ಕಿಡ್ನಿ ಸ್ಟೋನ್ ಹಾಗೂ ಹಾರ್ಟ್ ಸಮಸ್ಯೆ ಇರುವವರು ಪಪ್ಪಾಯಿ ಹಣ್ಣು ತಿನ್ನಬಾರದು

09-09-22 09:28 pm       Source: Vijayakarnataka   ಡಾಕ್ಟರ್ಸ್ ನೋಟ್

ಏನೇ ಆಗಲಿ ಪರಂಗಿ ಹಣ್ಣು ಮಾತ್ರ ನಿಮಗಲ್ಲ. ನೀವೇನಾದರೂ ಪರಂಗಿ ಹಣ್ಣು ತಿಂದರೆ ಆಗಬಾರದ ಆರೋಗ್ಯದ ತೊಂದರೆ ಆಗುತ್ತದೆ. ಹಾಗಾದರೆ ಯಾರು ನೀವು?

ಮಾರುಕಟ್ಟೆಯಲ್ಲಿ ಕೆಲವೊಂದು ಹಣ್ಣುಗಳು ಸೀಸನಲ್. ಯಾವಾಗಲೂ ಸಿಗುವ ಹಣ್ಣುಗಳು ಬೇರೆ ಇರುತ್ತವೆ. ಅಂತಹ ಜಾತಿಗೆ ಸೇರಿದ ಹಣ್ಣು ಎಂದರೆ ಅದು ಪರಂಗಿ ಹಣ್ಣು. ತಿನ್ನಲು ಇದು ತುಂಬಾ ರುಚಿ. ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಆದರೆ ಕೆಲವರು ಪರಂಗಿಹಣ್ಣಿನಿಂದ ದೂರವೇ ಉಳಿಯಬೇಕು. ಏಕೆಂದರೆ ಅವರ ಆರೋಗ್ಯಕ್ಕೆ ಪರಂಗಿಹಣ್ಣು ಆಗಿಬರುವುದಿಲ್ಲ. ಪರಂಗಿ ಹಣ್ಣು ತಿಂದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಹಾಗಾದರೆ ಯಾರು ಪರಂಗಿ ಹಣ್ಣಿನಿಂದ ದೂರ ಇರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು...

ಗರ್ಭಿಣಿ ಮಹಿಳೆಯರು

7 monsoon tips for pregnant women

  • ಒಬ್ಬ ಗರ್ಭಿಣಿ ಮಹಿಳೆ ಎಂದರೆ ಎರಡು ಜೀವ. ತಾಯಿ ಮತ್ತು ಮಗು. ಹೀಗಾಗಿ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಸರಿಯಾದ ಪ್ರಮಾಣದಲ್ಲಿ ಒಳ್ಳೆಯ ಆಹಾರ ಸೇವನೆ ಬಹಳ ಮುಖ್ಯ. ಆದರೆ ವೈದ್ಯರು ಮಾತ್ರ ಈ ಸಮಯದಲ್ಲಿ ಪರಂಗಿ ಹಣ್ಣು ತಿನ್ನಬೇಡಿ ಎಂದು ಹೇಳುತ್ತಾರೆ.
  • ಏಕೆಂದರೆ ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಮಗುವನ್ನು ಹಿಡಿದುಕೊಂಡಿರುವ ಕರುಳಬಳ್ಳಿಯನ್ನು ಸಹ ಇದು ತುಂಬಾ ವೀಕ್ ಮಾಡುತ್ತದೆ ಎಂದು ಹೇಳುತ್ತಾರೆ. ಅರ್ಧಂಬರ್ಧ ಹಣ್ಣಿಗೆ ಬಂದ ಪರಂಗಿ ಹಣ್ಣು ಸೇವನೆ ಮಾಡಲೇಬಾರದು.

ಅನಿಯಮಿತ ಹೃದಯಬಡಿತ ಇರುವವರು

Heart age calculator: Find your heart age with this simple calculation -  Times of India

ಪರಂಗಿ ಹಣ್ಣು ಹೃದಯಕ್ಕೆ ಒಳ್ಳೆಯದು. ಆದರೆ ಹೃದಯ ಬಡಿತ ಚೆನ್ನಾಗಿ ಇಲ್ಲದೆ ಇರುವವರು ಪರಂಗಿ ಹಣ್ಣು ತಿನ್ನಬಾರದು. ಅದಕ್ಕೆ ಕಾರಣ ಪರಂಗಿ ಹಣ್ಣಿನಲ್ಲಿ ಕಂಡುಬರುವ ಒಂದು ರೀತಿಯ ಅಮೈನೋ ಆಮ್ಲ. ಇದು ಹೃದಯದ ಆರೋಗ್ಯಕ್ಕೆ ತುಂಬಾ ತೊಂದರೆದಾಯಕ. ಹೈಪೋಥೈರಾಯ್ಡಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಇದು ಆಗಿಬರುವುದಿಲ್ಲ.

ಅಲರ್ಜಿಯಿಂದ ಬಳಲುತ್ತಿರುವವರು

ಕೆಲವು ಜನರಿಗೆ ಮೊದಲೇ ಅಲರ್ಜಿ ಸಮಸ್ಯೆ ಇರುತ್ತದೆ. ಅಂತಹವರು ಪರಂಗಿ ಹಣ್ಣು ತಿನ್ನುವುದರಿಂದ ಉಸಿರಾಟದ ತೊಂದರೆ, ಕೆಮ್ಮು ಮತ್ತು ಕಣ್ಣುಗಳಲ್ಲಿ ನೀರು ತುಂಬಿಕೊಂಡ ಅನುಭವ ಉಂಟಾಗುತ್ತದೆ. ಇನ್ನು ಕೆಲವರಿಗೆ ಪರಂಗಿ ಹಣ್ಣಿನ ವಾಸನೆ ಎಂದರೆ ಅಲರ್ಜಿ. ಅಂತಹವರು ಪರಂಗಿ ಹಣ್ಣು ಮುಟ್ಟದೆ ಇದ್ದರೆ ಒಳ್ಳೆಯದು.

ಕಿಡ್ನಿ ಕಲ್ಲುಗಳು ಇರುವವರು

who should avoid eating papaya, ಕಿಡ್ನಿ ಸ್ಟೋನ್ ಹಾಗೂ ಹಾರ್ಟ್ ಸಮಸ್ಯೆ ಇರುವವರು  ಪಪ್ಪಾಯಿ ಹಣ್ಣು ತಿನ್ನಬಾರದು - people who suffering from this disease,they must  avoid papaya fruit - Vijaya Karnataka

  • ಪರಂಗಿ ಹಣ್ಣಿನಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಇದೆ. ಇದರಿಂದ ಇದು ಒಳ್ಳೆಯ ಆಂಟಿ ಆಕ್ಸಿಡೆಂಟ್ ಅಂಶವನ್ನು ಒಳಗೊಂಡ ಹಣ್ಣು ಎಂದು ಕರೆಸಿಕೊಳ್ಳುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ದೇಹ ಸೇರಿದರೆ ಕಿಡ್ನಿಯಲ್ಲಿ ಕಲ್ಲುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆಯೆಂದು ಒಂದು ಆರೋಗ್ಯದ ಸಂಶೋಧನೆ ಹೇಳುತ್ತದೆ.
  • ಹೊಸದಾಗಿ ಕಲ್ಲುಗಳು ಸಹ ಉತ್ಪತ್ತಿ ಆಗಬಹುದು ಮತ್ತು ಮೊದಲೇ ಇರುವ ಕಿಡ್ನಿ ಕಲ್ಲುಗಳು ದಪ್ಪ ಆಗಬಹುದು. ಇದರಿಂದ ಆನಂತರ ಸರ್ಜರಿ ಮಾಡಬೇಕಾದ ಅವಶ್ಯಕತೆ ಬರಬಹುದು.

ಹೈಪೊಗ್ಲೈಸೆಮಿಯಾ ಸಮಸ್ಯೆ ಇರುವವರು

Here are 5 reasons why you should eat papaya regularly | HealthShots

ರಕ್ತದಲ್ಲಿ ಸಕ್ಕರೆ ಪ್ರಮಾಣ ತುಂಬಾ ಕಡಿಮೆ ಇರುವವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು. ಇದರಿಂದ ಮಧುಮೇಹ ನಿರ್ವಹಣೆ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ಕೆಲವರಿಗೆ ಇದರಿಂದ ಹೃದಯ ಬಡಿತ ಹೆಚ್ಚಾಗಬಹುದು, ಕೈಕಾಲುಗಳು ನಡುಗಬಹುದು, ಮಾನಸಿಕ ಗೊಂದಲ ಉಂಟಾಗಬಹುದು. ಹಾಗಾಗಿ ಪರಂಗಿ ಹಣ್ಣಿನಿಂದ ದೂರವುಳಿಯುವುದು ಒಳ್ಳೆಯದು.

People Who Suffering From This Disease,They Must Avoid Papaya Fruit.