ತೂಕ ಕಡಿಮೆ ಮಾಡಿಕೊಳ್ಳುವ ಸಂದರ್ಭದಲ್ಲಿ ರೋಟಿ ಅಥವಾ ಚಪಾತಿ ತಿನ್ನಬಹುದಾ?

04-08-22 10:37 pm       Source: Vijayakarnataka   ಡಾಕ್ಟರ್ಸ್ ನೋಟ್

ಸಮತೋಲನವಾದ ಆಹಾರ ಪದ್ಧತಿ ಇದ್ದರೆ ದೇಹದ ತೂಕ ತಾನಾಗೇ ನಿಯಂತ್ರಣವಾಗುತ್ತದೆ. ಮಾದರಿ ಚಪಾತಿಯ ಪಾತ್ರವನ್ನು ಇಲ್ಲಿ ಮರೆಯುವಂತಿಲ್ಲ. ಹೇಗೆ ಸೇವನೆ ಮಾಡಬೇಕು ಎಂದು ಇಲ್ಲಿ...

ಆರೋಗ್ಯಕರವಾಗಿ ಜೀವಿಸುತ್ತಿರುವ ಮನುಷ್ಯನಿಗೆ ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾದರೆ, ಅದರಿಂದ ದೇಹಕ್ಕೆ ತೊಂದರೆ ತಪ್ಪಿದ್ದಲ್ಲ. ಒಂದಲ್ಲ ಒಂದು ರೀತಿಯಲ್ಲಿ ಆನಂತರದಲ್ಲಿ ಸಮಸ್ಯೆ ಯನ್ನು ಎದುರಿಸುತ್ತಾ ಸಾಗುತ್ತಾನೆ. ಏಕೆಂದರೆ ದೇಹದ ತೂಕ ಎನ್ನುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಲು ಡಯಟ್ ಪದ್ಧತಿ ಮಾಡುವುದು ಹಲವರ ಅಭ್ಯಾಸ ಗಳಲ್ಲಿ ಒಂದು. ಆದರೆ ಇಲ್ಲಿ ನಿಜವಾಗಲೂ ಯಾವ ಆಹಾರ ಪದಾರ್ಥವನ್ನು ಸೇವನೆ ಮಾಡ ಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಜೊತೆಗೆ ಯಾವ ಆಹಾರ ಪದಾರ್ಥದಿಂದ ದೂರ ಉಳಿಯ ಬೇಕು ಎಂಬ ಬಗ್ಗೆ ಮಾಹಿತಿ ಇರುವುದು ಒಳ್ಳೆಯದು. ಹೆಚ್ಚಿನ ದೇಹದ ತೂಕ ಹೊಂದಿರುವವರು ಚಪಾತಿ ಅಥವಾ ರೋಟಿ ತಿನ್ನಬಹುದಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ....

ರೋಟಿಯಲ್ಲಿ ಕ್ಯಾಲೋರಿಗಳು ಹೆಚ್ಚಾಗಿವೆ

 • ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿರುವ ಜನರಿಗೆ ಕ್ಯಾಲೋರಿಗಳ ಸೇವನೆಯ ಬಗ್ಗೆ ಮಾಹಿತಿ ಇರಬೇಕು.
 • ರೋಟಿ ತನ್ನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಒಳಗೊಂಡಿದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ರೊಟಿಯನ್ನು ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಟ್ಟು ಬಿಡುವ ಬದಲು ಸೇವನೆ ಮಾಡುವ ಕ್ಯಾಲೋರಿಗಳಲ್ಲಿ ನಿಯಂತ್ರಣವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ.

ನೀವು ಸೇವನೆ ಮಾಡುವ ಪ್ರಮಾಣ ಬಹಳ ಮುಖ್ಯ

New FDA-approved weight loss device shows promise - Harvard Health

 • ರೋಟಿ ಸೇವನೆ ಮಾಡಿದರೆ ದೇಹದ ತೂಕ ಹೆಚ್ಚಾಗುತ್ತದೆ ಎಂದು ತಿಳಿದುಕೊಂಡು ಸಂಪೂರ್ಣವಾಗಿ ಅದನ್ನು ಸೇವನೆ ಮಾಡುವುದನ್ನು ಬಿಟ್ಟುಬಿಡಬೇಕು ಎಂದು ಆಲೋಚನೆ ಮಾಡುವ ಮೊದಲು ಇನ್ನೊಮ್ಮೆ ಆಲೋಚನೆ ಮಾಡಿ.
 • ಏಕೆಂದರೆ ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಅಂಶಗಳ ಅವಶ್ಯಕತೆ ತುಂಬಾ ಇರುತ್ತದೆ. ನಿಮ್ಮ ದೇಹಕ್ಕೆ ಪ್ರಮುಖವಾಗಿ ಶಕ್ತಿ ಮತ್ತು ಚೈತನ್ಯ ಕೊಡುವುದು ಜೊತೆಗೆ ನಿಮ್ಮ ಹೊಟ್ಟೆ ಹಸಿವನ್ನು ನೀಗಿಸುವುದು ಇದೇ ಕಾರ್ಬೋಹೈಡ್ರೇಟ್ ಅಂಶಗಳು. ನೀವು ಸೇವನೆ ಮಾಡುವ ಕಾರ್ಬೋಹೈಡ್ರೇಟ್ ಅಂಶಗಳು ದೇಹದಲ್ಲಿ ಕರಗಿ ನಿಮಗೆ ಶಕ್ತಿಯನ್ನು ಕೊಡುತ್ತದೆ.

ಹಾಗಾದ್ರೆ ರೋಟಿ ಸೇವನೆ ಮಾಡಬೇಕಾ ಅಥವಾ ಬೇಡ್ವಾ?

Top 8 Indian Foods To Fight Off Fever!

 • ಒಂದು ವೇಳೆ ನೀವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ರೋಟಿ ಸೇವನೆ ಮಾಡಬೇಕು ಅಥವಾ ಬೇಡ ಎಂಬ ಗೊಂದಲದಲ್ಲಿ ನೀವಿದ್ದರೆ, ನಾವು ಅದಕ್ಕೆ ವೈದ್ಯರು ನೀಡಿದ ಪರಿಹಾರವನ್ನು ಕೊಡುತ್ತೇವೆ.
 • ಅಗತ್ಯ ಪ್ರಮಾಣಕ್ಕಿಂತ ಯಾವುದೇ ಆಹಾರವನ್ನು ಸೇವನೆ ಮಾಡಿದರೆ ಇದರಿಂದ ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತದೆ. ಇದರಿಂದ ಕ್ರಮೇಣವಾಗಿ ದೇಹದ ತೂಕ ಕೂಡ ಹೆಚ್ಚಾಗುತ್ತ ಹೋಗುತ್ತದೆ.

ಹಾಗಿದ್ದರೆ ಏನು ಮಾಡಬೇಕು?

diet for weight loss, ತೂಕ ಕಡಿಮೆ ಮಾಡಿಕೊಳ್ಳುವ ಸಂದರ್ಭದಲ್ಲಿ ರೋಟಿ ಅಥವಾ ಚಪಾತಿ ತಿನ್ನಬಹುದಾ? - can a person on weight loss diet eat roti or chapathi? these things you must know - Vijaya Karnataka

 • ನಿಮಗೆಲ್ಲ ಗೊತ್ತಿರುವ ಹಾಗೆ ಕಾರ್ಬೋಹೈಡ್ರೆಟ್ ಅಂಶ ಹೆಚ್ಚಾಗಿ ಒಳಗೊಂಡಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲಾ ಕಡೆ ಇದು ತಯಾರಾಗುತ್ತದೆ. ಹಾಗಾಗಿ ಸಂಪೂರ್ಣವಾಗಿ ಬಿಟ್ಟುಬಿಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ.
 • ಇದರಿಂದ ಸಾಧ್ಯವಾದಷ್ಟು ನಿಯಂತ್ರಣದಲ್ಲಿ ಸೇವನೆ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಅದರಿಂದ ನಮ್ಮ ದೇಹಕ್ಕೆ ನಾರಿನ ಅಂಶ, ಪ್ರೊಟೀನ್ ಮತ್ತು ಕೊಬ್ಬಿನ ಅಂಶ ಸಿಗುತ್ತದೆ. ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಸಿಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ...

Desi Delight Dairy Farm Natural Ghee, Rs 600/litre United Dairy Farms | ID: 19245500473

 • ಆರೋಗ್ಯ ತಜ್ಞರು ಹೇಳುವ ಹಾಗೆ ಕಡಿಮೆ ಎಣ್ಣೆ ಅಥವಾ ತುಪ್ಪಬಳಸಿ ತಯಾರು ಮಾಡಿದ ಗೋಧಿಯಿಂದ ಮಾಡಿದ ರೋಟಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ತುಂಬಾ ಒಳ್ಳೆಯದು. ಆದರೆ ಯಾವ ಪ್ರಮಾಣದಲ್ಲಿ ಸೇವನೆ ಮಾಡುತ್ತೇವೆ ಎಂಬುದರ ಮೇಲೆ ದೇಹದ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ನಿಂತಿರುತ್ತದೆ.
 • ಇನ್ನೊಂದು ಪ್ರಮುಖವಾದ ವಿಚಾರ ಎಂದರೆ ನಾವು ಸೇವನೆ ಮಾಡುವ ಆಹಾರ ಪದಾರ್ಥದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು. ಅಂದರೆ ಆಹಾರಪದ್ಧತಿಯಲ್ಲಿ ನಾವು ಕೇವಲ ಚಪಾತಿ ಯನ್ನು ಮಾತ್ರ ಸೇವನೆ ಮಾಡುವ ಬದಲು ಸಬ್ಜಿ, ದಾಲ್ ಇತ್ಯಾದಿಗಳನ್ನು ಸೇವನೆ ಮಾಡಿದರೆ ಒಳ್ಳೆಯದು. ಇದರಿಂದ ದೀರ್ಘ ಕಾಲ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಬೇರೆ ಬೇರೆ ಆಹಾರ ಪದಾರ್ಥಗಳನ್ನು ತಿನ್ನಬೇಕು ಎನಿಸುವುದಿಲ್ಲ.

ಕೊನೆ ಮಾತು

Is It Bad to Lose Weight Too Quickly?

 • ನಿಮ್ಮ ಆಹಾರ ಪದ್ಧತಿಯಲ್ಲಿ ಚಪಾತಿ ಅಥವಾ ರೋಟಿ ಸೇರಿಸಿಕೊಳ್ಳಿ. ಮಾಡಲು ಅನುಕೂಲ ಮಾಡಿಕೊಡುತ್ತದೆ. ಆದರೆ ಮೇಲೆ ಹೇಳಿದಂಥ ಎಣ್ಣೆ ಅಥವಾ ತುಪ್ಪವನ್ನು ಕಡಿಮೆ ಬಳಸಿ ಮತ್ತು ಕಡಿಮೆ ಪ್ರಮಾಣದಲ್ಲಿ ಸೇವಿಸಿ.
 • ಜೊತೆಗೆ ಸಮತೋಲನವಾದ ಆಹಾರ ಪದ್ಧತಿಯನ್ನು ಸಹ ಕಾಯ್ದುಕೊಳ್ಳು ವುದರಿಂದ ಮತ್ತು ವಾರದಲ್ಲಿ ಐದು ದಿನ ವ್ಯಾಯಾಮ ಮಾಡುವುದರಿಂದ ದೇಹದ ತೂಕ ನಿಯಂತ್ರಣ ಮಾಡಿ ಕೊಳ್ಳಬಹುದು.

Can A Person On Weight Loss Diet Eat Roti Or Chapathi These Things You Must Know.