ಮಿತಿಮೀರಿದ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡುವ 5 ಬೆಸ್ಟ್ ಚಹಾಗಳು

20-08-22 02:53 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಸಮಸ್ಯೆಯನ್ನು ತಕ್ಕಮಟ್ಟಿಗೆ ದೂರ ಮಾಡಲು ನಿಮಗೆ ಸಹಾಯ ಮಾಡುವ 5 ಅದ್ಭುತ ಚಹಾಗಳ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಯಾವುದೇ ಕಾರಣಕ್ಕೂ ಮಧುಮೇಹ ಹೆಚ್ಚಾಗಲು ಬಿಡಬಾರದು. ಇದು ಕೆಲವೊಮ್ಮೆ ಪ್ರಾಣಕ್ಕೆ ತೊಂದರೆ ತರಬಹುದು. ರಕ್ತದೊತ್ತಡಕ್ಕಿಂತ ಇದು ತುಂಬಾ ಅಪಾಯಕಾರಿ. ಸಕ್ಕರೆ ಕಾಯಿಲೆಯನ್ನು ಹೊಂದಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಮತ್ತು ಜೀವನ ಶೈಲಿಯಲ್ಲಿ ಉತ್ತಮ ನಿರ್ವಹಣೆಯನ್ನು ಕಾಯ್ದುಕೊಳ್ಳಬೇಕು.

ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡುವುದು, ಸಕ್ಕರೆ ಪದಾರ್ಥಗಳನ್ನು ದೂರವಿರಿಸುವುದು ಇವೆಲ್ಲದರ ಫಲದಿಂದ ಮಧುಮೇಹವನ್ನು ನಿಯಂತ್ರಣ ಮಾಡಿ ಕೊಳ್ಳಬಹುದು. ಇದರ ಜೊತೆಗೆ ಕೆಲವೊಂದು ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕಾಯಿಲೆಯ ನಿಯಂತ್ರಣ ಮತ್ತಷ್ಟು ಸುಲಭವಾಗುತ್ತದೆ...

ಗ್ರೀನ್ ಟೀ

What are some benefits to drinking green tea? | BETTER GHANA DIGEST

  • ಇದು ತೂಕವನ್ನು ಕಡಿಮೆ ಮಾಡಲು ರಕ್ತದ ಒತ್ತಡವನ್ನು ನಿರ್ವಹಣೆ ಮಾಡಲು ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.
  • ಅಧ್ಯಯನಗಳು ಹೇಳುವಂತೆ ನೀವು ನಿಯಮಿತವಾಗಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ನಿಮ್ಮ ಜೀವಕೋಶಗಳು ಹಾಳಾಗುವುದು ತಪ್ಪುತ್ತದೆ, ಉರಿಯೂತ ಕಡಿಮೆಯಾಗುತ್ತದೆ ಮತ್ತು ಮಧುಮೇಹ ನಿಯಂತ್ರಣವಾಗುತ್ತದೆ.

ದಾಸವಾಳ ಚಹಾ

benefits of hibiscus, ದಾಸವಾಳ ಹೂವಿನ ಟೀ ಕುಡಿದರೆ, ಹಲವಾರು ಆರೋಗ್ಯ ಸಮಸ್ಯೆಗಳು ದೂರ!  - drink this hibiscus flower tea to get good health benfits - Vijaya  Karnataka

ಇದರಲ್ಲಿ ಆರೋಗ್ಯಕ್ಕೆ ಅನುಕೂಲಕರವಾಗಿ ಬೇಕಾಗಿರುವ ಪಾಲಿಫಿನಾಲ್ ಆಂಟಿಆಕ್ಸಿಡೆಂಟ್ ಅಂಶಗಳು ಸಿಗುತ್ತವೆ. ಪ್ರಮುಖವಾಗಿ ಆರ್ಗ್ಯಾನಿಕ್ ಆಮ್ಲಗಳು ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಿಸುವ ಗುಣಲಕ್ಷಣಗಳು ಇದರಲ್ಲಿ ಕಾಣಿಸುತ್ತವೆ

ಬ್ಲಾಕ್ ಟೀ

11 Research-Backed Health Benefits Of Black Tea | Organic Facts

  • ಇದು ಹೆಚ್ಚಿನ ಪವರ್ಫುಲ್ ಆಂಟಿಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಒಂದು ಪಾನೀಯ. ಇದರಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಸಾಕಷ್ಟಿವೆ.
  • ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಆರೋಗ್ಯವನ್ನು ಕೂಡ ರಕ್ಷಣೆ ಮಾಡುತ್ತದೆ. ಪ್ರತಿ ದಿನ ಮೂರು ಕಪ್ ಬ್ಲಾಕ್ ಟೀ ಕುಡಿಯುವ ಅಭ್ಯಾಸ ಇದ್ದವರಿಗೆ ಮಧುಮೇಹ ಅಷ್ಟಾಗಿ ತೊಂದರೆ ಕೊಡುವುದಿಲ್ಲ.

ದಾಲ್ಚಿನ್ನಿ ಚಹಾ

weight loss tips, ದಿನಾ ಚಹಾ ಕುಡಿದು ದೇಹದ ತೂಕವನ್ನು ಸುಲಭವಾಗಿ ಕಡಿಮೆ  ಮಾಡಿಕೊಳ್ಳಬಹುದು - weight loss tips: the right way to make your tea - Vijaya  Karnataka

  • ಪ್ರತಿಯೊಬ್ಬ ಭಾರತೀಯರ ಮನೆಯಲ್ಲಿ ಸಿಗುವಂತಹ ಸಾಂಪ್ರದಾಯಿಕ ಮಸಾಲೆ ಪದಾರ್ಥ ಇದು. ತನ್ನಲ್ಲಿ ಅಪಾರವಾದ ಔಷಧೀಯ ಗುಣಲಕ್ಷಣಗಳನ್ನು ಹೊಂದಿರುವ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ.
  • ದಾಲ್ಚಿನ್ನಿಯನ್ನು ಆಗಾಗ ಸೇವನೆ ಮಾಡುವುದರಿಂದ ಅಥವಾ ಚಹಾದಲ್ಲಿ ಬೆರೆಸಿ ಕುಡಿಯುವು ದರಿಂದ ಮಧುಮೇಹ ಚೆನ್ನಾಗಿ ನಿರ್ವಹಣೆಯಾಗುತ್ತದೆ. ಮುಖ್ಯವಾಗಿ ದಾಲ್ಚಿನ್ನಿ ರಕ್ತದಲ್ಲಿ ಸಕ್ಕರೆ ಹೆಚ್ಚು ಬಿಡುಗಡೆ ಆಗದಂತೆ ನೋಡಿಕೊಳ್ಳುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಅಭಿವೃದ್ಧಿ ಪಡಿಸುತ್ತದೆ.

ಚಾಮೋಮೈಲ್ ಚಹಾ

Diabetes patients can drink these cinnamon tea, black tea, hibiscus teas,  its very beneficial | ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿ ಈ 3 ಚಹಾ Lifestyle News  in Kannada

ಇದೊಂದು ಗಿಡಮೂಲಿಕೆ. ಇದರಲ್ಲಿ ಅಪಾರವಾದ ಆರೋಗ್ಯ ಲಕ್ಷಣಗಳು ಕಾಣಿಸುತ್ತವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಿಸುವುದರ ಜೊತೆಗೆ ಇದೊಂದು ಅದ್ಭುತವಾದ ಆಂಟಿ ಇನ್ಫಾಮೇಟರಿ ಮತ್ತು ಆಂಟಿಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಚಹಾ ಪದಾರ್ಥ ಇದು ಎಂದು ಹೇಳಬಹುದು.

These Are The 5 Best Teas To Control Your Diabetes.