ಬಾದಾಮಿ ಹಾಲು ಕುಡಿಯಿರಿ, ಸಲೀಸಾಗಿ ದೇಹದ ತೂಕ ಇಳಿಸಿಕೊಳ್ಳಿ!

10-08-22 08:29 pm       Source: Vijayakarnataka   ಡಾಕ್ಟರ್ಸ್ ನೋಟ್

ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಲು ಬೇರೆ ಬೇರೆ ಕಸರತ್ತು ಮಾಡುವ ಬದಲು ಬಾದಾಮಿ ಹಾಲು ಕುಡಿಯಿರಿ. ಆದರೆ ಪ್ಲೇನ್ ಆಗಿರಲಿ ಅಷ್ಟೇ!

ಆರೋಗ್ಯಕರವಾದ ಪಾನೀಯಗಳಲ್ಲಿ ಬಾದಾಮಿ ಹಾಲು ಕೂಡ ಒಂದು. ಹೊಟ್ಟೆಯಲ್ಲಿ ಒಂದು ವೇಳೆ ಹುಣ್ಣುಗಳು ಉಂಟಾದರೆ ಬಾದಾಮಿ ಹಾಲು ಕುಡಿಯುವುದು ಒಳ್ಳೆಯದು ಎಂದು ಹೇಳುತ್ತಾರೆ. ಚರ್ಮದ ಕಾಂತಿ ಹೆಚ್ಚಾಗಲು ಬಾದಾಮಿ ಹಾಲು ಬಳಸುತ್ತಾರೆ.

ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಬಾದಾಮಿ ಹಾಲು ಬೇಕೇಬೇಕು. ಹೀಗೆ ಹಲವಾರು ಆಯಾಮಗಳಲ್ಲಿ ಉಪಯೋಗಕ್ಕೆ ಬರುವ ಬಾದಾಮಿ ಹಾಲು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಕೂಡ ನೆರವಾಗುತ್ತದೆ. ಹೇಗಂತೀರಾ? ಈ ಲೇಖನ ಓದಿ....

ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇವೆ

Homemade Almond Milk | The Unrefined Kitchen | Paleo & Primal Recipes

ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಲು ನೀವು ಕರಗಿಸುವ ಕ್ಯಾಲೋರಿಗಳಿಗಿಂತ ಕಡಿಮೆ ಕ್ಯಾಲೊರಿಗಳನ್ನು ಸೇವನೆ ಮಾಡಬೇಕು. ಸಿಹಿ ರಹಿತ ಬಾದಾಮಿ ಹಾಲು ನೀವು ಕುಡಿಯುವ ಸಾಧಾರಣ ಹಾಲಿಗಿಂತ ಈ ವಿಚಾರದಲ್ಲಿ ತುಂಬಾ ಬೆಸ್ಟ್. ಏಕೆಂದರೆ ಇದರಲ್ಲಿ ಕೇವಲ 43 ಕ್ಯಾಲೋರಿಗಳು ಮಾತ್ರ ಇರುತ್ತವೆ. ಆದರೆ ಸಾಧಾರಣ ಹಾಲಿನಲ್ಲಿ 90 ಕ್ಯಾಲೋರಿಗಳು ಇರಬಹುದು ಎಂದು ಲೆಕ್ಕ ಹಾಕಲಾಗಿದೆ.

ಇದರಲ್ಲಿ ಆರೋಗ್ಯಕರವಾದ ಕೊಬ್ಬಿನ ಅಂಶ ಇರಲಿದೆ

Almond Milk: Nutrition & Benefits | Live Science

  • ಹಸುವಿನ ಹಾಲಿಗೆ ಹೋಲಿಸಿದರೆ ಬಾದಾಮಿ ಹಾಲು ತನ್ನಲ್ಲಿ ಕಡಿಮೆ ಕೊಬ್ಬಿನ ಅಂಶವನ್ನು ಒಳ ಗೊಂಡಿದೆ. ಹಸುವಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಇರಲಿದೆ. ಹಾಗಾಗಿ ಬಾದಾಮಿ ಹಾಲಿನಲ್ಲಿ ಕಂಡುಬರುವ ಕೊಬ್ಬಿನ ಅಂಶವನ್ನು ಆರೋಗ್ಯಕರ ಎಂದು ಸೇವಿಸಬಹುದು.
  • ಇದು ಹೊಟ್ಟೆಯ ಭಾಗದಲ್ಲಿ ಬೊಜ್ಜಿನ ಪ್ರಮಾಣವನ್ನು ಹೆಚ್ಚು ಮಾಡುವುದಿಲ್ಲ. ಜೊತೆಗೆ ಕೊಲೆಸ್ಟ್ರಾಲ್ ಅಂಶ ಕೂಡ ದೇಹದಲ್ಲಿ ಹೆಚ್ಚುವುದಿಲ್ಲ. ಆರೋಗ್ಯಕರವಾದ ಹೃದಯ ನಿಮ್ಮದಾಗುತ್ತದೆ.

ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುತ್ತದೆ

  • ಇದು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಬಹಳ ಒಳ್ಳೆಯದು. ಏಕೆಂದರೆ ಬಾದಾಮಿ ಬೀಜಗಳು ತಮ್ಮಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಅಂಶವನ್ನು ಒಳಗೊಂಡಿರುತ್ತವೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಬಾದಾಮಿ ಹಾಲು ತನ್ನಲ್ಲಿ ಕೇವಲ ಎರಡು ಗ್ರಾಂ ಕಾರ್ಬೋ ಹೈಡ್ರೇಟ್ ಅಂಶವನ್ನು ಒಳಗೊಂಡಿರುತ್ತದೆ.
  • ಆದರೆ ಸಾಧಾರಣ ಹಸುವಿನ ಹಾಲಿನಲ್ಲಿ ಇದು 12 ಗ್ರಾಮ್ ಇರಲಿದೆ. ಇದರಿಂದ ಬಾದಾಮಿ ಹಾಲು ಕುಡಿದರೆ ದೇಹದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತದೆ ಮತ್ತು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶಗಳ ಪ್ರಮಾಣ ಏರಿಕೆ ಆಗುತ್ತದೆ.

ವಿಟಮಿನ್ ಅಂಶಗಳು ಹೆಚ್ಚಾಗಿವೆ

The health benefits of almonds | BBC Good Food

  • ಬಾದಾಮಿ ಬೀಜಗಳನ್ನು ಬಳಸಿ ಮಾಡುವ ಬಾದಾಮಿ ಹಾಲಿನ ಉತ್ಪನ್ನಗಳಲ್ಲಿ ಅಪಾರ ಪ್ರಮಾಣದ ವಿಟಮಿನ್ ಅಂಶಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ b12 ಇತ್ಯಾದಿಗಳು.
  • ದೇಹದ ಮೆಟಬಾಲಿಸಂ ಪ್ರಕ್ರಿಯೆ ಉತ್ತಮಗೊಳ್ಳಲು ವಿಟಮಿನ್ ಬಿ12 ಪ್ರಮುಖವಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ದೇಹದ ಕ್ಯಾಲೊರಿಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲ ದೇಹದ ತೂಕವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ. ನಿಮ್ಮ ನರನಾಡಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.

ಗಮನಿಸಬೇಕಾದ ಮಾಹಿತಿ

Is Almond Milk Healthier Than Regular Milk?

  • ಹೊರಗಡೆ ನೇರವಾಗಿ ನೀವು ಬಾದಾಮಿ ಹಾಲನ್ನು ಖರೀದಿ ಮಾಡುತ್ತಿದ್ದೀರಿ ಎಂದರೆ, ಅದರಲ್ಲಿ ಸಕ್ಕರೆ ಅಂಶ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಏಕೆಂದರೆ ಸಕ್ಕರೆ ಅಂಶ ಹೆಚ್ಚಾಗಿರುವ ಬಾದಾಮಿ ಹಾಲು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅಂಶಗಳಲ್ಲಿ ಹೆಚ್ಚಾಗಿರುತ್ತದೆ.
  • ಇದರ ಜೊತೆಗೆ ಯಾವುದೇ ಫ್ಲೇವರ್ ಹೊಂದಿರುವ ಬಾದಾಮಿ ಹಾಲು ಸಹ ಬೇಡ. ಪ್ಲೇನ್ ಬಾದಾಮಿ ಹಾಲು ಕುಡಿಯಲು ಬೆಸ್ಟ್. ನೀವೇ ಮನೆಯಲ್ಲಿ ಸಹ ಬಾದಾಮಿ ಬೀಜಗಳನ್ನು ಹುರಿದು ಬಾದಾಮಿ ಹಾಲು ತಯಾರು ಮಾಡಿಕೊಳ್ಳಬಹುದು.

Almond Milk Is Better And Best For Weight Loss.