ಕಿಡ್ನಿ ಆರೋಗ್ಯದಿಂದಿರಬೇಕಾದರೆ ಈ ಆಹಾರಗಳನ್ನು ಸೇವಿಸಲೇ ಬೇಡಿ

15-08-22 08:02 pm       Source: Vijayakarnataka   ಡಾಕ್ಟರ್ಸ್ ನೋಟ್

ನಾವು ಸೇವಿಸುವ ಕೆಲವು ಆಹಾರಗಳು ನಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅವುಗಳನ್ನು ಸೇವಿಸುವುದರಿಂದ ಮೂತ್ರಪಿಂಡದ ಆರೋಗ್ಯ ಹದಗೆಡಬಹುದು.

ನಾವು ಆರೋಗ್ಯದಿಂದಿರಬೇಕಾದರೆ ನಮ್ಮ ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಬೇಕು. ನಮ್ಮ ಕಿಡ್ನಿಯ ಕಾಳಜಿ ವಹಿಸದಿದ್ದರೆ ಭವಿಷ್ಯದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಮತ್ತು ರೋಗಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಕೆಲವೊಂದು ಆಹಾರಗಳಿಂದ ದೂರವಿರಬೇಕು

What should you not eat in Kidney Stones?

ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ರಕ್ತದಲ್ಲಿನ ನೀರು, ಲವಣಗಳು ಮತ್ತು ಖನಿಜಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಅವು ಸಹಾಯ ಮಾಡುತ್ತವೆ.

ಹಾಗೆಯೇ ಅನಾರೋಗ್ಯಕರ ಆಹಾರದ ಆಯ್ಕೆಗಳನ್ನು ಒಳಗೊಂಡಿರುವ ಅನುಚಿತ ಜೀವನಶೈಲಿಯು ನಿಮ್ಮ ಕಿಡ್ನಿಯ ಆರೋಗ್ಯ ಮತ್ತು ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸುತ್ತದೆ. ನಿಮ್ಮ ಮೂತ್ರಪಿಂಡ ಆರೋಗ್ಯದಿಂದಿರಬೇಕಾದರೆ ನೀವು ಕೆಲವೊಂದು ಆಹಾರಗಳನ್ನು ತಿನ್ನಲೇ ಬಾರದು.

ಸೋಡಾಗಳು

Drinking Cold Drinks during Pregnancy: Harmful Effects & Alternatives

ಸೋಡಾಗಳು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ. ಇವುಗಳು ನಿಮ್ಮ ಆಹಾರದಲ್ಲಿ ಹೆಚ್ಚುವರಿ ಕ್ಯಾಲೊರಿಗಳನ್ನು ಸೇರಿಸುತ್ತವೆ, ಇದರಿಂದ ತೂಕ ಹೆಚ್ಚಾಗಲು ಕಾರಣವಾಗಬಹುದು.

ಸೋಡಾಗಳನ್ನು ಸೇವಿಸುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ, ಮೂತ್ರಪಿಂಡದ ಕಾಯಿಲೆ, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೋಡಾದ ಬದಲು ನೀರು ಅಥವಾ ತಾಜಾ ನಿಂಬೆ ಪಾನಕದಂತಹ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ.

ಸಂಸ್ಕರಿಸಿದ ಮಾಂಸಗಳು

World Cancer Day 2021 | ಆಹಾರದ ಬಗ್ಗೆ ಇರಲಿ ಎಚ್ಚರ, ಸಂಸ್ಕರಿಸಿದ ಮಾಂಸ, ತಿಂಡಿಗಳಿಂದ  ದೂರ ಇದ್ದುಬಿಡಿ | World cancer day 2021 healthy diet will reduce my risk of  cancer | TV9 Kannada

ಬೇಕನ್, ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಬರ್ಗರ್ ಪ್ಯಾಟಿಗಳಂತಹ ಸಂಸ್ಕರಿಸಿದ ಮಾಂಸಗಳ ಸೇವನೆಯು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಸಂಸ್ಕರಿಸಿದ ಮಾಂಸಗಳಲ್ಲಿ ಸೋಡಿಯಂನಲ್ಲಿ ಅಧಿಕವಾಗಿರುತ್ತವೆ .

ನಿಯಮಿತವಾಗಿ ಹೆಚ್ಚುವರಿ ಸೋಡಿಯಂ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ಸಸ್ಯ ಪ್ರೋಟೀನ್‌ಗಿಂತ ಹೆಚ್ಚಿನ ಪ್ರಾಣಿ ಪ್ರೋಟೀನ್‌ನ ಸೇವನೆಯು ಮೂತ್ರಪಿಂಡದ ಕಾಯಿಲೆಯ ಬೆಳವಣಿಗೆಯನ್ನು ಹೆಚ್ಚಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

​ಹೆಪ್ಪುಗಟ್ಟಿದ ಆಹಾರಗಳು

These Foods Are Not Good For Kidney - ಕಿಡ್ನಿ ಆರೋಗ್ಯದಿಂದಿರಬೇಕಾದರೆ ಈ  ಆಹಾರಗಳನ್ನು ಸೇವಿಸಲೇ ಬೇಡಿ

ಹೆಪ್ಪುಗಟ್ಟಿದ ಆಹಾರಗಳೆಂದರೆ ಫ್ರಿಡ್ಜ್‌ನಲ್ಲಿಟ್ಟು ಗಟ್ಟಿಯಾಗಿರುವ ಆಹಾರಗಳು. ಅದು ಸೂಪರ್‌ ಮಾರ್ಟ್‌ಗಳಲ್ಲಿ ದೊರೆಯುವ ರೆಡಿಮೆಡ್ ಆಹಾರಗಳೂ ಆಗಿರಬಹುದು. ಇವು ಟೈಪ್ 2 ಮಧುಮೇಹದ ಬೆಳವಣಿಗೆಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ.

ಹೆಚ್ಚು ಸಂಸ್ಕರಣೆ ಎಂದರೆ ನಿಮ್ಮ ಆಹಾರವು ಗುಪ್ತ ಕೊಬ್ಬು, ಸಕ್ಕರೆ ಅಥವಾ ಸೋಡಿಯಂನಿಂದ ತುಂಬಿರಬಹುದು. ಅದಕ್ಕಾಗಿ ತಾಜಾ ಆಹಾರವನ್ನು ತಯಾರಿಸುವುದು ಯಾವಾಗಲೂ ಉತ್ತಮವಾಗಿದೆ.

ನೀವು ಹೆಪ್ಪುಗಟ್ಟಿದ ಆಹಾರವನ್ನು ಸೇವಿಸಬೇಕಾದರೆ, ಲೇಬಲ್‌ನಲ್ಲಿ "ಕಡಿಮೆ ಸೋಡಿಯಂ" ಅಥವಾ "ಸೋಡಿಯಂ ಸೇರಿಸಲಾಗಿಲ್ಲ" ಎಂದು ಬರೆದಿರುವವುಗಳನ್ನು ಆರಿಸಿಕೊಳ್ಳಿ. ನಿಮ್ಮ ಅಡುಗೆಮನೆಯಿಂದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವ ಮೂಲಕ ನೀವು ಅವುಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸಬಹುದು.

​ಮೇಯನೇಸ್

Mayonnaise Recipe | Easy Homemade Mayonnaise Recipe | How to Make Mayonnaise

ಸಲಾಡ್‌ಗಳು ಅಥವಾ ಸ್ಯಾಂಡ್‌ವಿಚ್‌ಗಳಲ್ಲಿ ಮೆಯನೇಸ್ ಬಳಸಲಾಗುತ್ತದೆ. ಇದು ಆಹಾರಕ್ಕೆ ರುಚಿಯನ್ನು ನೀಡುತ್ತದೆ. ಆದರೆ ನಿಮ್ಮ ಆರೋಗ್ಯಕರ ಆಹಾರದ ಮೌಲ್ಯವನ್ನು ಕ್ಷೀಣಿಸಬಹುದು. ಕೇವಲ ಒಂದು ಚಮಚ ಮೇಯನೇಸ್ 103 ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಅದರೊಂದಿಗೆ, ಮೇಯೊ ಕೂಡ ಸಾಮಾನ್ಯವಾಗಿ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ನೀವು ಅದನ್ನು ಬಳಸಲೇ ಬೇಕಾಗಿದ್ದರೆ ಕೊಬ್ಬು ಮುಕ್ತ ಅಥವಾ ಕಡಿಮೆ ಕ್ಯಾಲೋರಿ ಮೇಯನೇಸ್‌ಗಳನ್ನು ಆರಿಸಿಕೊಳ್ಳಿ.

ಫ್ರೆಂಚ್ ಫ್ರೈ

French Fry – eEatit.com

ನೀವು ಚಿಪ್ಸ್‌ನಂತಹ ಪ್ಯಾಕ್ ಮಾಡಿದ ಆಹಾರಗಳಿಂದ ಅಥವಾ ಫ್ರೆಂಚ್ ಫ್ರೈಗಳ ರೂಪದಲ್ಲಿ ಫಾಸ್ಟ್ ಫುಡ್ ನಲ್ಲಿ ಆಲೂಗಡ್ಡೆಯನ್ನು ಸೇವಿಸುತ್ತಿದ್ದರೆ, ಈ ಹುರಿದ ಆಲೂಗಡ್ಡೆಗಳು ನಿಮ್ಮ ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ.

ನಿಮ್ಮ ಹೃದಯ ಮತ್ತು ಮೂತ್ರಪಿಂಡಗಳನ್ನು ಕಾಯಿಲೆಗಳಿಂದ ರಕ್ಷಿಸಲು ಡೀಪ್-ಫ್ರೈಡ್ ಆಹಾರವನ್ನು ತಪ್ಪಿಸಬೇಕು. ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಕೂಡ ಅಧಿಕವಾಗಿದೆ, ನೀವು ಈಗಾಗಲೇ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ.

These Foods Are Not Good For Kidney.