ಬ್ರೇಕಿಂಗ್ ನ್ಯೂಸ್
26-08-22 07:18 pm Source: Vijayakarnataka ಡಾಕ್ಟರ್ಸ್ ನೋಟ್
ಹಾಲಿಗೆ ಅರಿಶಿನ ಮಿಕ್ಸ್ ಮಾಡಿ ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನೋದನ್ನು ನೀವು ಕೇಳಿರಬಹುದು. ಇದು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ, ದೇಹದ ನೋವನ್ನು ನೀವಾರಿಸುತ್ತದೆ, ಗಾಯ ಗುಣಮುಖವಾಗಲು ಸಹಾಯಮಾಡುತ್ತದೆ. ಆದರೆ ಈ ಅರಿಶಿನದ ಹಾಲಿನ ಸೇವನೆ ಎಲ್ಲರಿಗೂ ಒಳ್ಳೆಯದಲ್ಲ ಅನ್ನೋದು ನಿಮಗೆ ಗೊತ್ತಾ? ಕೆಲವೊಂದು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಈ ಅರಿಶಿನದ ಹಾಲನ್ನು ಸೇವಿಸೋದರಿಂದ ಹಾನಿಯಾಗಬಹುದಂತೆ.
ಕಡಿಮೆ ರಕ್ತದ ಸಕ್ಕರೆ ಅಂಶ ಇರುವವರು
ಕಡಿಮೆ ರಕ್ತದ ಸಕ್ಕರೆ ಅಂಶ ಇರುವವರು ಅಂದರೆ ಯಾರಿಗೆ ಲೋ ಶುಗರ್ ಇದೆಯೋ ಅಂತಹ ವ್ಯಕ್ತಿಗಳು ಅರಿಶಿನ ಹಾಕಿದ ಹಾಲನ್ನು ಕುಡಿಯಬಾರದಂತೆ, ಅದನ್ನು ಕುಡಿದ್ರೆ ಅವರ ಶುಗರ್ ಲೆವೆಲ್ ಇನ್ನೂ ಕಡಿಮೆ ಯಾಗುತ್ತದೆ ಎನ್ನಲಾಗುತ್ತದೆ.ಅರಿಶಿನದಲ್ಲಿ ಕರ್ಕ್ಯುಮಿನ್ ಇರುವುದರಿಂದ ಕಡಿಮೆ ರಕ್ತದ ಸಕ್ಕರೆಯಿಂದ ತೊಂದರೆಗೊಳಗಾದವರು ವೈದ್ಯರ ಸಲಹೆಯ ಮೇರೆಗೆ ಇದನ್ನು ಸೇವಿಸಬೇಕು.
ಪುರುಷರಲ್ಲಿ ಬಂಜೆತನ
ಅರಿಶಿನವು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು. ಅವರ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವುದು. ವೀರ್ಯ ಚಲನೆಯನ್ನು ಕಡಿಮೆ ಮಾಡುವುದು. ಆದ್ದರಿಂದ, ಮಗುವನ್ನು ಹೊಂದಲು ಪ್ರಯತ್ನಿಸುತ್ತಿರುವ ಪುರುಷರು ಅರಿಶಿನವನ್ನು ಎಚ್ಚರಿಕೆಯಿಂದ ಬಳಸಬೇಕು.
ಕಿಡ್ನಿ ಸಂಬಂಧಿತ ಸಮಸ್ಯೆ
ವ್ಯಕ್ತಿಗೆ ಕಿಡ್ನಿ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ಅರಿಶಿನದ ಹಾಲಿನ ಸೇವನೆಯು ಆರೋಗ್ಯಕ್ಕೆ ಹಾನಿಯಾಗಬಹುದು.ವಿಶೇಷವಾಗಿ ಕಲ್ಲುಗಳ ಸಮಸ್ಯೆ ಇದ್ದಾಗ, ವಾಸ್ತವವಾಗಿ ಅರಿಶಿನವು ಆಕ್ಸಲೇಟ್ ಅನ್ನು ಹೊಂದಿರುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಪ್ರಚೋದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೂತ್ರಪಿಂಡದ ಸಮಸ್ಯೆಯ ಸಮಯದಲ್ಲಿ ಹಾಲಿಗೆ ಅರಿಶಿನ ಸೇರಿಸಿ ಕುಡಿಯಲೇ ಬಾರದು.
ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ
ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಇರುವವರು ಅಂದರೆ ಮಲಬದ್ಧತೆ ಸಮಸ್ಯೆ, ಹೊಟ್ಟೆಯಲ್ಲಿ ಗ್ಯಾಸ್, ಉಬ್ಬುವುದು ಸಮಸ್ಯೆ, ಹೊಟ್ಟೆ ಉಬ್ಬುವುದು, ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್, ಅಜೀರ್ಣ ಇತ್ಯಾದಿ ಸಮಸ್ಯೆಯನ್ನು ಹೊಂದಿರುವ ಜನರು ಅರಿಶಿನ ಹಾಲನ್ನು ಸೇವಿಸಬಾರದು.
ಕಬ್ಬಿಣದಂಶದ ಕೊರತೆ ಇರುವವರು
ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಅರಿಶಿನ ಹಾಲನ್ನು ಸೇವಿಸಬಾರದು. ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಉಲ್ಭಣಗೊಳಿಸಬಹುದು.
ಶಸ್ತ್ರಚಿಕಿತ್ಸೆ
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರ ರಕ್ತಸ್ರಾವದ ಅಪಾಯದ ಕಾರಣದಿಂದ ನಿಗದಿತ ಶಸ್ತ್ರಚಿಕಿತ್ಸೆಗೆ ಎರಡು ವಾರಗಳ ಮೊದಲು ಅರಿಶಿನವನ್ನು ನಿಲ್ಲಿಸಬೇಕು. ಅರಿಶಿನವು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ವಿಳಂಬಗೊಳಿಸುತ್ತದೆ.ಇನ್ನು ಉಳಿದವರು ಅರಿಶಿನದ ಹಾಲು ಸೇವಿಸುವಾಗ ಬರೀ ಒಂದು ಚಿಟಿಕೆ ಅರಿಶಿನ ಸೇರಿಸಿದ್ರೆ ಸಾಕು. ಅದಕ್ಕಿಂತ ಹೆಚ್ಚು ಅರಿಶಿನ ಸೇರಿಸುವ ಅಗತ್ಯವಿಲ್ಲ.
Who Should Not Consume Turmeric Milk.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm