ಮೊಳಕೆ ಬಂದ ಕಡಲೆಕಾಳು ಹಾಗೂ ಬೆಲ್ಲ ಒಟ್ಟಿಗೆ ಸೇವಿಸಿದ್ರೆ ರಕ್ತಹೀನತೆ ಸಮಸ್ಯೆ ಬರೋದಿಲ್ಲ

13-08-22 08:05 pm       Source: Vijayakarnataka   ಡಾಕ್ಟರ್ಸ್ ನೋಟ್

ಕಡಲೆಕಾಳಿನ ಅಡುಗೆ ಮಾಡುವಾಗ ಸಾಮಾನ್ಯವಾಗಿ ಹೆಚ್ಚಿನವರು ಕಡಲೆಕಾಳನ್ನು ಮೊಳಕೆ ಭರಿಸಿ ಸೇವಿಸುತ್ತಾರೆ. ಯಾಕೆಂದರೆ ಮೊಳಕೆ ಬಂದ ಕಾಳುಗಳಲ್ಲಿ ಹೆಚ್ಚು ಪೌಷ್ಟಿಕಾಂಶಗಳಿರುತ್ತವೆ ಎನ್ನುವ ಕಾರಣಕ್ಕೆ...

ಮೊಳಕೆ ಬಂದ ಕಡಲೆಕಾಳು ಹಾಗೂ ಬೆಲ್ಲವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಎರಡೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳಾಗಿವೆ ಮತ್ತು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುತ್ತವೆ. ಇವೆರಡನ್ನೂ ಜೊತೆಯಾಗಿ ತಿಂದರೆ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.

ಕಡಲೆ ಕಾಳು ಹಾಗೂ ಬೆಲ್ಲದಲ್ಲಿರುವ ಪೋಷಕಾಂಶಗಳು

Mixed Bean Sprouts | Molakekattidha Kalu | How To Prepare Mixed Bean Sprouts  - YouTube

ಕಡಲೆಯು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್, ಸತು, ಕಬ್ಬಿಣ, ವಿಟಮಿನ್ ಬಿ ಮತ್ತು ಎ ಯ ಅತ್ಯುತ್ತಮ ಮೂಲವಾಗಿದೆ. ಬೆಲ್ಲವು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ತಾಮ್ರ ಮತ್ತು ಸತು, ವಿಟಮಿನ್ ಬಿ ಇತ್ಯಾದಿಗಳಲ್ಲಿ ಸಮೃದ್ಧವಾಗಿದೆ.

ಕಾಯಿಲೆಗಳನ್ನು ದೂರವಿಡುತ್ತದೆ

Natural Jaggery at best price INR 80 / Kilogram in Erode Tamil Nadu from  Power India Exporters | ID:4219409

ನೀವು ಈ ಎರಡೂ ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ, ಇದು ಗಂಭೀರ ಕಾಯಿಲೆಗಳನ್ನು ನಿಮ್ಮಿಂದ ದೂರವಿಡುವುದಲ್ಲದೆ, ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ಅದರಲ್ಲೂ ಮೊಳಕೆ ಕಾಳಿನಲ್ಲಿ ಬೆಲ್ಲವನ್ನು ಬೆರೆಸಿ ಅಥವಾ ಎರಡನ್ನೂ ಒಟ್ಟಿಗೆ ಸೇವಿಸಿದರೆ. ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದು ಸಹ ಉತ್ತಮವಾಗಿರುತ್ತದೆ.

ರಕ್ತಹೀನತೆ ಹೋಗಲಾಡಿಸುವಲ್ಲಿ ಸಹಕಾರಿ

ದೇಹದಲ್ಲಿನ ರಕ್ತಹೀನತೆಯ ಚಿಕಿತ್ಸೆಯಲ್ಲಿ ಮೊಳಕೆಯೊಡೆದ ಕಾಳು ಮತ್ತು ಬೆಲ್ಲದ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇವೆರಡೂ ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.

ಇದು ರಕ್ತದಲ್ಲಿ ಆಮ್ಲಜನಕ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತಹೀನತೆಯನ್ನು ನಿವಾರಿಸುವುದರ ಜೊತೆಗೆ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

High Blood Pressure Symptoms: Emergency Symptoms, Treatments, and More

ಮೊಳಕೆ ಕಾಳು ಮತ್ತು ಬೆಲ್ಲವು ಮೆಗ್ನೀಸಿಯಮ್, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ಬಿಪಿಯನ್ನು ನಿಯಂತ್ರಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಪ್ರಯೋಜನಕಾರಿ

jaggery benefits, ಮೊಳಕೆ ಬಂದ ಕಡಲೆಕಾಳು ಹಾಗೂ ಬೆಲ್ಲ ಒಟ್ಟಿಗೆ ಸೇವಿಸಿದ್ರೆ  ರಕ್ತಹೀನತೆ ಸಮಸ್ಯೆ ಬರೋದಿಲ್ಲ - health benefits of sprouted chana and jaggery -  Vijaya Karnataka

ಮೊಳಕೆ ಕಾಳು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದರೊಂದಿಗೆ ಬೆಲ್ಲವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗ್ಯಾಸ್, ಮಲಬದ್ಧತೆ, ಅಜೀರ್ಣ, ಹೊಟ್ಟೆ ಉಬ್ಬುವುದು ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

ದೇಹಕ್ಕೆ ಶಕ್ತಿ ನೀಡುತ್ತದೆ

Physical Exercise and heat | Gran Alacant Advertiser

ಕಡಲೆಕಾಳು ಹಾಗೂ ಬೆಲ್ಲ ರಕ್ತದ ಕೊರತೆಯನ್ನು ಹೋಗಲಾಡಿಸುವ ಜೊತೆಗೆ, ದೈಹಿಕ ಆಯಾಸ ಮತ್ತು ದೌರ್ಬಲ್ಯವನ್ನು ದೂರಮಾಡುತ್ತದೆ. ಈ ಸಂಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗಿರುತ್ತವೆ

Does Running Help Build Bone Strength As You Age? | Fitpage

ನೀವು ಪ್ರತಿದಿನ ಒಂದು ಹಿಡಿ ಮೊಳಕೆ ಕಾಳುಗಳೊಂದಿಗೆ ಬೆಲ್ಲವನ್ನು ಸೇವಿಸಿದರೆ, ಅದು ನಿಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಏಕೆಂದರೆ ಅವು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಇವೆರಡನ್ನೂ ಜೊತೆಯಾಗಿ ಸೇವಿಸುವುದರಿಂದ ಮೂಳೆ ಮುರಿತ, ಕೀಲು ನೋವು ಮತ್ತು ಹಲ್ಲುಗಳು ಮುರಿಯುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Health Benefits Of Sprouted Chana And Jaggery.