ಬ್ರೇಕಿಂಗ್ ನ್ಯೂಸ್
30-09-21 10:57 am Filmbeat: Bharath Kumar K ಸಿನಿಮಾ
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಪುಷ್ಪ ಬಿಡುಗಡೆಗೆ ತಯಾರಾಗುತ್ತಿದೆ. ಈಗಾಗಲೇ ಪುಷ್ಪ ಚಿತ್ರದ ರಿಲೀಸ್ ದಿನಾಂಕ ಪ್ರಕಟವಾಗಿದ್ದು, ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರಲಿದೆ.
ಸಿನಿಮಾ ಶೂಟಿಂಗ್ ನಡುವೆ ದುಬೈನಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದುಬೈಗೆ ಭೇಟಿ ನೀಡಿರುವ ಈ ಸಂದರ್ಭದಲ್ಲಿ ಮಲಯಾಳಿ ಮೂಲದ ಉದ್ಯಮಿಯೊಬ್ಬರು ಸ್ಟೈಲಿಶ್ ಸ್ಟಾರ್‌ಗೆ ವಿಶೇಷವಾದ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.
ದುಬೈನಲ್ಲಿರುವ ಮಲಯಾಳಿ ಉದ್ಯಮಿ ರಿಯಾಜ್ ಕಿಲ್ಟನ್ ಅವರು ಐಕಾನ್ ಸ್ಟಾರ್‌ಗೆ 160 ವರ್ಷದ ಹಳೆಯ ಪಿಸ್ತೂಲ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿ ಹಾಗೂ ಮಕ್ಕಳು ದುಬೈನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಕಳೆದ ವಾರ ದುಬೈಗೆ ಹೋಗಿರುವ ತೆಲುಗು ನಟ ಸತತ ಚಿತ್ರೀಕರಣದಿಂದ ವಿರಾಮ ತೆಗೆದುಕೊಂಡು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಫಸ್ಟ್ ಲುಕ್
ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿರುವ ವಿಚಾರ ತಿಳಿದಿದೆ. ಇದುವರೆಗೂ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಪಾತ್ರವೇನು? ಗೆಟಪ್ ಹೇಗಿರಲಿದೆ ಎನ್ನುವ ಯಾವ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ, ರಶ್ಮಿಕಾ ಪಾತ್ರದ ಹೆಸರು ಮತ್ತು ಫಸ್ಟ್ ಲುಕ್ ಬಹಿರಂಗವಾಗಿದೆ. ಸೆಪ್ಟೆಂಬರ್ 29 ರಂದು ಪುಷ್ಪ ಸಿನಿಮಾದ ರಶ್ಮಿಕಾ ಮಂದಣ್ಣ ಪೋಸ್ಟರ್ ಅನಾವರಣಗೊಂಡಿದ್ದು, ಶ್ರೀವಲ್ಲಿ ಎಂಬ ಪಾತ್ರದಲ್ಲಿ ನ್ಯಾಷನಲ್ ಕ್ರಶ್ ಅಭಿನಯಿಸುತ್ತಿದ್ದಾರೆ.
ಎರಡು ಭಾಗದಲ್ಲಿ ಪುಷ್ಪ
ಸುಕುಮಾರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ಎರಡು ಭಾಗಗಳಾಗಿ ತೆರೆಗೆ ಬರಲಿದೆ. ಮೊದಲ ಭಾಗ ಕ್ರಿಸ್‌ಮಸ್ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಎರಡನೇ ಭಾಗದ ಅಪ್‌ಡೇಟ್ ಸದ್ಯಕ್ಕಿಲ್ಲ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಸ್ಟಾರ್ ನಟ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದು, ಪ್ಯಾನ್ ಇಂಡಿಯಾ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಅಲ್ಲು ಅರ್ಜುನ್ 21ನೇ ಚಿತ್ರ
ಸುಕುಮಾರ್ ನಿರ್ದೇಶಿಸುತ್ತಿರುವ ಪುಷ್ಪ ಸಿನಿಮಾ ಅಲ್ಲು ಅರ್ಜುನ್ ನಟನೆಯ 20ನೇ ಚಿತ್ರ. ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ನಿರ್ದೇಶಕ ಕೊರಟಲಾ ಶಿವ ಜೊತೆ 21ನೇ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ. ಅಲ್ಲು ಅರ್ಜುನ್ ಮತ್ತು ಕೊರಟಲಾ ಶಿವ ಕಾಂಬಿನೇಷನ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಪುಷ್ಪ ಪೂರ್ಣಗೊಳಿಸಿ ಈ ಚಿತ್ರ ಶುರು ಮಾಡಲಿದ್ದಾರೆ. ಈ ಮೂಲಕ ಇದೇ ಮೊದಲ ಸಲ ಕೊರಟಲಾ ಶಿವ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಮರ್ಚಿ, ಶ್ರೀಮಂತಡು, ಜನತಾ ಗ್ಯಾರೇಜ್, ಭರತ್ ಅನೇ ನೇನು ಈಗ ಮೆಗಾಸ್ಟಾರ್ ಜೊತೆ ಆಚಾರ್ಯ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಶಿವ.
ಕನ್ನಡದಲ್ಲೂ ಬರಲಿದೆ ಪುಷ್ಪ
ಪುಷ್ಪ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಆರಂಭವಾದ ಸಂದರ್ಭದಲ್ಲಿ ಒಂದೇ ಭಾಗವಾಗಿ ಘೋಷಣೆಯಾಗಿತ್ತು. ಆ ನಂತರ ಚಿತ್ರದ ಕಥೆ ಮತ್ತು ಪ್ರಾಮುಖ್ಯತೆ ಎರಡನೇ ಭಾಗ ಮಾಡುವಂತೆ ಪ್ರೇರೇಪಿಸಿತು ಎಂದು ನಿರ್ದೇಶಕ ಸುಕುಮಾರ್ ಈ ಹಿಂದೆ ಹೇಳಿದ್ದರು. ಸದ್ಯಕ್ಕೆ ಭಾಗ 1ರ ಶೂಟಿಂಗ್ ಬಹುತೇಕ ಮುಗಿದಿದೆ. ಮುಂದುವರೆದ ಭಾಗದ ಚಿತ್ರೀಕರಣವೂ ಏಕಕಾಲದಲ್ಲಿ ಮುಗಿಸುವ ಪ್ಲಾನ್ ಇದ್ದು, ದುಬೈನಿಂದ ಹಿಂತಿರುಗಿದ ನಂತರ ಮತ್ತೆ ಶೂಟಿಂಗ್ ಶುರು ಮಾಡಲಿದ್ದಾರೆ ನಟ ಅಲ್ಲು ಅರ್ಜುನ್.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 05:56 pm
Mangalore Correspondent
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am