ಸಕ್ಕರೆ ಕಾಯಿಲೆ ಇದೆಯಾ? ಹಾಗಾದ್ರೆ ಸೀಬೆಕಾಯಿ ಸಿಪ್ಪೆ ನಿಮಗೆ ಹೆಲ್ಪ್ ಫುಲ್!

27-07-22 07:56 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಸಮಸ್ಯೆ ಬಂದು ನಿಮಗೆ ಜೀವನ ಸಾಕಾಗಿ ಹೋಯಿತು ಎನಿಸುತ್ತಿದ್ದರೆ ಸೀಬೆಕಾಯಿ ಸಿಪ್ಪೆಯ ಪ್ರಯೋಗ ಒಮ್ಮೆ ಟ್ರೈ ಮಾಡಿ.

ನಾವು ಚಿಕ್ಕ ಮಕ್ಕಳು ಆಗಿದ್ದ ಕಾಲದಿಂದಲೂ ಇಂದಿನವರೆಗೂ ನಮಗೆ ಸೀಬೇಕಾಯಿ ಎಂದರೆ ಬಹಳ ಇಷ್ಟ ಅಲ್ಲವೇ? ಆಗಂತೂ ಏನು ತಿಳಿಯದ ಕಾಲ. ಎಲ್ಲಾದರೂ ಸೀಬೆ ಮರ ಕಂಡರೆ, ಮನೆ ಓನರ್ ಕಣ್ಣು ತಪ್ಪಿಸಿ ಕಲ್ಲು ಹೊಡೆದು ಸೀಬೇಕಾಯಿ ಬೀಳಿಸಿಕೊಂಡು ಗೆಳೆಯರ ಜೊತೆಗೂಡಿ ತಿನ್ನುತ್ತಾ ಮಜಾ ಮಾಡಿಕೊಂಡು ರಸ್ತೆ ತುಂಬಾ ನಮ್ಮದೇ ಹವಾ ಎಂಬಂತೆ ಓಡಾಡುತ್ತಿದ್ದೆವು.

 

ಅದು ನಮ್ಮ ಜೀವನದಲ್ಲಿ ಮತ್ತೆ ಇನ್ನೆಂದು ಬರಲಾರದ ಒಂದು ರೀತಿಯ ಗೋಲ್ಡನ್ ಪಿರಿಯಡ್ ಎಂದು ಹೇಳಬಹುದು. ಸೀಬೇಕಾಯಿ ತಿನ್ನಲು ಒಂದು ನೆಪ ಅಷ್ಟೇ. ಆದರೆ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಸೀಬೆ ಕಾಯಿ ಸಿಪ್ಪೆ ಕೂಡ ಕೊಡುವಂತಹ ಆರೋಗ್ಯದ ಲಾಭಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಅದರಲ್ಲೂ ವಿಶೇಷವಾಗಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದರಿಂದ ಪ್ರಯೋಜನ ಹೆಚ್ಚು. ವೈದ್ಯರ ಪ್ರಕಾರ ಸೀಬೇಕಾಯಿ ಅಥವಾ ಹಣ್ಣಿನ ಸಿಪ್ಪೆ ಹೇಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು.

ಮಧುಮೇಹ ಮತ್ತು ಸೀಬೆಕಾಯಿ ಸಿಪ್ಪೆ ನಡುವಿನ ನಂಟು!

How Baking Soda Affects People with Type 2 Diabetes

  • ವೈದ್ಯಕೀಯ ಲೋಕದ ಒಂದು ಅಧ್ಯಯನ ಹೇಳುವ ಹಾಗೆ ಸೀಬೆಕಾಯಿ ಸಿಪ್ಪೆ, ತನ್ನಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ. ಹೀಗಾಗಿ ಹಸಿ ಸೀಬೆಕಾಯಿ ಅಥವಾ ಸೀಬೆಕಾಯಿ ಸಿಪ್ಪೆ ತಿನ್ನುವುದರಿಂದ ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಲಿಪಿಡ್ ಪ್ರೊಫೈಲ್ನಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಸರಿಯಾಗುತ್ತದೆ.
  • ಇದರ ಜೊತೆಗೆ ಇನ್ಸುಲಿನ್ ಪ್ರತಿರೋಧತೆ, ರಕ್ತದಲ್ಲಿ ಗ್ಲುಕೋಸ್ ಏರಿಕೆ ಮತ್ತು ಇಳಿಕೆ ಎಲ್ಲವೂ ಸಹ ನಿಯಂತ್ರಣಕ್ಕೆ ಬಂದು ಮಧುಮೇಹದ ತೊಂದರೆ ಅಷ್ಟಾಗಿ ಕಾಡುವುದಿಲ್ಲ. ಹೀಗಾಗಿ ವೈದ್ಯಲೋಕ ಹೇಳುವ ಪ್ರಕಾರ ಯಾರಿಗೆ ಟೈಪ್ 2 ಮಧುಮೇಹ ಇರುತ್ತದೆ ಅಂತಹವರಿಗೆ ಕೇವಲ ಸೀಬೆ ಹಣ್ಣುಮಾತ್ರವಲ್ಲ, ಅದರ ಸಿಪ್ಪೆ ಕೂಡ ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಸೀಬೆಕಾಯಿ ಸಿಪ್ಪೆಯಲ್ಲಿ ಸಿಗುವ ಇತರ ಪ್ರಯೋಜನಗಳು

How You Can Tell When A Guava Is Ripe

  • ಅಷ್ಟೇ ಅಲ್ಲದೆ ಸೀಬೆಕಾಯಿ ಸಿಪ್ಪೆಯಲ್ಲಿ ನಿಮ್ಮ ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಮಟ್ಟ, ಎಲ್ಡಿಎಲ್ ಕೊಲೆಸ್ಟರಾಲ್, ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಎಲ್ಲವನ್ನು ಒಂದು ನಿಯಂತ್ರಣಕ್ಕೆ ತಂದು ಹೃದಯ ರಕ್ತನಾಳದ ಕಾಯಿಲೆ ಬರದಂತೆ ನೋಡಿಕೊಳ್ಳುವ ಗುಣವಿದೆ.
  • ದೇಹದಲ್ಲಿ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಅಂಶ ಸ್ವಲ್ಪ ಹೆಚ್ಚಾದರೆ ಅದರ ಕಾರಣದಿಂದ ಕೆಟ್ಟ ಕೊಲೆಸ್ಟ್ರಾಲ್ ಎಂದು ಗುರುತಿಸಿಕೊಂಡ ಎಲ್ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಕ್ರಮೇಣವಾಗಿ ಹೃದಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.

ಅಧ್ಯಯನಗಳು ಹೇಳುವಂತೆ

3 Ways to Stop Diabetes Back Pain

  • ಅಧ್ಯಯನಗಳು ಹೇಳುವಂತೆ ಸೀಬೆ ಹಣ್ಣಿನ ಸಿಪ್ಪೆ ಸೇವನೆ ಮಾಡುವುದರಿಂದ ದೇಹದಲ್ಲಿ Alkaline Phosphatase,ಸೀರಮ್ ಕ್ರಿಯೇಟಿನೈನ್ ಅಂಶಗಳು ಸಹ ಕಡಿಮೆಯಾಗುತ್ತದೆ ಮತ್ತು ಪ್ರಮಾಣವಾಗಿ ಲಿವರ್ ಭಾಗದ ಕಾರ್ಯಚಟುವಟಿಕೆ ಅತ್ಯುತ್ತಮವಾಗುತ್ತದೆ.
  • ಹೀಗಾಗಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ತ್ವಚೆಯ ಆರೋಗ್ಯಕ್ಕಾಗಿ ಸೀಬೆ ಹಣ್ಣು ಅಥವಾ ಅದರ ಸಿಪ್ಪೆಯನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು.

ಕೊನೆಯ ಮಾತು

15 Amazing Guava Benefits: Heart Healthy, Weight Loss Friendly and More -  NDTV Food

ಆದರೆ ಒಂದು ಅಂಶ ನೆನಪಿರಲಿ. ಅದೇನೆಂದರೆ ಸೀಬೆಕಾಯಿ ಮೇಲ್ಭಾಗದಲ್ಲಿ ರಾಸಾಯನಿಕ ಅಂಶಗಳು ಮತ್ತು ಮೇಣ ಇರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಅದನ್ನು ಸಂಪೂರ್ಣವಾಗಿ ಕತ್ತರಿಸಿ ಬಿಸಾಕುವ ಬದಲು ಚೆನ್ನಾಗಿ ನೀರಿನಲ್ಲಿ ತೊಳೆದು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.

Its The Gauva Peel Helpful To The Sugar Patients Secretly.