ಬ್ರೇಕಿಂಗ್ ನ್ಯೂಸ್
04-09-21 11:43 am Source: News 18 Kannada ಸಿನಿಮಾ
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗನಿಗೆ ನಿನ್ನೆ ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಮೊದಲಿಗೆ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಂತರ ಹೋಟೆಲ್ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ಶಾಶ್ತ್ರ ನೆರವೇರಿತು. ಚಿರು ಮಗನ ನಾಮಕರಣದಲ್ಲಿ ಅವರ ಸ್ನೇಹಿತರ ದಂಡೇ ಹರಿದು ಬಂದಿತ್ತು.
ಮಗು ಹುಟ್ಟಿ 10 ತಿಂಗಳ ನಂತರ ಮೇಘನಾ ರಾಜ್ ಕುಟುಂಬ ಹಾಗೂ ಚಿರು ಮನೆಯವರು ಸೇರಿ ಅದ್ದೂರಿಯಾಗಿ ನಾಮಕರಣ ಮಾಡಿದ್ದಾರೆ. ಹೌದು, ಚಿರು ಹಾಗೂ ಮೇಘನಾ ರಾಜ್ ಮಗನಿಗೆ ನಿನ್ನೆಯಿಂದ ಅಧಿಕೃತ ಹೆಸರು ಸಿಕ್ಕಿದೆ.


ಮೇಘನಾ-ಚಿರು ಮುದ್ದಿನ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಚಿರು ಮನೆಯಲ್ಲಿ ರಾಜನಂತೆ ಇದ್ದರಂತೆ. ಅದಕ್ಕೆ ಆ ರಾಜನ ಮಗನಿಗೆ ಯುವರಾಜ ಎಂಬ ಅರ್ಥ ಕೊಡುವ ರಾಯನ್ ಹೆಸರನ್ನು ಇಡಲಾಗಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.
ಮಗುವಿನ ರೂಪದಲ್ಲಿ ಅಣ್ಣನೇ ಬಂದ ಎಂದು ನಂಬಿರುವ ಧ್ರುವ ಸರ್ಜಾ ಹಾಗೂ ಕುಟುಂಬದವರೂ ಖುಷಿಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಗು ಹುಟ್ಟಿದ ಕೂಡಲೇ ಧ್ರುವಾ ಸರ್ಜಾ ದುಬಾರಿ ಬೆಲೆಯ ತೊಟ್ಟಿಲನ್ನು ಖರೀದಿಸಿದ್ದರು.

ಇನ್ನು ಸ್ಯಾಂಡಲ್ವುಡ್ನಲ್ಲಿ ಚಿರು ಸರ್ಜಾ ಅವರಿಗೆ ತಮ್ಮದೇ ಆದ ಸ್ನೇಹಿತರ ಬಳವಿತ್ತು. ಒಳ್ಳೆಯದಿರಲಿ, ಕೆಟ್ಟದಿರಲಿ ಈ ಎಲ್ಲ ಸ್ನೇಹಿತರು ಇದರಲ್ಲಿ ಭಾಗಿಯಾಗಿರುತ್ತಿದ್ದರು.
ನಿನ್ನೆಯಯೂ ಸಹ ಚಿರು ಅವರ ಸ್ನೇಹಿತರು ಅವರ ಮಗನ ನಾಮಕರಣದಲ್ಲಿ ಭಾಗಿಯಾಗಿ, ರಾಯನ್ಗೆ ಆಶೀರ್ವದಿಸಿದ್ದಾರೆ. ಇದಲ್ಲಿ ಪನ್ನಾಗಭರಣ ಸಹ ಒಬ್ಬರು.


ಮಗನಿಗೆ ರಾಯನ್ ಎಂದು ಹೆಸರು ಇಡಲೇಬೇಕೆಂದು ಮನಸ್ಸಿನಲ್ಲಿ ಇತ್ತು. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ ಎಂದು ಮೇಘನಾ ರಾಜ್ ನಿನ್ನೆ ನಾಮಕರಣದ ನಂತರ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm