ಬ್ರೇಕಿಂಗ್ ನ್ಯೂಸ್
04-08-21 11:36 am Headline Karnataka News Network ಸಿನಿಮಾ
ನವದೆಹಲಿ, ಆಗಸ್ಟ್ 4: ಖ್ಯಾತ ರ್ಯಾಪ್ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಅವರ ಪತ್ನಿ ಶಾಲಿನ ತಲ್ವಾರ್ ತಮ್ಮ ಪತಿ ಕೌಟುಂಬಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಮ್ಮ ದೂರಿನಲ್ಲಿ ಹನಿ ಸಿಂಗ್ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 28 ರೊಳಗೆ ಉತ್ತರ ನೀಡುವಂತೆ ಕೋರ್ಟ್ ಹನಿ ಸಿಂಗ್ಗೆ ನೋಟಿಸ್ ನೀಡಿದೆ.
ಶಾಲಿನಿ ತಲ್ವಾರ್ ನೀಡಿರುವ ದೂರಿನಲ್ಲಿ ಹನಿ ಸಿಂಗ್ ವಿರುದ್ಧ ಸಾಕಷ್ಟು ಆರೋಪಗಳ ಪಟ್ಟಿಯೇ ಇದೆ. ನನ್ನ ಮೇಲೆ ಹನಿ ಸಿಂಗ್ ಹಲವಾರು ಬಾರಿ ದೈಹಿಕ ಹಲ್ಲೆ ಮಾಡಿದ್ದಾರೆ. ಮಾನಸಿಕ ಕಿರುಕುಳ ನೀಡಿದ್ದಾರೆ. ಹನಿ ಸಿಂಗ್ ಸಾಕಷ್ಟು ಹಣ ಸಂಪಾದಿಸಿದ್ದಾರೆ. ಹಾಡುಗಳು, ಶೋಗಳು, ರಾಯಲ್ಟಿ ರೂಪದಲ್ಲೇ ಅವರಿಗೆ ತಿಂಗಳಿಗೆ 4 ಕೋಟಿ ರೂ. ಸಂಪಾದನೆ ಆಗುತ್ತಿತ್ತು. ಆ ಸಮಯದಲ್ಲಿ ಅವರು ಡ್ರಗ್ಸ್, ಮದ್ಯಪಾನ, ಸಂವರ್ಧನ ಔಷಧಗಳಿಗೆ ದಾಸರಾಗಿದ್ದರು. ಹನಿ ಸಿಂಗ್ ದುರಾಹಂಕಾರಿ ಮತ್ತು ಕೆಟ್ಟದಾಗಿ ಬೈಯುತ್ತಿದ್ದರು. ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದರು' ಎಂದು ತಿಳಿಸಿದ್ದಾರೆ.
ಆಗಸ್ಟ್ 3ರಂದು ದೂರು ದಾಖಲಾಗಿದ್ದು, ಸದ್ಯ ಹನಿ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ಶಾಲಿನಿ ಅವರ ಜಂಟಿ ಖಾತೆಗಳಿರುವ ಯಾವುದೇ ಆಸ್ತಿಯನ್ನು ಹನಿ ಸಿಂಗ್ ಮಾರಾಟ ಮಾಡದಂತೆ ನ್ಯಾಯಾಲಯವು ಆದೇಶ ನೀಡಿದೆ ಎಂಬ ಮಾಹಿತಿಯೂ ಸಿಕ್ಕಿದೆ.
38ರ ಹರೆಯದ ಹನಿ ಸಿಂಗ್, ಯೋ ಯೋ ಹನಿ ಸಿಂಗ್ ಅಂತಲೇ ಫೇಮಸ್. 2011ರಲ್ಲಿ ಶಾಲಿನಿ ತಲ್ವಾರ್ ಅವರನ್ನು ಹನಿ ಸಿಂಗ್ ಮದುವೆ ಆಗಿದ್ದರು. 2006ರಲ್ಲಿ ವೃತ್ತಿ ಜೀವನ ಆರಂಭಿಸಿದ ಹನಿ ಸಿಂಗ್, ಆರಂಭದ 10 ವರ್ಷ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದರು. ಅವರ ಮ್ಯೂಸಿಕ್ ವಿಡಿಯೋ ಆಲ್ಭಂಗಳು ಸಖತ್ ಕ್ರೇಜ್ ಹುಟ್ಟುಹಾಕಿದ್ದವು. ತದನಂತರ ಅವರ ಖ್ಯಾತಿ ನಿಧಾನವಾಗಿ ಕಮ್ಮಿ ಆಗುತ್ತ ಹೋಯಿತು. ಆ ಸಂದರ್ಭದಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿಬಂದಿತ್ತು. ಸದ್ಯ ಪತ್ನಿಯಿಂದ ದಾಖಲಾಗಿರುವ ಈ ದೂರಿಗೆ ಹನಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು.
The wife of singer Hirdesh Singh, who goes by the stage name Yo Yo Honey Singh, has approached a Delhi court alleging physical, mental and emotional abuse at the hands of her husband.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm