-24 11:41 am
09-11-24 06:52 pm
Mangalore Correspondent
ಚಾರ್ಮಾಡಿ ಘಾಟ್ ಹೆದ್ದಾರಿ ದ್ವಿಪಥಕ್ಕಾಗಿ ಕೇಂದ್ರ ಸ...
09-11-24 05:10 pm
Mangalore Journalist Srinivas Nayak: ಶ್ರೀನಿವಾ...
09-11-24 01:52 pm
Brijesh Chowta, Mangalore: ದಕ್ಷಿಣ ಕನ್ನಡದಲ್ಲಿ...
08-11-24 09:46 pm
Mangalore Ullal News: ಗ್ರಂಥಾಲಯಕ್ಕಾಗಿ ಹಳೆಯ ಕಟ್...
08-11-24 08:19 pm
09-11-24 05:14 pm
Mangaluru Correspondent
Uppinangady, Murder, Crime Mangalore: ಉಪ್ಪಿನಂ...
08-11-24 10:46 pm
Mangalore crime, Pocso, Rape: ಉಳಾಯಿಬೆಟ್ಟು ಟೈಲ...
08-11-24 04:25 pm
Mangalore cyber fraud, Mangalore: ಮುಂಬೈ ಪೊಲೀಸ...
08-11-24 02:00 pm
Hassan Murder, Police constable, crime: ಹಾಸನ...
06-11-24 09:11 pm