ದಿನಾ ಮೂರು-ನಾಲ್ಕು ನೆನೆಸಿದ ಒಣ ದ್ರಾಕ್ಷಿ ತಿನ್ನುವುದರಿಂದ ಹೀಗೊಂದು ಲಾಭ...

28-07-22 07:38 pm       Source: Vijayakarnataka   ಡಾಕ್ಟರ್ಸ್ ನೋಟ್

ನೀವು ಸದಾ ಫಿಟ್ ಅಂಡ್ ಫೈನ್ ಆಗಿರಬೇಕು ಎಂದು ಆಸೆ ಪಡುತ್ತೀರಾ? ನೀರಿನಲ್ಲಿ ನೆನೆ ಹಾಕಿದ ಒಣ ದ್ರಾಕ್ಷಿ ನಿಮಗೆ ಬೆಸ್ಟ್ ಹೆಲ್ತ್ ಬೂಸ್ಟರ್!

ನಾವು ಸೇವನೆ ಮಾಡುವ ಒಂದೊಂದು ಆಹಾರ ಪದಾರ್ಥಗಳು ನಮಗೆ ಒಂದೊಂದು ರೂಪದಲ್ಲಿ ಒಂದೊಂದು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಉದಾಹರಣೆಗೆ ಕಾಳುಗಳನ್ನು ನಾವು ಹಾಗೆ ತಿನ್ನುವುದಕ್ಕೂ ಮತ್ತು ಅವುಗಳನ್ನು ನೆನೆಹಾಕಿ ಮೊಳಕೆ ಕಟ್ಟಿ ತಿನ್ನುವುದಕ್ಕೂ ವ್ಯತ್ಯಾಸವಿದೆ ಮತ್ತು ಸಿಗುವ ಆರೋಗ್ಯ ಪ್ರಯೋಜನಗಳು ಬೇರೆ ಬೇರೆಯಾಗಿರುತ್ತವೆ.

ಒಣದ್ರಾಕ್ಷಿಯನ್ನು ಸಹ ನಾವು ಹಾಗೆ ತಿನ್ನುವುದಕ್ಕೂ ನೀರಿನಲ್ಲಿ ನೆನೆಹಾಕಿ ತಿನ್ನುವುದಕ್ಕೂ ವ್ಯತ್ಯಾಸವಿದೆ. ಈ ಲೇಖನದಲ್ಲಿ ಒಣದ್ರಾಕ್ಷಿಯನ್ನು ನಾವು ನೀರಿನಲ್ಲಿ ನೆನೆಸಿ ಏಕೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಬಹುದು....

ದೇಹದ ತೂಕ ನಿಯಂತ್ರಣವಾಗುತ್ತದೆ

Is It Bad to Lose Weight Too Quickly?

  • ಒಣದ್ರಾಕ್ಷಿಗಳಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ಇರುತ್ತದೆ. ನಿಮ್ಮ ಹೊಟ್ಟೆ ಹಸಿವಿನ ನಿಯಂತ್ರಣ ದಲ್ಲಿ ಇದು ಸಹಾಯ ಮಾಡುತ್ತದೆ. ಇದರಿಂದ ನೀವು ಸೇವನೆ ಮಾಡುವ ಅತಿಹೆಚ್ಚಿನ ಕ್ಯಾಲೊರಿಗಳು ನಿಯಂತ್ರಣವಾಗುತ್ತವೆ.
  • ನಿಮ್ಮ ಆರೋಗ್ಯ ತಜ್ಞರು ಹೇಳಿದ ಪ್ರಕಾರ ನೀವು ಒಣದ್ರಾಕ್ಷಿಯನ್ನುಸೇವನೆ ಮಾಡಿ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಜೊತೆಗೆ ಒಮ್ಮೆ ಇವುಗಳನ್ನು ಸೇವನೆ ಮಾಡಿದರೆ ದೀರ್ಘಕಾಲ ನೀವು ಹೊಟ್ಟೆ ಹಸಿವು ಆಗದಂತೆ ಇರಬಹುದು.

ದೇಹದ ಜೀರ್ಣ ಪ್ರಕ್ರಿಯೆ ಸರಾಗವಾಗುತ್ತದೆ

Foods to Eat in Upset Stomach | Home remedies to soothe upset stomach

ಒಣದ್ರಾಕ್ಷಿಗಳಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಅದರಲ್ಲೂ ಇವುಗಳನ್ನು ನೀರಿನಲ್ಲಿ ನೆನೆಸಿ ತಿನ್ನುವು ದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಮತ್ತು ನಿಮ್ಮ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ನಿಮ್ಮ ದೇಹದ ಜೀರ್ಣ ಶಕ್ತಿ ಕೂಡ ಅಧಿಕವಾಗುತ್ತದೆ.

ದೇಹದ ರಕ್ತದ ಒತ್ತಡ ನಿರ್ವಹಣೆಯಾಗುತ್ತದೆ

High Blood Pressure (Hypertension) - Target Levels, Symptoms, Treatment

  • ರಕ್ತದ ಒತ್ತಡ ಎನ್ನುವುದು ಬಹಳ ಡೇಂಜರ್. ಒಂದು ವೇಳೆ ನಿಮಗೆ ಹೈ ಬಿಪಿ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ನೀವು ನೆನೆಸಿದ ಒಣ ದ್ರಾಕ್ಷಿ ಸೇವನೆ ಮಾಡುವುದು ಒಳ್ಳೆಯದು.
  • ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಉಪ್ಪು ಬಳಕೆ ಮಾಡುತ್ತಿದ್ದರೆ ನಿಮಗೆ ಅತಿಯಾದ ರಕ್ತದ ಒತ್ತಡ ಉಂಟಾಗುತ್ತದೆ. ಒಣದ್ರಾಕ್ಷಿ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ ಮತ್ತು ಆರೋಗ್ಯ ಕರವಾಗಿ ನಿಮ್ಮ ದೇಹದಲ್ಲಿ ಇರುವಂತಹ ಹೆಚ್ಚುವರಿ ಉಪ್ಪಿನ ಅಂಶವನ್ನು ಇದು ತೆಗೆದುಹಾಕುತ್ತದೆ. ಇದರಿಂದ ನಿಮ್ಮ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ.

ಸದೃಢವಾದ ಮೂಳೆಗಳಿಗೆ ಕಾರಣವಾಗುತ್ತದೆ

  • ಬೋರಾನ್ ಅಂಶ ಸ್ವಲ್ಪ ಹೆಚ್ಚು ಇರುವಂತಹ ಒಣದ್ರಾಕ್ಷಿ ಹಣ್ಣುಗಳಲ್ಲಿ ನಿಮ್ಮ ಮೂಳೆಗಳನ್ನು ಸದೃಡ ಪಡಿಸುವ ಗುಣವಿದೆ.
  • ಪ್ರಮುಖವಾಗಿ ಕ್ಯಾಲ್ಸಿಯಂ ಅಂಶ ಕೂಡ ಒಣದ್ರಾಕ್ಷಿಯಲ್ಲಿ ಕಂಡುಬರುವುದರಿಂದ ನಿಮ್ಮ ದೇಹದಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ. ವಯಸ್ಸಾದ ಮೇಲೆ ಕಂಡುಬರುವಂತಹ ಆಸ್ಟಿಯೋಪೋರೋಸಿಸ್ ಸಮಸ್ಯೆ ಬರಲು ಸಾಧ್ಯವಿರುವುದಿಲ್ಲ.

ಬಾಯಿಯ ದುರ್ವಾಸನೆ ದೂರವಾಗುತ್ತದೆ

  • ಒಂದು ವೇಳೆ ನಿಮ್ಮ ಬಾಯಿ ದುರ್ಗಂಧದಿಂದ ಕೂಡಿದ್ದರೆ, ಒಣ ದ್ರಾಕ್ಷಿ ಹಣ್ಣುಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಅವುಗಳಲ್ಲಿ ಇರುವಂತಹ ಆಂಟಿ ಬ್ಯಾಕ್ಟರಿಯಲ್ ಗುಣ ಲಕ್ಷಣಗಳು ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ.
  • ನಿಯಮಿತವಾಗಿ ಆಗಾಗ ಒಣದ್ರಾಕ್ಷಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಹಲ್ಲುಗಳ ವಸಡುಗಳು ಸಹ ಆರೋಗ್ಯಕರವಾಗಿ ಉಳಿಯುತ್ತವೆ.

Raisins Soaked In Water Has Double Health Benefits.