ಸೋರೆಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ

03-09-22 07:19 pm       Source: Vijayakarnataka   ಡಾಕ್ಟರ್ಸ್ ನೋಟ್

ಸೌತೆಕಾಯಿಯಂತೆ ಕಾಣುವ ಸೋರೆಕಾಯಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸೋರೆಕಾಯಿಯನ್ನು ಯಾವ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಎನ್ನುವ ಬಗ್ಗೆ ವೈದ್ಯರ ಸಲ...

ತರಕಾರಿಗಳು ಪ್ರತಿಯೊಂದು ಗುಣ ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯಕವಾಗಿರುತ್ತವೆ. ಅದಕ್ಕೆ ಹಿರಿಯರು ಹೇಳುವುದು ಅದು ಕಹಿ, ಅದು ಒಗರು ಎಂದು ಮೂಗು ಮುರಿಯುವ ಬದಲು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಬೇಕು ಎಂದು.

ಸೋರೆಕಾಯಿ ಕೂಡ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ತರಕಾರಿ. ಇದು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದರೆ ನೀವು ನಂಬಲೇಬೇಕು. ಈ ಲೇಖನದಲ್ಲಿ ಸೋರೆಕಾಯಿಯ ಗುಣವೇನು, ಅದು ಯಾವ ರೀತಿ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಅವರು ತಿಳಿಸಿದ್ದಾರೆ ಇಲ್ಲಿದೆ ನೋಡಿ.

​ಸೋರೆಕಾಯಿ

Fresh Lauki - Bottle Gourd (लोकी, घिया)

ಸೌತೆಕಾಯಿ ಪ್ರಬೇಧಕ್ಕೆ ಸೇರಿರುವ ಸೋರೆಕಾಯಿ ಕಹಿ ರುಚಿಯನ್ನು ಹೊಂದಿದ್ದು ದೇಹಕ್ಕೆ ಲಘು ಆಹಾರವಾಗಿದೆ. ಇದು ದೇಹಕ್ಕೆ ಶೀತವನ್ನು ನೀಡುತ್ತದೆ. ಜೊತೆಗೆ ವಾತ ಮತ್ತು ಪಿತ್ತ ಗುಣವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.

ಆದರೆ ನೆನಪಿಡಿ ಹೆಚ್ಚು ಸೋರೆಕಾಯಿ ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ವಾಕರಿಕೆಯ ಅನುಭವ ನೀಡುತ್ತದೆ. ಜೊತೆಗೆ ಹೃದಯಕ್ಕೆ ಸೋರೆಕಾಯಿ ಒಳ್ಳೆಯದಲ್ಲ. ಹೀಗಾಗಿ ಹೃದಯದ ಕಾಯಿಲೆ ಇದ್ದವರು ಸೋರೆಕಾಯಿಯನ್ನು ಕಡಿಮೆ ಸೇವನೆ ಮಾಡುವುದು ಉತ್ತಮ. ಉಳಿದವರಿಗೆ ಸೋರೆಕಾಯಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ದೇಹದಲ್ಲಿನ ವಿಷವನ್ನು ನಿವಾರಿಸುತ್ತದೆ

Drink bottle gourd (lauki) juice on empty stomach everyday. Know its  important benefits | Drink News – India TV

ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ದೇಹದಲ್ಲಿ ವಿಷವಾಗಿ ಮಾರ್ಪಾಡಾಗಬಹುದು. ಅಂತಹ ಸಂದರ್ಭದಲ್ಲಿ ಸೋರೆಕಾಯಿಯನ್ನು ಸೇವನೆ ಮಾಡುವುದು ಒಳ್ಳೆಯದು.

ಸೋರೆಕಾಯಿಯ ವಿಷಾಗ್ನಿ ಗುಣವನ್ನು ಹೊಂದಿರುತ್ತದೆ. ಹೀಗಾಗಿ ದೇಹವನ್ನು ನಿರ್ವಿಷಗೊಳಿಸಲು (ಶುದ್ಧಗೊಳಿಸಲು) ಸಹಾಯ ಮಾಡುತ್ತದೆ. ಸೋರೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.

​ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು

bottle gourd for skin health, ಸೋರೆಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ವೈದ್ಯರ ಸಲಹೆ  ಇಲ್ಲಿದೆ - doctor explain bottle gourd health benefits - Vijaya Karnataka

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್‌ನಷ್ಟು ಸೋರೆಕಾಯಿ ಜ್ಯೂಸ್‌ ಸೇವನೆ ಮಾಡುವುದರಿಂದ ಲಿವರ್‌ನ ಆರೋಗ್ಯ ಉತ್ತಮವಾಗಿರುತ್ತದೆ.

ಅಲ್ಲದೆ ಸೋರೆಕಾಯಿಯ ಜ್ಯೂಸ್‌ ಸೇವನೆಯಿಂದ ಬಾಯಿಯ ಕುಹರವೂ ಆರೋಗ್ಯವಾಗಿರುತ್ತದೆ. ಹೀಗಾಗಿ ತಾಜಾ ಸೋರೆಕಾಯಿಯನ್ನು ತಂದು ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಚರ್ಮದ ಆರೋಗ್ಯಕ್ಕೆ

skin problems, ಚರ್ಮದ ಬದಲಾವಣೆಗೂ ದೇಹದ ಆರೋಗ್ಯಕ್ಕೂ ಇದೆಯಾ ಸಂಬಂಧ? - such kind of  skin problems that can signal a major health problem - Vijaya Karnataka

ಹುಳುಗಳು ಕಚ್ಚಿದರೆ, ಗಾಯವಾದರೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಸೋರೆಕಾಯಿಯ ಪೇಸ್ಟ್‌ ಅಥವಾ ಸೋರೆಕಾಯಿ ಬಳ್ಳಿಯ ಎಲೆಯನ್ನು ಪೇಸ್ಟ್‌ ಮಾಡಿ ಹಚ್ಚಿದರೆ ಕಲೆಗಳಿಲ್ಲದಂತೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.

ಸೋರೆಕಾಯಿಯು ರಕ್ತವನ್ನು ಶುದ್ಧೀಕರಿಸಿ ಚರ್ಮವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ.

​ಹೊಟ್ಟೆ ಹುಳುಗಳ ಸಮಸ್ಯೆ ಇದ್ದರೆ

ಮಕ್ಕಳ, ದೊಡ್ಡವರ ಹೊಟ್ಟೆಯಲ್ಲಿನ ಜಂತು ಹುಳು ನಾಶಕ್ಕೆ ಸೂಕ್ತ ಮನೆಮದ್ದು. – KANNADIGA  WORLD

ಹೊಟ್ಟೆಯಲ್ಲಿ ಕೆಲವೊಮ್ಮೆ ಹುಳುಗಳು ಉಂಟಾಗುತ್ತವೆ. ಇವು ಹೊಟ್ಟೆ ನೋವು, ವಾಂತಿಗೆ ಕಾರಣವಾಗುತ್ತವೆ. ಇವುಗಳನ್ನು ನಿವಾರಣೆ ಮಾಡಲು ಸೋರೆಕಾಯಿ ಅತ್ಯುತ್ತಮವಾಗಿದೆ. ಸೋರೆಕಾಯಿ ಜ್ಯೂಸ್‌ ಸೇವನೆ ಅಥವಾ ಪದಾರ್ಥದಲ್ಲಿ ಸೋರೆಕಾಯಿಯನ್ನು ಬಳಸುವುದರಿಂದ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.

ಇನ್ನು ಆಯುರ್ವೇದದಲ್ಲಿ ಸೋರೆಕಾಯಿಯನ್ನು ಪಂಚಕರ್ಮ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ದೇಹವನ್ನು ಶುದ್ಧಿಕರಿಸುವಲ್ಲಿ ಸೋರೆಕಾಯಿ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಬಳಕೆಯಾಗುತ್ತದೆ.

Doctor Explain Bottle Gourd Health Benefits.