ಬ್ರೇಕಿಂಗ್ ನ್ಯೂಸ್
16-08-21 10:58 am Filmbeat: Manjunatha C ಸಿನಿಮಾ
ಹಿಂದಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ 12 ನಿನ್ನೆ ಮುಕ್ತಾಯವಾಗಿದೆ. ನಿನ್ನೆ ನಡೆದ ಫಿನಾಲೆಯಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಗಾಯಕರು ಪ್ರಶಸ್ತಿಗಾಗಿ ಸೆಣೆಸಾಡಿದರು, ಅಂತಿಮವಾಗಿ ಪ್ರಶಸ್ತಿಯು ಪವನ್‌ದೀಪ್ ಪಾಲಾಗಿದೆ.
ಸತತವಾಗಿ 12 ಗಂಟೆಗಳ ಕಾಲ ನಡೆದ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಪ್ರಶಸ್ತಿಗಾಗಿ ಗಾಯನದ ಮೂಲಕ ಸೆಣಸಾಡಿದರು. ಪವನ್‌ದೀಪ್ ರಾಜನ್, ಅರುಣಿತಾ ಕಂಜಿಲಾಲ್, ಎಂಡಿ ಧನಿಶ್, ನಿಹಾಲ್ ಟುರೊ, ಶಣ್ಮುಕಪ್ರಿಯ, ಸೈಲ್ ಕಾಂಬ್ಳೆ ಅವರುಗಳು ಫಿನಾಲೆ ವೇದಿಕೆ ಮೇಲೆ ಗಾನ ಸುಧೆ ಹರಿಸಿದರು.



ಅಂತಿಮವಾಗಿ ಪವನ್‌ದೀಪ್ ರಾಜನ್ ಅನ್ನು ವಿನ್ನರ್ ಆಗಿ ಘೋಷಿಸಲಾಯ್ತು. ಅರುಣಿತಾ ಕಂಜಿಲಾಲ್ ಮೊದಲ ರನರ್‌ಅಪ್, ಸೈಲ್ ಕಾಂಬ್ಳೆ ಅನ್ನು ಎರಡನೇ ರನ್ನರ್ ಅಪ್ ಆಗಿ ಘೋಷಿಸಲಾಯ್ತು. ಶೋ ವಿಜೇತ ಪವನ್‌ದೀಪ್‌ಗೆ 25 ರ ಮೊತ್ತದ ಚೆಕ್ ಹಾಗೂ ಟ್ರೋಫಿಯನ್ನು ನೀಡಲಾಯ್ತು.

ಶೋ ಅನ್ನು ಜಡ್ಜ್ ಮಾಡಿದ ಅನು ಮಲ್ಲಿಕ್, ಹಿಮೇಶ್ ರೆಶಮಿಯಾ, ಸೋನು ಕಕ್ಕರ್ ಅವರುಗಳು ಎಲ್ಲ ಸ್ಪರ್ಧಿಗಳು ಚೆನ್ನಾಗಿ ಹಾಡಿದರೆಂದು ಹುರಿದುಂಬಿಸಿದರು. ಆದರೆ ಪವನ್‌ದೀಪ್ ರಾಜನ್ ಪ್ರದರ್ಶನ ಅತ್ಯದ್ಭುತವಾಗಿತ್ತೆಂದು ಕೊಂಡಾಡಿದರು.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಪವನ್‌ದೀಪ್ ರಾಜನ್, ''ಇಂಡಿಯನ್ ಐಡಲ್‌ನಲ್ಲಿ ಭಾಗವಹಿಸಿದ್ದೇ ಕನಸು ನನಸಾದಂಥಹಾ ಅನುಭವ. ಫಿನಾಲೆವರೆಗೆ ಬಂದಿದ್ದು ಇನ್ನೂ ಅದ್ಭುತ ಅನುಭವ. ಶೋನ ವಿಜೇತ ನಾನಾಗಿದ್ದೇನೆ ಎಂಬುದನ್ನು ಇನ್ನೂ ನನಗೆ ನಂಬಲಾಗುತ್ತಿಲ್ಲ. ಇದೊಂದು ದೊಡ್ಡ ಗೌರವ ನನಗೆ. ನನಗೆ ಮತ ಹಾಕಿ ನಾನು ಗೆಲ್ಲುವಂತೆ ಮಾಡಿದ ಎಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತನೆ. ಇಂಡಿಯನ್ ಐಡಲ್ ವರೆಗೆ ನನ್ನ ಪಯಣದಲ್ಲಿ ಜೊತೆಯಾಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಇಂಡಿಯನ್ ಐಡಲ್‌ನ ಎಲ್ಲ ಸಂಗೀತಗಾರರಿಗೆ, ನಮ್ಮ ಕೋಚ್‌ಗಳಿಗೆ ಈ ಟ್ರೋಫಿ ನಿಮ್ಮೆಲ್ಲರಿಗೂ ಸೇರಿದ್ದು'' ಎಂದಿದ್ದಾರೆ.
(Kannada Copy of Filmbeat Kannada)
Pawandeep Rajan took home Indian Idol 12 trophy along with the prize money of Rs lakh. The other finalists were Arunita Kanjilal, Mohd Danish, Sayli Kamble, Nihal Tauro and Shanmukha Priya.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm