ಬ್ರೇಕಿಂಗ್ ನ್ಯೂಸ್
27-08-21 10:58 am Filmbeat ಸಿನಿಮಾ
ಹಿಂದಿ ಬಿಗ್ ಬಾಸ್ ಒಟಿಟಿ ದಿನಕ್ಕೊಂದು ಘಟನೆಯೊಂದಿಗೆ ಗಮನ ಸೆಳೆಯುತ್ತಿದೆ. ಕರಣ್ ಜೋಹರ್ ನಡೆಸಿಕೊಡುವ ಒಟಿಟಿ ಬಿಗ್ ಬಾಸ್ ರೋಚಕವಾಗಿದ್ದು, ಬಿಗ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದೆ. ಇತ್ತೀಚಿಗಷ್ಟೆ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಸಹ ಸ್ಪರ್ಧಿ ರಾಕೇಶ್ ಕಿಸ್ ಮಾಡಿದ ಘಟನೆ ಕೂಡ ನಡೆದಿತ್ತು. ಇದರ ಬೆನ್ನಲ್ಲೇ ಈಗ ಮನೆಯಲ್ಲಿ ಸ್ಪರ್ಧಿಗಳು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ಬಿಗ್ ಬಾಸ್ ನಿಯಮದ ಪ್ರಕಾರ ದೈಹಿಕವಾಗಿ ಜಗಳವಾಡುವ ಹಾಗಿಲ್ಲ, ಸಹ ಸ್ಪರ್ಧಿಗಳ ಮೇಲೆ ಕೈಮಾಡುವ ಹಾಗಿಲ್ಲ. ಆದರೆ ಸ್ಪರ್ಧಿಗಳು ಜಗಳವಾಡುತ್ತಾ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಸಹ ಸ್ಪರ್ಧಿಯ ಮೇಲೆ ಕೈ ಮಾಡಿದ ಹಿನ್ನಲ್ಲೇ ಜೀಶನ್ ಖಾನ್ ನನ್ನು ಮನೆಯಿಂದ ಹೊರಹಾಕಲಾಯಿತು.

ಜೀಶನ್ ಖಾನ್, ಪ್ರತೀಕ್ ಸೆಹಜಪಾಲ್ ಮತ್ತು ನಿಶಾಂತ್ ಭಟ್ ಮೂವರು ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ ವಿಚಾರವಾಗಿ ಪ್ರಾರಂಭವಾದ ಜಗಳ ಹಿಂಸಾತ್ಮಕ ರೂಪ ತಾಳಿದೆ. ಧ್ವಜಗಳನ್ನು ಸಂಗ್ರಹ ಮಾಡುವ ಟಾಸ್ಕ್ ಇದಾಗಿತ್ತು. ಇದರಲ್ಲಿ ಜೀಶನ್ ಖಾನ್, ನಿಶಾಂತ್ ಕೈಗಳಿಂದ ಅಕ್ರಮಣಕಾರಿಯಾಗಿ ಧ್ವಜಗಳನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಆಗ ನಿಶಾಂತ್ ವಿರೋಧಿಸಿದ್ದಾರೆ. ಇಬ್ಬರು ಸ್ಪರ್ಧಿಗಳನ್ನು ಪ್ರತೀಕ್ ತಡೆಯಲು ಮುಂದಾಗಿದ್ದಾರೆ. ಆದರೆ ಜೀಶನ್ ಖಾನ್, ನಿಶಾಂತ್ ಮೇಲೆ ಹಲ್ಲೆ ಮಾಡುತ್ತಲೇ ಧ್ವಜ ಕಿತ್ತುಕೊಳ್ಳುತ್ತಿದ್ದರು. ಬಳಿಕ ಮನೆಯ ಎಲ್ಲಾ ಸ್ಪರ್ಧಿಗಳು ಇಬ್ಬರ ಕಿತ್ತಾಟ ಬಿಡಿಸಲು ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ.

ಜೀಶನ್ ಖಾನ್ ತನ್ನ ಕೈಗಳನ್ನು ತಿರುಚಿದ್ದಾರೆ ಎಂದು ಪ್ರತೀಕ್ ಆರೋಪ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದ ಬಿಗ್ ಬಾಸ್ ಈ ವಾರ ಬಾಸ್ ಮ್ಯಾನ್ ಆಗಿದ್ದ ಜೀಶನ್ ಖಾನ್ ನನ್ನು ಮನೆಯಿಂದ ತಕ್ಷಣ ಹೊರಹಾಕುವ ನಿರ್ಧಾರ ಮಾಡಿದೆ. ಹಲ್ಲೆ ಮಾಡಿದ ಆರೋಪದ ಮೇರೆಗೆ ಜೀಶನ್ ಖಾನ್ ಮನೆಯಿಂದ ಹೊರನಡೆದಿದ್ದಾರೆ. ಇದು ಜೀಶನ್ ಅಭಿಮಾನಿಗಳನ್ನು ಕೆರಳಿಸಿದೆ. ಇದು ತುಂಬಾ ಅನ್ಯಾಯ, ಕೇವಲ ಜೀಶನ್ ಖಾನ್ ನನ್ನು ಮಾತ್ರ ಮನೆಯಿಂದ ಹೊರಹಾಕಲಾಗಿದೆ. ನಿಶಾಂತ್ ಕೂಡ ಕೈ ಮಾಡಿದ್ದಾರೆ, ಅವರನ್ನು ಮನೆಯಿಂದ ಹೊರಹಾಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇದು ಕೇವಲ ಏಕಪಕ್ಷೀಯವಾಗಿದೆ ಬಿಗ್ ಬಾಸ್ ಆದೇಶದ ವಿರುದ್ಧ ಜೀಶನ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಮನೆಯಿಂದ ಹೊರಬಂದ ಜೀಶನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ತನ್ನಮೇಲಾದ ಹಲ್ಲೆಯ ಫೋಟೋವನ್ನು ಶೇರ್ ಮಾಡಿದ್ದಾರೆ. ಎದೆಯ ಭಾಗದಲ್ಲಿ ಗಾಯಗಳಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಏನನ್ನು ಬರೆದುಕೊಂಡಿಲ್ಲ, ಆದರೆ ಕೈಮುಗಿಯುವ ಇಮೋಜಿ ಹಾಕಿದ್ದಾರೆ.

ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ಜೀಶನ್ ಪರಮಾತನಾಡುತ್ತಿದ್ದಾರೆ. ಇದು ಬಿಗ್ ಬಾಸ್ ನ ತಪ್ಪು ನಿರ್ಧಾರ, ನ್ಯಾಯ ಸಿಗಬೇಕೆಂದು ಕಾಮೆಂಟ್ ಮಾಡಿ ಜೀಶನ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ನೆಟ್ಟಿಗರ ಒತ್ತಾಯಕ್ಕೆ ಮಣಿದು ಬಿಗ್ ಬಾಸ್ ಜೀಶನ್ ಖಾನ್ ನನ್ನು ಮತ್ತೆ ವಾಪಸ್ ಕರೆಸಿಕೊಳ್ಳುತ್ತಾರಾ ಎನ್ನುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
(Kannada Copy of Filmbeat Kannada)
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm