ನಿದ್ರೆಗೆ ಮುಂಚೆ ಹಾಲು ಕುಡಿಯುತ್ತಿದ್ದೀರಾ? ತೂಕ ಹೆಚ್ಚಾಗುತ್ತೆ ಹುಷಾರ್!!

01-08-22 07:58 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮಗೂ ಸಹ ರಾತ್ರಿ ಮಲಗುವ ಮುಂಚೆ ಹಾಲು ಕುಡಿದು ಮಲಗುವ ಅಭ್ಯಾಸ ಇದೆಯೇ? ಇದರಿಂದ ಹಲವಾರು ತೊಂದರೆಗಳಿವೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಆರೋಗ್ಯಕರವಾದ ಜೀವನ ನಡೆಸಬೇಕು ಎಂದರೆ, ನಾವು ಅದಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ಹೊಂದಿರಬೇಕು. ಆಹಾರ ಪದ್ಧತಿಯ ಜೊತೆ ಜೀವನಶೈಲಿ ಕೂಡ ಒಂದಕ್ಕೊಂದು ತಾಳೆ ಆಗುವಂತೆ ಇರಬೇಕು. ನಾವು ನಮ್ಮ ದೇಹಕ್ಕೆ ಏನು ಸೇರಿಸುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ ಮತ್ತು ನಮ್ಮ ರೂಪುರೇಷೆಗಳು ಸಹ ಇರುತ್ತವೆ.

ಆರೋಗ್ಯಕರ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದರೆ ಅದಕ್ಕೆ ತನ್ನದೇ ಆದ ಕೆಲವು ಉತ್ತಮ ಮಾರ್ಗಗಳಿವೆ. ನಾವು ಆರೋಗ್ಯಕರ ಎಂದುಕೊಂಡಿರುವುದು ಕೆಲವೊಮ್ಮೆ ನಮ್ಮ ನಂಬಿಕೆಗೆ ಮೋಸ ಮಾಡುತ್ತದೆ. ಅಂತಹ ಒಂದು ವಿಚಾರವನ್ನು ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದೇನೆಂದರೆ ರಾತ್ರಿ ಹೊತ್ತು ಹಾಲು ಕುಡಿದು ಮಲಗುವ ಅಭ್ಯಾಸ ಅಷ್ಟು ಒಳ್ಳೆಯದಲ್ಲ ಎಂದು ತಿಳಿದುಬಂದಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹಾಲಿನಲ್ಲಿ ಪ್ರೋಟಿನ್ ಮತ್ತು ಲ್ಯಾಕ್ಟೋಸ್ ಅಂಶವಿದೆ

10 Super Benefits of Drinking Milk at Night

ಹಾಲಿನಲ್ಲಿ ಪ್ರೋಟಿನ್ ಮತ್ತು ಲ್ಯಾಕ್ಟೋಸ್ ಇರುವುದು ನಿಮಗೂ ಕೂಡ ಗೊತ್ತು. ಇದೇ ಕಾರಣಕ್ಕೆ ಇದನ್ನು ಮಲಗಿಕೊಳ್ಳುವ ಮುಂಚೆ ಕುಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಲ್ಯಾಕ್ಟೋಸ್ ಅಂಶ ಕಣ್ಣಿಗೆ ನಿದ್ರೆ ಹತ್ತದಂತೆ ಮಾಡುತ್ತದೆ. ಇದರಿಂದ ಜನರು ನಿದ್ರಾಹೀನತೆ ಸಮಸ್ಯೆಗೆ ಗುರಿಯಾಗಬಹುದು.

ವಿಷಕಾರಿ ಅಂಶಗಳು ದೂರಾಗುವುದಿಲ್ಲ!

Health Benefits of Drinking Milk Before Bed and At Night

  • ರಾತ್ರಿಯ ಸಮಯದಲ್ಲಿ ನಾವು ಮಲಗಿ ನಿದ್ರಿಸುತ್ತಿದ್ದ ಬೇಕಾದರೆ ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದೆ ಸಾಕಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಅವುಗಳಲ್ಲಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನುಹೊರಗೆ ಹಾಕುವುದು ಕೂಡ ಒಂದು.
  • ಆದರೆ ಹಾಲು ಕುಡಿದು ಮಲಗುವುದರಿಂದ ಇದು ಅಷ್ಟು ಸರಾಗವಾಗಿ ನಡೆಯುವುದಿಲ್ಲ ಎಂದು ಹೇಳುತ್ತಾರೆ. ಇದರ ಜೊತೆಗೆ ನಮ್ಮ ಲಿವರ್ ಭಾಗ ಕೂಡ ಸಾಕಷ್ಟು ಮಂದಗತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂಬ ವಿಷಯ ಕೂಡ ಗೊತ್ತಾಗಿದೆ. ಹೀಗಾಗಿ ರಾತ್ರಿ ಮಲಗುವ ಮುಂಚೆ ಹಾಲು ಕುಡಿಯುವ ಅಭ್ಯಾಸವನ್ನು ತಪ್ಪಿಸಿ.

ತಂಪಾದ ಹಾಲು ಕುಡಿಯಲೇಬೇಡಿ!

ಆರೋಗ್ಯ ತಜ್ಞರನ್ನು ಕೇಳಿದರೆ ಸ್ವಲ್ಪ ಉಗುರುಬೆಚ್ಚಗಿನ ಹಾಲನ್ನು ಬೇಕಾದರೆ ರಾತ್ರಿ ಹೊತ್ತು ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ.
ಆದರೆ ಯಾವುದೇ ಕಾರಣಕ್ಕೂ ಮಲಗುವ ಮುಂಚೆ ತಂಪಾದ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಮಾರಕ ಎಂದು ಎಚ್ಚರಿಕೆ ಕೊಡುತ್ತಾರೆ.

ಜೀರ್ಣ ಶಕ್ತಿಗೆ ತೊಂದರೆಯಾಗುತ್ತದೆ

7 Common Causes of Stomach Pain | Health Plus

  • ರಾತ್ರಿ ಹೊತ್ತು ಹಾಲು ಕುಡಿದು ಮಲಗುವುದರಿಂದ ದೇಹದ ಜೀರ್ಣ ಪ್ರಕ್ರಿಯೆ ಮೊದಲಿನಂತೆ ನಡೆಯುವುದಿಲ್ಲ ಎಂಬುದು ತಜ್ಞರ ಮಾತು.
  • ಅದರಲ್ಲೂ ಮೊದಲಿನಿಂದ ಹೊಟ್ಟೆಯ ಸಮಸ್ಯೆಯನ್ನು ಹೊಂದಿರುವವರು ರಾತ್ರಿ ಹೊತ್ತು ಹಾಲು ಕುಡಿದು ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಬಾರದು. ಇದು ಕರುಳಿಗೆ ಕೂಡ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ

ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ

rapid weight loss causes, ಎಚ್ಚರ! ಈ ಕಾಯಿಲೆಗಳು ಬಂದ್ರೆ ದೇಹದ ತೂಕ ಇದ್ದಕ್ಕಿದ್ದಂತೆ  ಕಡಿಮೆಯಾಗುತ್ತದೆ! - these are the reasons why rapid weight loss is a  dangerous problem! - Vijaya Karnataka

  • ಬಹುತೇಕ ಸಣ್ಣ ಇರುವವರು ದಪ್ಪ ಆಗಲು ರಾತ್ರಿ ಹೊತ್ತು ಹಾಲು ಕುಡಿದು ಮಲಗುವ ಅಭ್ಯಾಸ ಮಾಡಿಕೊಳ್ಳಬಹುದು. ಏಕೆಂದರೆ ಒಂದು ಲೋಟ ಹಾಲಿನಿಂದ 120 ಕ್ಯಾಲೋರಿಗಳು ಸಿಗುತ್ತವೆ.
  • ಆದರೆ ಈಗಾಗಲೇ ದಪ್ಪ ಇರುವವರು ಹಾಲು ಕುಡಿದ ಮಲಗುವ ಅಭ್ಯಾಸ ಮಾಡಿಕೊಳ್ಳುವುದು ಅಷ್ಟು ಒಳ್ಳೆಯದಲ್ಲ.
  • ಏಕೆಂದರೆ ದೇಹದಲ್ಲಿರುವ ಕ್ಯಾಲೋರಿಗಳನ್ನು ಕರಗಿಸುವ ಹವ್ಯಾಸವನ್ನು ಮೊದಲು ಮಾಡಿ ಕೊಳ್ಳಬೇಕು. ಹಾಲು ಕುಡಿದರೆ ಮತ್ತಷ್ಟು ಕ್ಯಾಲರಿಗಳು ಸಿಗುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

Drinking Milk Is Fine, But Not Before Bed Why.