ಕಿಡ್ನಿ ಕಸಿ ಚಿಕಿತ್ಸೆ ಆಗಿದ್ದರೆ, ಖಡ್ಡಾಯವಾಗಿ ಇಂತಹ ಆಹಾರಗಳನ್ನು ಅನುಸರಿಸಿ...

24-08-22 08:08 pm       Source: Vijayakarnataka   ಡಾಕ್ಟರ್ಸ್ ನೋಟ್

ಅಕಸ್ಮಾತಾಗಿ ಕಿಡ್ನಿಗಳಿಗೆ ತೊಂದರೆಯಾಗಿ ಕಸಿ ಮಾಡಿಸಿಕೊಂಡಿದ್ದೀರಾ? ಹಾಗಾದರೆ ಮೊದಲು ಆಹಾರ ಪದ್ಧತಿಯಲ್ಲಿ ಈ ಬದಲಾವಣೆಗಳನ್ನು ತಂದುಕೊಳ್ಳಿ.

ನಮ್ಮ ದೇಹದಲ್ಲಿ ಇತರ ಅಂಗಾಂಗಗಳ ಹಾಗೆ ಕಿಡ್ನಿಗಳು ಸಹ ತುಂಬಾ ಪ್ರಮುಖವಾದ ಅಂಗಗಳು. ದಿನದ 24 ಗಂಟೆ ಸಹ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಇವುಗಳ ಕಾರ್ಯ ಚಟುವಟಿಕೆಯಲ್ಲಿ ವ್ಯತ್ಯಾಸ ವಾದರೆ ಆರೋಗ್ಯಕ್ಕೆ ತುಂಬಾ ತೊಂದರೆ. ಕೆಲವೊಮ್ಮೆ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾದರೆ ಅದರಿಂದ ವಿಪರೀತ ನೋವು ಅನುಭವಿಸಬೇಕಾಗುತ್ತದೆ.

ಯಾವಾಗ ಕಿಡ್ನಿಗಳು ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಿರುವುದಿಲ್ಲ ಎಂದು ವೈದ್ಯರು ತೀರ್ಮಾನಿಸುತ್ತಾರೆ, ಆಗ ಕಿಡ್ನಿ ಕಸಿ ಮಾಡಲು ಮುಂದಾಗುತ್ತಾರೆ. ಕಿಡ್ನಿ ಕಸಿ ಮಾಡಿಸಿಕೊಂಡ ನಂತರದಲ್ಲಿ ಕೆಲವೊಂದು ಸೂಚನೆಗಳನ್ನು ವೈದ್ಯರು ರೋಗಿಗೆ ಕೊಡುತ್ತಾರೆ. ಈ ಕೆಳಗಿನ ರೀತಿ ಆಹಾರ ಪದ್ಧತಿ ಇರಬೇಕು ಎಂದು ಸಹ ಹೇಳಿರುತ್ತಾರೆ.

ಪ್ರೋಟೀನ್ ಅಂಶ ಹೆಚ್ಚಿರುವ ಆಹಾರ ತಿನ್ನಿ

  • ನೀವು ಒಂದು ವೇಳೆ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಪಕ್ಷದಲ್ಲಿ, ನಿಮ್ಮ ದೇಹಕ್ಕೆ ಪ್ರೋಟೀನ್ ಅಂಶದ ಅವಶ್ಯಕತೆ ತುಂಬಾ ಇರುತ್ತದೆ. ಏಕೆಂದರೆ ಪ್ರೋಟೀನ್ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಿಡ್ನಿ ಕಸಿ ಪ್ರಕ್ರಿಯೆಯಲ್ಲಿ ಗಾಯವನ್ನು ವಾಸಿ ಮಾಡುವ ಕೆಲಸ ಮಾಡುತ್ತದೆ.
  • ಹೀಗಾಗಿ ಇಂತಹ ಸಂದರ್ಭದಲ್ಲಿ ಪ್ರೋಟಿನ್ ಅಂಶ ಹೆಚ್ಚಾಗಿ ಒಳಗೊಂಡಿರುವ ಆಹಾರಗಳನ್ನು ತಿನ್ನುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಡಯಾಲಿಸಿಸ್ ಮಾಡಿಸಿಕೊಂಡಿರುವ ಜನರಿಗೆ ಪ್ರೋಟೀನ್ ಅಂಶ ಕಡಿಮೆ ತಿನ್ನಲು ಹೇಳಿರುತ್ತಾರೆ. ಆದರೆ ಕಿಡ್ನಿ ಕಸಿ ಮಾಡಿಸಿಕೊಂಡ ನಂತರದಲ್ಲಿ ಪ್ರೋಟೀನ್ ಸೇವನೆ ಅಧಿಕವಾಗಬೇಕು.

ಹಸಿ ಹಣ್ಣುಗಳನ್ನು ತಿನ್ನಬಾರದು

Orange Fruit - Benefits, Nutritional facts, Healthy Recipes - HealthifyMe

ಇದು ಸೋಂಕು ಹೆಚ್ಚು ಮಾಡುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಹಸಿಯಾದ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳು ಕಿಡ್ನಿಗಳ ಭಾಗದಲ್ಲಿ ಸೋಂಕು ಉಂಟು ಮಾಡಬಹುದು. ಆದ್ದರಿಂದ ಹಣ್ಣುಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು.

ಆಹಾರ ಪದ್ಧತಿಯಲ್ಲಿ ಮೊಸರು ಇರಬೇಕು

Is Dahi Good for Diabetes? Glycemic Index of Curd - Beat Diabetes

  • ಮೊಸರಿನಲ್ಲಿ ಉತ್ತಮ ಕ್ವಾಲಿಟಿಯ ಪ್ರೋಟೀನ್ ಇರುತ್ತದೆ. ಇದು ಕಿಡ್ನಿ ಕಸಿ ಆದ ಜಾಗದಲ್ಲಿ ಗಾಯವನ್ನು ವಾಸಿ ಮಾಡಲು ಶ್ರಮಿಸುತ್ತದೆ. ಕೆಲವರು ಈ ಸಂದರ್ಭದಲ್ಲಿ ಹುಣಸೆಹಣ್ಣು ತಿನ್ನಬಹುದಾ ಎಂದು ಕೇಳುತ್ತಾರೆ.
  • ಸ್ವಲ್ಪ ಪ್ರಮಾಣದಲ್ಲಿ ತಿಂದರೆ ಪರವಾಗಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ದ್ರಾಕ್ಷಿ ಹಣ್ಣನ್ನು ತಿನ್ನಬಾರದು ಅಷ್ಟೇ. ಇದು ಗಾಯವನ್ನು ವಾಸಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಬೀಜ ಹೊಂದಿರುವ ತರಕಾರಿಗಳು ಮತ್ತು ಹಣ್ಣುಗಳು

Guava —the top fruit for optimum health

  • ಕೆಲವರು ಕಿಡ್ನಿ ಕಸಿ ಮಾಡಿಸಿಕೊಂಡಿರುವ ಜನರಿಗೆ ಟೊಮೇಟೊ, ಬದನೆಕಾಯಿ, ಬೆಂಡೆಕಾಯಿ, ಸೀಬೇಕಾಯಿ, ಕಲ್ಲಂಗಡಿ ಹಣ್ಣು ಇತ್ಯಾದಿಗಳನ್ನು ತಿನ್ನಬಾರದು ಎಂದು ಹೇಳುತ್ತಾರೆ. ಆದರೆ ಹಾಗೇನಿಲ್ಲ. ಇವುಗಳು ಸಹ ಆರೋಗ್ಯಕರವಾದ ಹಣ್ಣುಗಳು.
  • ಈ ಸಂದರ್ಭದಲ್ಲಿ ರಕ್ತದಲ್ಲಿ ಪೊಟ್ಯಾಶಿಯಂ ಪ್ರಮಾಣ ನಿಯಂತ್ರಣದಲ್ಲಿರಬೇಕು. ಎಲೆಕ್ಟ್ರೋಲೈಟ್ ಮತ್ತು ಕೊಲೆಸ್ಟ್ರಾಲ್ ಸಹ ನಾರ್ಮಲ್ ಆಗಿರಬೇಕು. ಒಂದು ವೇಳೆ ನಿಮಗೆ ಕಿಡ್ನಿಗಳಲ್ಲಿ ಕಲ್ಲುಗಳು ಇದ್ದರೆ, ಇವುಗಳನ್ನು ತಿನ್ನಬೇಡಿ.

ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳಿ

  • ಕಿಡ್ನಿ ಕಸಿ ಮಾಡಿಸಿಕೊಂಡಿರುವ ಜನರು ಆರಂಭಿಕ ದಿನಗಳಲ್ಲಿ ಪ್ರೋಟೀನ್ ಪೂರಕಗಳನ್ನು ಸೇವನೆ ಮಾಡುವುದು ಒಳ್ಳೆಯದು. ಇದು ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವುದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗುತ್ತದೆ. ಯಾವುದಕ್ಕೂ ವೈದ್ಯರನ್ನು ಕೇಳಿ ಮುಂದುವರೆಯುವುದು ಒಳ್ಳೆಯದು.
  • ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಕಿಡ್ನಿ ಕಸಿ ಮಾಡಿಸಿಕೊಂಡ ಮೂರರಿಂದ ಆರು ತಿಂಗಳವರೆಗೆ ಅನುಸರಿಸುವುದು ಉತ್ತಮ. ಆದರೆ ಈ ಸಂದರ್ಭದಲ್ಲಿ ಸಲಾಡ್, ಹಸಿ ಹಣ್ಣು ತರಕಾರಿಗಳು, ತೆರೆದು ಇಟ್ಟಂತಹ ಆಹಾರಗಳು ಇವುಗಳನ್ನು ತಿನ್ನಬಾರದು.

Kidney Transplanted Patients Better Follow This Diet Plan.