ಹೈ ಬಿಪಿ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಡ್ರೈ ಫ್ರೂಟ್ಸ್‌ಗಳನ್ನು ತಿನ್ನಿ...

29-08-22 07:30 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತಿಲ್ಲವೇ? ಹಾಗಿದ್ದರೆ ಡ್ರೈ ಫ್ರೂಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಆನಂತರ ಫಲಿತಾಂಶ ನಿಮಗೆ ಗೊತ್ತಾಗುತ್ತದೆ.

ಮನುಷ್ಯನಿಗೆ ರಕ್ತದ ಒತ್ತಡ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವ ಆರೋಗ್ಯ ಸಮಸ್ಯೆ ಆಗಿದೆ. ಇವುಗಳು ಒಮ್ಮೆ ಬಂದರೆ ಮತ್ತೆ ಹೋಗುವುದಿಲ್ಲ. ಬಂದ ಮೇಲೆ ಇವುಗಳ ನಿರ್ವಹಣೆ ತುಂಬ ಜಾಗರೂಕತೆಯಿಂದ ಕೂಡಿರಬೇಕು. ವೈದ್ಯರು ಕೊಡುವ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರ ಪದ್ಧತಿಯಲ್ಲಿ ಮತ್ತು ಜೀವನ ಶೈಲಿಯಲ್ಲಿ ಒಳ್ಳೆಯ ಬದಲಾವಣೆಯನ್ನು ತಂದುಕೊಳ್ಳಬೇಕು.

ಡ್ರೈ ಫ್ರೂಟ್ಸ್ ಅಥವಾ ಒಣ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಇರುತ್ತದೆ. ಇದು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಒಂದು ವೇಳೆ ರಕ್ತದ ಒತ್ತಡ ಉಂಟಾಗಿದ್ದರೆ ಅದನ್ನು ಸಹದ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ಒತ್ತಡ ಹೆಚ್ಚಾಗಿ ಇರುವ ಜನರಿಗೆ ಅನುಕೂಲವಾಗುವಂತೆ ಯಾವ ನಾಲ್ಕು ಒಣ ಬೀಜಗಳನ್ನು ಸೇವನೆ ಮಾಡಬಹುದು ಎಂಬುದರ ಬಗ್ಗೆ ಎಲ್ಲಿ ತಿಳಿಸಿಕೊಡಲಾಗಿದೆ.

ಗೋಡಂಬಿ ಬೀಜಗಳು

14 Cashews (Kaju) Benefits For Skin, Hair and Health | Be Beautiful India

ರಕ್ತದೊತ್ತಡ ನಿಯಂತ್ರಣಕ್ಕೆ ಇವು ನೈಸರ್ಗಿಕವಾದ ಒಂದು ಪರಿಹಾರ ಎಂದು ಹೇಳಬಹುದು. ಇವುಗಳಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಇದರಿಂದ ರಕ್ತದ ಒತ್ತಡವನ್ನು ಸುಲಭವಾಗಿ ನಿರ್ವಹಣೆ ಮಾಡಿಕೊಳ್ಳಬಹುದು.

ಪಿಸ್ತಾ ಬೀಜಗಳು

Pista (Roasted & Salted) Special – Fruitopia

ಇವುಗಳಲ್ಲಿ ಸಹ ಕಡಿಮೆ ಕ್ಯಾಲೋರಿಗಳು ಇರಲಿದ್ದು ಮತ್ತು ಹೆಚ್ಚಿನ ನಾರಿನ ಪ್ರಮಾಣ ಇರುತ್ತದೆ. ಇದಕ್ಕಿಂತ ಪ್ರಮುಖವಾಗಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದಲ್ಲಿ ಫ್ರೀ ರಾಡಿಕಲ್ ಗಳು ಅಷ್ಟಾಗಿ ತೊಂದರೆ ನೀಡುವುದಿಲ್ಲ. ರಕ್ತದ ಒತ್ತಡ ಹೆಚ್ಚಾದ ಸಂದರ್ಭದಲ್ಲಿ ನೀವು ಇವುಗಳನ್ನು ಸೇವನೆ ಮಾಡಬಹುದು.

ಬಾದಾಮಿ ಬೀಜಗಳು

Benefits Of Almond For Skin: Add Them To Your Diet | Femina.in

ರಕ್ತದ ಒತ್ತಡವನ್ನು ನಿರ್ವಹಣೆ ಮಾಡಿಕೊಳ್ಳಲು ಅನುಕೂಲಕರವಾಗಿ ಮತ್ತು ದೇಹಕ್ಕೆ ಅಗತ್ಯವಾಗಿ ಬೇಕಾದ alpha tocopherolಇದರಲ್ಲಿರುತ್ತದೆ. ನಿಯಮಿತವಾಗಿ ಆಗಾಗ ಬಾದಾಮಿ ಬೀಜಗಳನ್ನು ತಿನ್ನುವುದರಿಂದ ರಕ್ತದ ಒತ್ತಡ ನಿರ್ವಹಣೆಯಲ್ಲಿ ಸಾಕಷ್ಟು ಸಹಾಯ ಆಗುತ್ತದೆ. ವಿಶೇಷವಾಗಿ 30 ರಿಂದ 70 ವರ್ಷ ವಯಸ್ಸಾಗಿರುವ ಪುರುಷರಿಗೆ ಹೆಚ್ಚು ಅನುಕೂಲ ಸಿಗುತ್ತದೆ.

Prunes (ಕಪ್ಪು ಒಣದ್ರಾಕ್ಷಿ ಹಾಗೆ ಇರುವ ಒಣಫಲ)

DRY PRUNES | NUTSHOUSE

ಇದರಲ್ಲಿ ಕೂಡ ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಂ ಅಂಶ ಇರುತ್ತದೆ. ರಕ್ತದ ಒತ್ತಡ ಹೆಚ್ಚಾದ ಸಂದರ್ಭದಲ್ಲಿ ಇವುಗಳನ್ನು ಸೇವನೆ ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ನೀರಿನಲ್ಲಿ ನೆನೆ ಹಾಕಿದ Prunes ಅಧಿಕ ರಕ್ತದ ಒತ್ತಡ ಇರುವ ಜನರಿಗೆ ತುಂಬಾ ಒಳ್ಳೆಯದು.

High Blood Pressure Patients Can Consume Dry Fruits.