ಬ್ರೇಕಿಂಗ್ ನ್ಯೂಸ್
07-04-21 04:23 pm Headline Karnataka News Network ಸಿನಿಮಾ
ಚೆನ್ನೈ, ಎ.7 ; ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಕುಮಾರ್ ಹಾಗೂ ಅವರ ಪತ್ನಿ, ನಟಿ ರಾಧಿಕಾಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆನ್ನೈ ವಿಶೇಷ ನ್ಯಾಯಾಲಯ ಒಂದು ವರ್ಷ ಶಿಕ್ಷೆ ವಿಧಿಸಿದೆ.
ಶರತ್ ಕುಮಾರ್ ಹಾಗೂ ನಟಿ ರಾಧಿಕಾ ದಂಪತಿ ಮೇಲಿನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾರಥಿ, ರಾಜಕುಮಾರ್, ಸೀತಾರಾಮ ಕಲ್ಯಾಣ, ಸಂತೆಯಲ್ಲಿ ನಿಂತ ಕಬೀರ ಕನ್ನಡ ಸಿನಿಮಾಗಳಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ನಟಿ ರಾಧಿಕಾ ಅವರು ವಿಷ್ಣುವರ್ಧನ್, ದ್ವಾರಕೀಶ್ ಸೇರಿ ಹಲವರ ಜೊತೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರ್ಯಾಡಿಯೆಂಟ್ ಮೀಡಿಯಾ ದೂರಿನ ಪ್ರಕಾರ, ಪಾಲುದಾರಿಕೆ ಹೊಂದಿದ್ದ ಶರತ್ ಕುಮಾರ್, ರಾಧಿಕಾ, ಲಿಸ್ಟಿನ್ ಅವರು ರ್ಯಾಡಿಯೆಂಟ್ ಸಂಸ್ಥೆಯಿಂದ 1.50 ಕೋಟಿ ರೂಪಾಯಿ ಹಣ ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತೆಯಾಗಿ ಎರಡು ಚೆಕ್‌ಗಳನ್ನು ನೀಡಿದ್ದರು. ನಂತರ ಶರತ್ ಕುಮಾರ್ 50 ಲಕ್ಷ ರೂಪಾಯಿ ಕೈಸಾಲ ಪಡೆದು ಹತ್ತು ಲಕ್ಷ ಮೌಲ್ಯದ ಐದು ಚೆಕ್‌ಗಳನ್ನು ಭದ್ರತೆಯಾಗಿ ನೀಡಿದ್ದರು. ಆದರೆ ಚೆಕ್‌ಗಳನ್ನು ನಗದು ಮಾಡಿಕೊಳ್ಳಲು ಬ್ಯಾಂಕಿಗೆ ಸಲ್ಲಿಸಿದಾಗ ಏಳೂ ಚೆಕ್‌ಗಳು ಬೌನ್ಸ್ ಆಗಿವೆ. ಹಾಗಾಗಿ ಶರತ್ ಕುಮಾರ್, ರಾಧಿಕಾ ಹಾಗೂ ಲಿಸ್ಟಿನ್ ವಿರುದ್ಧ ಸಿನಿಮಾ ಫೋನ್ ಯಾನ್ ಸ್ ಸಂಸ್ಥೆಯಾದ ರ್ಯಾಡಿಯಂಟ್ ಮೀಡಿಯಾ ಸಂಸ್ಥೆ ದೂರು ದಾಖಲಿಸಿತ್ತು.
2015 ರಲ್ಲಿ ಶರತ್ ಕುಮಾರ್, ರಾಧಿಕಾ ಒಡೆತನದ 'ಮ್ಯಾಜಿಕ್ ಫ್ರೇಮ್ಸ್' ಸಂಸ್ಥೆಯಿಂದ 'ಇದು ಎನ್ನ ಮಾಯಂ' ಹೆಸರಿನ ತಮಿಳು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ಕೀರ್ತಿ ಸುರೇಶ್, ನಟ ವಿಕ್ರಂ ಪ್ರಭು, ಕನ್ನಡದ ನಟಿ ಕಾವ್ಯಾ ಶೆಟ್ಟಿ, ನಾಸರ್ ಅವರುಗಳು ನಟಿಸಿದ್ದರು. ಈ ಸಿನಿಮಾ ನಿರ್ಮಾಣಕ್ಕಾಗಿಯೇ ಶರತ್ ಕುಮಾರ್ ರ್ಯಾಡಿಯೆಂಟ್ ಸಂಸ್ಥೆಯಿಂದ 2 ಕೋಟಿ ಹಣ ಸಾಲ ಪಡೆದಿದ್ದರು.
The Special Court trying cases against MP and MLAs on Wednesday convicted actor couple Sarathkumar, Radhika and one other person in a 2018 cheque bounce case and sentenced them to one year's imprisonment. The court also imposed a penalty of Rs 5 crores in connection with the case.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm