ದಿನಕ್ಕೊಂದು ಕೆಂಪು ಬಾಳೆಹಣ್ಣು ತಿಂದ್ರೆ, ಆರೋಗ್ಯಕ್ಕೆ ಸಿಕ್ಕಾಪಟ್ಟೆ ಪ್ರಯೋಜನಗಳಿವೆ!

18-08-22 08:26 pm       Source: Vijayakarnataka   ಡಾಕ್ಟರ್ಸ್ ನೋಟ್

ಊಟ ಆದ ಮೇಲೆ ಒಂದು ಬಾಳೆ ಹಣ್ಣು ತಿನ್ನಬೇಕು ನಿಜ. ಆದರೆ ಅದು ಕೆಂಪು ಬಾಳೆಹಣ್ಣು ಆದರೆ ಇನ್ನೂ ಉತ್ತಮ.

ಕೆಂಪು ಬಾಳೆಹಣ್ಣು ಸಾಕಷ್ಟು ಜನರಿಗೆ ಗೊತ್ತಿಲ್ಲ. ಆದರೆ ದೊಡ್ಡ ದೊಡ್ಡ ಅಂದರೆ ಮೆಟ್ರೋ ನಗರಗಳಲ್ಲಿ ಇದು ಅಲ್ಲಲ್ಲಿ ಮಾರಾಟಕ್ಕೆ ಕಂಡು ಬರುತ್ತದೆ. ಸಾಧಾರಣ ಬಾಳೆ ಹಣ್ಣುಗಳಿಗಿಂತ ನೋಡಲು ಸ್ವಲ್ಪ ದೊಡ್ಡದಾಗಿದ್ದು, ಅಲ್ಪ ಪ್ರಮಾಣದಲ್ಲಿ ದುಬಾರಿ ಕೂಡ ಎನಿಸುತ್ತದೆ.

ಇದು ರುಚಿಯಲ್ಲೂ ಕೂಡ ಮಾಮೂಲಿ ಬಾಳೆಹಣ್ಣುಗಳಿಗೆ ಹೋಲಿಸಿದರೆ ತುಂಬಾ ಚೆನ್ನಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಇದು ಮನುಷ್ಯನ ದೇಹಕ್ಕೆ ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಹಾಗಾದರೆ ಬನ್ನಿ ಕೆಂಪು ಬಾಳೆ ಹಣ್ಣಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ....

ಕಿಡ್ನಿಗಳಿಗೆ ತುಂಬಾ ಒಳ್ಳೆಯದು

home remedies for kidney stones, ಯಾವುದೇ ಖರ್ಚಿಲ್ಲದೆ ಕಿಡ್ನಿ ಕಲ್ಲುಗಳನ್ನು ಈ  ರೀತಿಯೂ ಕರಗಿಸಬಹುದು - natural ways to remove kidney stones without surgery -  Vijaya Karnataka

  • ಕೆಂಪು ಬಾಳೆ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶದ ಪ್ರಮಾಣ ತುಂಬಾ ಹೇರಳವಾಗಿ ಕಂಡುಬರುತ್ತದೆ. ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆಯನ್ನು ಇದು ತಡೆಯುತ್ತದೆ.
  • ಮನುಷ್ಯನಿಗೆ ಮೂಳೆಗಳು ಗಟ್ಟಿ ಬರುವಂತೆ ಸಹಕಾರಿಯಾಗುವ ಕ್ಯಾಲ್ಸಿಯಂ ಅಂಶವನ್ನು ದೇಹದಲ್ಲಿ ಹಿಡಿದಿಡುವ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ. ಹೀಗಾಗಿ ಕೆಂಪು ಬಾಳೆಹಣ್ಣು ತಿನ್ನುವುದರ ಮೂಲಕ ಮುಂದಿನ ದಿನಗಳಲ್ಲಿ ಆಸ್ಟಿಯೋಪೋರೋಸಿಸ್ ನಂತಹ ಸಮಸ್ಯೆಗಳನ್ನು ಎದುರಿಸುವುದು ತಪ್ಪುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ

how to boost immunity, ಬೆಳಿಗ್ಗೆ ಎದ್ದ ಕೂಡಲೇ ಈ 5 ನಿತ್ಯಕರ್ಮಗಳನ್ನು ಮಾಡಿದ್ರೆ, ರೋಗ  ನಿರೋಧಕ ಶಕ್ತಿ ಹೆಚ್ಚುತ್ತೆ! - boost your immunity with these effective morning  rituals - Vijaya Karnataka

  • ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ತುಂಬಾ ಹೆಚ್ಚಾಗಿದೆ. ಆರೋಗ್ಯಕರವಾದ ರೋಗ ನಿರೋಧಕ ಶಕ್ತಿ ನಿಮಗೆ ಸಿಗಬೇಕು ಎಂದರೆ ಪ್ರಮುಖವಾಗಿ ಇಂತಹ ವಿಟಮಿನ್ ಪ್ರಮಾಣ ನಿಮ್ಮ ದೇಹಕ್ಕೆ ಸೇರಬೇಕು.
  • ಕಾಯಿಲೆಯ ಸಂದರ್ಭಗಳಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮತ್ತು ನಿಮ್ಮ ದೇಹ ಮತ್ತಷ್ಟು ಸೋಂಕಿಗೆ ಒಳಗಾಗದೇ ಇರಲು ನೀವು ಕೆಂಪು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು.

ಚರ್ಮದ ಆರೋಗ್ಯಕ್ಕೆ ಉತ್ತಮ

6 Red Banana Health Benefits You Wouldnt Know About - NDTV Food

  • ಕೆಂಪು ಬಾಳೆಹಣ್ಣು ಕೇವಲ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಇದಕ್ಕಾಗಿ ನೀವು ಕೆಂಪು ಬಾಳೆಹಣ್ಣನ್ನು ತಿನ್ನಬಹುದು ಅಥವಾ ಸ್ಕಿನ್ ಪ್ಯಾಕ್ ತರಹ ಚರ್ಮದ ಮೇಲೆ ಅನ್ವಯಿಸಬಹುದು.
  • ತುಂಬಾ ಜನರು ಇದನ್ನು ಓಟ್ಸ್ ಜೊತೆಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಸ್ವಲ್ಪ ಜೇನುತುಪ್ಪ ಬೆರೆಸಿ ಮುಖದ ಮೇಲೆ ಅನ್ವಯಿಸಿದರೆ ಮತ್ತು ಕೆಲವು ನಿಮಿಷಗಳು ಒಣಗಲು ಬಿಟ್ಟು ಆನಂತರ ಮುಖ ತೊಳೆದುಕೊಂಡರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.

ದೇಹದಲ್ಲಿ ರಕ್ತ ಶುದ್ಧವಾಗುತ್ತದೆ

ರಕ್ತದ ಕ್ಯಾನ್ಸರ್ ಎಂಬ ಕ್ಯಾನ್ಸರ್ ಗಳ ರಾಜ - Vydyaloka

ರಕ್ತ ಶುದ್ಧೀಕರಣಕ್ಕೆ ಅನುಕೂಲವಾಗುವಂತೆ ಇರುವಂತಹ ಕೆಲವು ಬಗೆಯ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಕೆಂಪು ಬಾಳೆ ಹಣ್ಣಿನಲ್ಲಿ ಕಂಡುಬರುತ್ತದೆ. ರಕ್ತ ಶುದ್ಧೀಕರಣಕ್ಕೆ ನೆರವಾ ಗುವುದು ಮಾತ್ರವಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕೂಡ ಹೆಚ್ಚಾಗುತ್ತದೆ.

ದೇಹದ ತೂಕ ಕಡಿಮೆಯಾಗುತ್ತದೆ

ವ್ಯಾಯಾಮ ಮಾಡದೆಯೂ ದೇಹದ ತೂಕ ಇಳಿಸಿಕೊಳ್ಳಿ: ಇಲ್ಲಿದೆ ಸರಳ ಉಪಾಯ | Weight loss tips  without excercise for maintaing good health | TV9 Kannada

  • ಕೆಂಪು ಬಾಳೆಹಣ್ಣು ನಾರಿನ ಅಂಶ ನೀಡುವಂತಹ ಹಣ್ಣಾಗಿದೆ. ಇದು ನಿಮ್ಮ ಹೊಟ್ಟೆ ತುಂಬುವಂತೆ ನೋಡಿಕೊಳ್ಳುತ್ತದೆ.
  • ಅಷ್ಟೇ ಅಲ್ಲದೆ ನಿಮಗೆ ಒಂದು ಬಾಳೆಹಣ್ಣು ತಿಂದರೆ 90 ರಿಂದ 100 ಕ್ಯಾಲೋರಿಗಳು ಸಿಗುತ್ತವೆ ಜೊತೆಗೆ ನಾರಿನ ಅಂಶ ಕೂಡ ಇರುವುದರಿಂದ ನಿಮ್ಮ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ ಮತ್ತು ಬೇರೆ ಆಹಾರ ಪದಾರ್ಥಗಳನ್ನು ತಿನ್ನಬೇಕು ಎನ್ನುವ ನಿಮ್ಮ ಬಯಕೆ ಇಲ್ಲವಾಗುತ್ತದೆ. ಇದರಿಂದ ಸುಲಭವಾಗಿ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ

Red Banana Pictures | Download Free Images on Unsplash

  • ಪ್ರಮುಖವಾಗಿ ಇದಕ್ಕೆ ಕಾರಣ ಎಂದರೆ ಕೆಂಪು ಬಾಳೆಹಣ್ಣಿನಲ್ಲಿ ಕಂಡುಬರುವಂತಹ ಮೂರು ಬಗೆಯ ಸಿಹಿ ಅಂಶಗಳು. ಉದಾಹರಣೆಗೆ ಗ್ಲುಕೋಸ್, ಸುಕ್ರೋಸ್, ಫ್ರಕ್ಟೋಸ್. ಇವುಗಳು ದೇಹ ಸೇರಿದ ನಂತರದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ.
  • ಇದರಿಂದ ನಿಮಗೆ ಶಕ್ತಿ ಮತ್ತು ಚೈತನ್ಯ ನಿಧಾನವಾಗಿ ಸಿಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ. ಬೆಳಗಿನ ಉಪಹಾರದ ಸಮಯದಲ್ಲಿ ನೀವು ಕೆಂಪು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿ ಕೊಳ್ಳಬಹುದು.

ಅನಿಮಿಯ ಸಮಸ್ಯೆ ಇಲ್ಲವಾಗುತ್ತದೆ

benefits of red banana, ದಿನಕ್ಕೊಂದು ಕೆಂಪು ಬಾಳೆಹಣ್ಣು ತಿಂದ್ರೆ, ಆರೋಗ್ಯಕ್ಕೆ  ಸಿಕ್ಕಾಪಟ್ಟೆ ಪ್ರಯೋಜನಗಳಿವೆ! - know the amazing health benefits of red banana  - Vijaya Karnataka

  • ನಿಮಗೆ ಯಾವಾಗ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಎದುರಾಗುತ್ತದೆ ಆಗ ಅನಿಮಿಯಾ ಎನ್ನುವ ಸಮಸ್ಯೆ ಬರುತ್ತದೆ.ಕೆಂಪು ಬಾಳೆ ಹಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ.
  • ಇದು ನಿಮ್ಮ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಸೇರಿಕೊಂಡು ಹಿಮೋಗ್ಲೋಬಿನ್ ಉತ್ಪತ್ತಿ ಮಾಡಿ ಒಂದು ಬದಿಯಿಂದ ಮತ್ತೊಂದು ಬದಿಗೆ ರಕ್ತನಾಳಗಳ ಮೂಲಕ ತೆಗೆದುಕೊಂಡು ಹೋಗುತ್ತದೆ. ಕೆಂಪು ಬಾಳೆಹಣ್ಣುಗಳಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವುದರಿಂದ, ನಿಮ್ಮ ಅವಶ್ಯಕತೆಗೆ ಇದು ಸಾತ್ ಕೊಡುತ್ತದೆ.

ವಿವಿಧ ಅಡುಗೆಗಳಲ್ಲಿ ಇದನ್ನು ಬಳಸಲಾಗುತ್ತದೆ

benefits of red banana, ದಿನಕ್ಕೊಂದು ಕೆಂಪು ಬಾಳೆಹಣ್ಣು ತಿಂದ್ರೆ, ಆರೋಗ್ಯಕ್ಕೆ  ಸಿಕ್ಕಾಪಟ್ಟೆ ಪ್ರಯೋಜನಗಳಿವೆ! - know the amazing health benefits of red banana  - Vijaya Karnataka

ಕೆಂಪು ಬಾಳೆ ಹಣ್ಣು ಹಸಿಯಾಗಿ ತಿನ್ನಲು ಸಾಕಷ್ಟು ರುಚಿ ಇರುತ್ತದೆ. ಆದರೆ ಇದನ್ನು ಬೇಯಿಸಿ ತಿಂದರೆ ಮತ್ತಷ್ಟು ರುಚಿ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಬೇರೆಬೇರೆ ಹಣ್ಣುಗಳ ಜೊತೆ ಇದನ್ನು ಕಾಂಬಿನೇಶನ್ ಮಾಡಿ ಜೊತೆಗೆ ಮೊಸರು ಸೇರಿಸಿ ರುಚಿಕರ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಇದು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಕೂಡ ಟ್ರೈ ಮಾಡಬಹುದು.

Know The Amazing Health Benefits Of Red Banana.