ಮೊಟ್ಟೆ ಅಂದ್ರೆ ಇಷ್ಟಾಂತ ಸಿಕ್ಕಾಪಟ್ಟೆ ತಿನ್ನಬೇಡಿ, ಶುಗರ್‌, ಕೊಲೆಸ್ಟ್ರಾಲ್ ಜಾಸ್ತಿಯಾಗಬಹುದು

01-09-22 09:22 pm       Source: Vijayakarnataka   ಡಾಕ್ಟರ್ಸ್ ನೋಟ್

ಅಧಿಕ ಮೊಟ್ಟೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಸಮಸ್ಯೆಗಳಾಗಬಹುದು ಗೊತ್ತಾ? ಸಕ್ಕರೆಕಾಯಿಲೆ ಹಾಗೂ ಕೊಲೆಸ್ಟ್ರಾಲ್ ಇರುವವರು ಮೊಟ್ಟೆಯನ್ನು ಸೇವಿಸುವಾಗ...

ಮೊಟ್ಟೆಯ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಇದರಲ್ಲಿ ಸಾಕಷ್ಟು ಪ್ರೋಟೀನ್ ಇರೋದರಿಂದ ಪ್ರತಿನಿತ್ಯ ಮೊಟ್ಟೆ ಸೇವಿಸೋದು ಮೂಳೆಗಳಿಗೂ ಒಳ್ಳೆಯದು. ಮೊಟ್ಟೆಯು ಸೆಲೆನಿಯಮ್, ವಿಟಮಿನ್ ಡಿ, ವಿಟಮಿನ್ ಬಿ 6, ವಿಟಮಿನ್ ಬಿ 12, ಸತು, ತಾಮ್ರ ಮತ್ತು ಕಬ್ಬಿಣದಿಂದ ಸಮೃದ್ದವಾಗಿದೆ. ಕೆಲವರು ಮಾಂಸಾಹಾರವನ್ನು ಸೇವಿಸುವುದಿಲ್ಲ ಅಂತಹವರಿಗೆ ಬರೀ ಮೊಟ್ಟೆಯನ್ನಾದರೂ ಸೇವಿಸಲು ಸಲಹೆ ನೀಡಲಾಗುತ್ತದೆ. ಸಣ್ಣ ಮಕ್ಕಳಿಗೂ ಮೊಟ್ಟೆ ತಿನ್ನಿಸುವುದು ಒಳ್ಳೆಯದು ಎನ್ನಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ನಿಮ್ಮನ್ನು ಆರೋಗ್ಯವಂತರನ್ನಾಗಿಸಲು ಸಹಾಯ ಮಾಡುತ್ತದೆ.

ಮೊಟ್ಟೆಯ ಬಿಳಿ ಭಾಗ ತಿನ್ನುತ್ತಾರೆ

5 reasons to eat more eggs, boost your fitness and weight loss efforts |  Health - Hindustan Times

ನಿಮಗೆ ಗೊತ್ತಿರಬಹುದು ಕೆಲವರು ಚಿಕನ್ ತಿನ್ನೋದಿಲ್ಲ ಆದರೆ ಮೊಟ್ಟೆ ತಿನ್ನುತ್ತಾರೆ. ಜಿಮ್‌ಗೆ ಹೋಗುವವರು ಪ್ರತಿನಿತ್ಯ ಮೊಟ್ಟೆ ತಿನ್ನುತ್ತಾರೆ. ಅದರಲ್ಲೂ ಕೆಲವರು 30-40 ಮೊಟ್ಟೆ ತಿನ್ನುವವರೂ ಇದ್ದಾರೆ. ಆದ್ರೆ ಅವರು ಮೊಟ್ಟೆಯ ಬಿಳಿಭಾವನ್ನು ಮಾತ್ರ ತಿನ್ನುತ್ತಾರೆ. ನಿಮಗೆ ಗೊತ್ತಾ ಮೊಟ್ಟೆ ಇಷ್ಟ ಅಂತಾ ಸಿಕ್ಕಾಪಟ್ಟೆ ತಿನ್ನಬಾರದು. ಹೆಚ್ಚಿನ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಹಾನಿಯಾಗುವುದಂತೂ ಖಂಡಿತಾ.

​ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ

Important things to know about diabetes - News From Core

ನೀವು ಮಧುಮೇಹಿಗಳಾಗಿದ್ದರೆ ಮೊಟ್ಟೆಯ ಸೇವನೆಯನ್ನು ಕಡಿಮೆ ಮಾಡಬೇಕು. ಅಧಿಕ ಮೊಟ್ಟೆಯ ಸೇವನೆಯು ನಿಮಗೆ ಹಾನಿಕಾರಕವಾಗಿದೆ. ಮೊಟ್ಟೆಗಳು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಸಕ್ಕರೆ ಕಾಯಿಲೆ ಇರುವವರು ದಿನಕ್ಕೆ ಮೂರು ಮೊಟ್ಟೆಗಳನ್ನು ಮಾತ್ರ ಸೇವಿಸಬೇಕು.

ಹೊಟ್ಟೆ ​ಉಬ್ಬುವಿಕೆಯ ಸಮಸ್ಯೆ

Stomach Bloating: ಹೊಟ್ಟೆ ಉಬ್ಬುವ ಸಮಸ್ಯೆಗೆ ಕಾರಣ ಏನು? ಈ ಸಮಸ್ಯೆಗೆ  ಮನೆಮದ್ದಿನಲ್ಲಿಯೇ ಇದೆ ಪರಿಹಾರ | Try these home remedies to overcome Stomach  Bloating problem | TV9 Kannada

ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ಕೆಲವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಅದರಲ್ಲೂ ಹೆಚ್ಚಿನವರಿಗೆ ಗ್ಯಾಸ್ಟ್ರಿಕ್‌ನ ಸಮಸ್ಯೆ ಉಂಟಾಗುತ್ತದೆ. ಅಂತಹವರು ಮೊಟ್ಟೆಯನ್ನು ತಿನ್ನಲು ಹೆದರುತ್ತಾರೆ. ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಉಬ್ಬುವಿಕೆಯ ಸಮಸ್ಯೆಗಳಿರುವವರು ಆದಷ್ಟು ಮೊಟ್ಟೆಯ ಸೇವನೆಯನ್ನು ಕಡಿಮೆ ಮಾಡಬೇಕು.

ಮೊಟ್ಟೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಭಾರವಾಗಿರುತ್ತದೆ, ಇದರಿಂದಾಗಿ ಹೊಟ್ಟೆ ನೋವಿನ ಸಾಧ್ಯತೆಯಿದೆ. ಹಾಗಾಗಿ ಇವನ್ನು ಗಮನದಲ್ಲಿಟ್ಟುಕೊಂಡು ಎಷ್ಟು ಮೊಟ್ಟೆಯ ಸೇವನೆ ನಿಮಗೆ ಒಳ್ಳೆಯದು ಹಾಗೂ ನಿಮಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ ಎನ್ನುವುದನ್ನು ತಿಳಿದು ಮೊಟ್ಟೆ ಸೇವಿಸಿ.

ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

What Is Bad Cholesterol and how to prevent it | Bad Cholesterol: ಕೆಟ್ಟ  ಕೊಲೆಸ್ಟ್ರಾಲ್ ಎಂದರೇನು? ಇಲ್ಲಿದೆ ನೀವು ತಿಳಿಯಲೇಬೇಕಾದ ವಿವರ– News18 Kannada

ಒಂದು ಮೊಟ್ಟೆಯಲ್ಲಿ 186 ಮಿಗ್ರಾಂ ಕೊಲೆಸ್ಟ್ರಾಲ್ ಇದೆ. ನೀವು ಹೆಚ್ಚು ಮೊಟ್ಟೆಗಳನ್ನು ಸೇವಿಸಿದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಕೊಲೆಸ್ಟ್ರಾಲ್ ಅಧಿಕವಾದರೆ ನಿಮಗೆ ಹೃದಯದ ಸಮಸ್ಯೆಗಳೂ ಬರಬಹುದು. ನಿಮಗೆ ಈಗಾಗಲೇ ಹೃದಯ ಸಮಸ್ಯೆಗಳಿದ್ದರೂ ಸಹ, ನೀವು ಮೊಟ್ಟೆಗಳ ಪ್ರಮಾಣವನ್ನು ಎಚ್ಚರಿಕೆಯಿಂದ ಸೇವಿಸಬೇಕು.

What Are The Disadvantages Of Eating More Eggs.