ಶೀತ ಕೆಮ್ಮು ಹಾಗೂ ಅಸ್ತಮಾ ಸಮಸ್ಯೆಗೆಲ್ಲಾ ಪುದೀನಾ ಸೊಪ್ಪು ಬೆಸ್ಟ್ ಮದ್ದು!

23-08-22 07:45 pm       Source: Vijayakarnataka   ಡಾಕ್ಟರ್ಸ್ ನೋಟ್

ಪುದೀನಾ ಎಲೆಗಳಲ್ಲಿದೆ ನಿಮ್ಮ ಕೆಮ್ಮು ಮತ್ತು ಆಸ್ತಮ ಸಮಸ್ಯೆ ಪರಿಹಾರ ಮಾಡುವ ಗುಣ ಲಕ್ಷಣಗಳು. ಒಮ್ಮೆ ಪುದಿನ ಟೀ ಕುಡಿದು ನೋಡಿ.

ನಿಮಗೆ ನೆಗಡಿ, ಕೆಮ್ಮು ಜಾಸ್ತಿ ಇದೆಯಾ? ರಾತ್ರಿ ಹೊತ್ತು ಕೆಮ್ಮು ಜಾಸ್ತಿ ಬರುತ್ತಾ? ವೈದ್ಯರು ಅಸ್ತಮಾ ಎಂದು ಹೇಳಿದ್ದಾರಾ? ಹಾಗಿದ್ದರೆ ನೀವು ಪುದಿನ ಸೊಪ್ಪನ್ನು ಬಳಸಬೇಕು. ವಿವಿಧ ರೂಪಗಳಲ್ಲಿ ನೀವು ಬಳಸಬಹುದು. ಮುಖ್ಯವಾಗಿ ಪುದೀನಾ ಎಲೆಗಳ ಚಹ ತಯಾರು ಮಾಡಿಕೊಂಡು ಕುಡಿ ಯುವುದು ಒಳ್ಳೆಯದು. ಸಾಕಷ್ಟು ಒಳ್ಳೆಯ ರೀತಿಯಲ್ಲಿ ಇದರಿಂದ ಪ್ರಯೋಜನ ಸಿಗುತ್ತದೆ. ನಿಮ್ಮ ಆರೋಗ್ಯ ತೊಂದರೆ ಇಂದ ನಿಮಗೆ ಪರಿಹಾರ ಕೂಡ ಸಿಗುತ್ತದೆ. ಹೇಗೆ ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ...

ಕೆಮ್ಮು ಮತ್ತು ಅಸ್ತಮಾಗೆ ಪುದೀನಾ ಎಲೆಗಳು

mint leaves benefits, ಶೀತ ಕೆಮ್ಮು ಹಾಗೂ ಅಸ್ತಮಾ ಸಮಸ್ಯೆಗೆಲ್ಲಾ ಪುದೀನಾ ಸೊಪ್ಪು  ಬೆಸ್ಟ್ ಮದ್ದು! - mint leaves will have double impact on your asthama and  cold - Vijaya Karnataka

ನಿಮ್ಮ ಕೆಮ್ಮು ಮತ್ತು ಅಸ್ತಮಾ ಸಮಸ್ಯೆಗೆ ಪುದೀನಾ ಒಂದು ಮನೆ ಮದ್ದು ಎಂದು ಹೇಳ ಬಹುದು. ಇದಕ್ಕೆ ನೀವು ಏನು ಮಾಡಬಹುದು ಎಂದು ಕೇಳಿದರೆ ಇಲ್ಲಿವೆ ಪರಿಹಾರಗಳು.

ಮೊದಲನೆಯದು

How to Grow and Care for Peppermint Plants | Gardener's Path

  • ಒಂದು ವೇಳೆ ನಿಮಗೆ ಕೆಮ್ಮು ಇದ್ದರೆ, ಪುದೀನಾ ರಸವನ್ನು ಸ್ವಲ್ಪ ಜಾಸ್ತಿ ಬಿಸಿ ಇರುವ ನೀರಿಗೆ ಹಾಕಿ ಅದರಿಂದ ಬರುವ ಆವಿಯನ್ನು ಬಾಯಿಯ ಮೂಲಕ ತೆಗೆದುಕೊಂಡು ನಂತರ ಮೂಗಿನ ಮೂಲಕ ಹೊರ ಬಿಡಬೇಕು.
  • ಅಂದರೆ ನೀವು ತೆಗೆದುಕೊಳ್ಳುವ ಪುದಿನ ಸಾರ ನಿಮ್ಮ ಗಂಟಲವರೆಗೆ ಹೋಗಿ ಮತ್ತೆ ಹೊರಗೆ ಬರಬೇಕು. ಇದರಿಂದ ನಿಮ್ಮ ಮೂಗಿನ ಹೊಳ್ಳೆಗಳು ಮತ್ತು ಗಂಟಲಿನ ಭಾಗದಲ್ಲಿ ಶೀತ ತಂದುಕೊಡುವ ಸೋಂಕುಕಾರಕ ಕ್ರಿಮಿಗಳು ನಾಶವಾಗುತ್ತವೆ.

ಎರಡನೆಯದು

ಒಂದು ವೇಳೆ ನೀವು ಆಸ್ತಮ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿದ್ದರೆ, ನೀವು ಪುದೀನಾ ಸಾರವನ್ನು ಅಥವಾ ಆವಿಯನ್ನು ಮೇಲಿನ ರೀತಿ ತೆಗೆದುಕೊಂಡರೆ ಅದರಲ್ಲಿರುವ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಶ್ವಾಸಕೋಶದ ಒಳಭಾಗಕ್ಕೆ ತಲುಪಿ ಗಂಟಲಿನ ಭಾಗದಲ್ಲಿ ಮತ್ತು ಶ್ವಾಸಕೋಶದಲ್ಲಿ ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

ಮೂರನೆಯದು

7 Amazing Ways Pudina (Mint) Can Improve Your Health - Tata 1mg Capsules

  • ಇದು ನೀವು ಸಾಮಾನ್ಯವಾಗಿ ಪ್ರತಿದಿನ ಕುಡಿಯಬಹುದು. ಕೇವಲ ಹುಷಾರು ತಪ್ಪಿದ ಸಂದರ್ಭದಲ್ಲಿ ಮಾತ್ರ ಕುಡಿಯಬೇಕು ಎಂದೇನಿಲ್ಲ. ಅಸ್ತಮಾ ಇದ್ದಾಗ ಪುದಿನಾ ಚಹಾ ಕುಡಿಯುವು ದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದರ ಜೊತೆ ನೀವು ಒಂದು ವೇಳೆ ತುಳಸಿ ಎಲೆಗಳನ್ನು ಹಾಕಿದರೆ ಇನ್ನೂ ಉತ್ತಮ.
  • ಕೆಲವರು ಶುಂಠಿ, ಮೆಣಸು ಎಲ್ಲವನ್ನು ಜಜ್ಜಿ ಹಾಕಿಕೊಂಡು ಕುಡಿಯುತ್ತಾರೆ. ಬಣ್ಣ ಬದಲಾಗುವವರೆಗೆ ಕುದಿಸಿ ರುಚಿಗೆ ಸ್ವಲ್ಪ ಜೇನು ತುಪ್ಪ ಹಾಕಿಕೊಂಡು ಕುಡಿದರೆ ಸಾಕಷ್ಟು ಆರಾಮದಾಯಕ ಅನುಭವ ಸಿಗುತ್ತದೆ. ಅದರಲ್ಲೂ ಶೀತದ ಸಮಸ್ಯೆ ಬಹಳ ಬೇಗನೆ ಬಗೆಹರಿಯುತ್ತದೆ. ಆದರೆ ಅತಿ ಹೆಚ್ಚು ಜೇನುತುಪ್ಪ ಹಾಕುವುದು ಬೇಡ. ಜಾಸ್ತಿ ಬಿಸಿಯಿರುವಾಗ ಕೂಡ ಹಾಕಬಾರದು. ಇದರಿಂದ ಮಲಬದ್ಧತೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.

ನಾಲ್ಕನೆ ಪರಿಹಾರವನ್ನು ನೋಡೋಣ

  • ನಿಮಗೆ ಒಂದು ವೇಳೆ ಆಗಾಗ ಕೆಮ್ಮುಮತ್ತು ಕಫ ಜೊತೆಗೆ ಶೀತ ಆಗುತ್ತಿದ್ದರೆ, ನೀವು ಸಾಧ್ಯವಾದಷ್ಟು ಆಗಾಗ ಪುದಿನಾ ಎಲೆಗಳ ವಾಸನೆ ತೆಗೆದುಕೊಳ್ಳುತ್ತ ಬನ್ನಿ.
  • ಇದು ನಿಮ್ಮ ಮನಸ್ಸಿಗೆ ಉಲ್ಲಾಸ ಕೊಡುವುದರ ಜೊತೆಗೆ ಆರೋಗ್ಯಕರವಾಗಿ ನಿಮ್ಮ ಕಾಯಿಲೆಯನ್ನು ಸಹ ವಾಸಿ ಮಾಡುತ್ತದೆ. ಆಯುರ್ವೇದ ವೈದ್ಯರು ಹೇಳುವ ಹಾಗೆ ಇದೊಂದು ಅದ್ಭುತವಾದ ಪ್ರಯೋಜನಕಾರಿ ತಂತ್ರ ವಾಗಿದೆ. ನಿಮ್ಮ ಮನೆಯ ಕಿಟಕಿಯ ಹೂಕುಂಡದಲ್ಲಿ ಪುದಿನ ಹಾಕಿ ಬೆಳೆಸಿ.

Mint Leaves Will Have Double Impact On Your Asthama And Cold.