ಶ್ವಾಸಕೋಶ ತೊಂದರೆ, ಉಸಿರಾಟದ ಸಮಸ್ಯೆ ಬರಬಾರದೆಂದರೆ ಈ ಆಹಾರಗಳನ್ನು ಸೇವಿಸಿ

13-09-22 08:37 pm       Source: Vijayakarnataka   ಡಾಕ್ಟರ್ಸ್ ನೋಟ್

ಶ್ವಾಸಕೋಶ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಉಸಿರಾಟಕ್ಕೆ ಯಾವುದೇ ರೀತಿಯ ತೊಂದರೆಗಳು ಆಗಬಾರದೆಂದರೆ ಆಹಾರಕ್ರಮ ದಲ್ಲಿ ವಿಟಮಿನ್ ಸಿ ಹೆಚ್ಚಿರುವ ಆಹಾರಗಳು ಹಾಗೂ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು. ಉದಾಹರಣೆಗೆ ದೊಣ್ಣೆ ಮೆಣಸು, ದಾಳಿಂಬೆ ಹಣ್ಣುಗಳನ್ನು ಸೇವನೆ ಮಾಡಬೇಕು.

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಆಸೆ ಇರುತ್ತದೆ, ನಾವು ಜೀವನದಲ್ಲಿ ಚೆನ್ನಾಗಿ ದುಡಿಯ ಬೇಕು, ಆರೋಗ್ಯಕರವಾಗಿ ಜೀವನ ನಡೆಸಬೇಕು, ಇತರರಿಗೆ ಮಾದರಿಯಾಗಿ ಬದುಕಬೇಕು ಎನ್ನುವ ಆಸೆ ಇರುತ್ತದೆ. ಆದರೆ ಆರೋಗ್ಯಕರವಾಗಿ ಜೀವನ ಮಾಡಬೇಕು ಎಂದರೆ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಷ್ಟೇ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇರಿಸಬೇಕು.

ಹೇಳಿಕೇಳಿ ಈಗ ಮಳೆಗಾಲದ ಸೀಸನ್ ವಾತಾವರಣದಲ್ಲಿ ಉಂಟಾಗುವ ಏರುಪೇರಿನಿಂದಾಗಿ ಪದೇ ಪದೇ ಹುಷಾರು ತಪ್ಪುವುದು, ಶೀತ, ನೆಗಡಿ, ಕೆಮ್ಮು ಸಮಸ್ಯೆಗಳು ಎದುರಾಗುವುದು ಮಾಮೂಲು ಅದರಲ್ಲೂ ಈ ಕೆಮ್ಮಿನ ಸಮಸ್ಯೆಯನ್ನು ಹಾಗೇ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಎದೆಯಲ್ಲಿ ಹಾಗೂ ಗಂಟಲಿನ ಭಾಗದಲ್ಲಿ ಕಫದ ಸಮಸ್ಯೆ ಉಂಟಾಗಿ, ಅದು ಕೊನೆಗೆ ಶ್ವಾಸ ಕೋಶದ ಸಮಸ್ಯೆಯವರೆಗೂ ಹೋಗುತ್ತದೆ.

ಒಂದು ವೇಳೆ ಈ ಶ್ವಾಸಕೋಶದಲ್ಲಿ ಏರುಪೇರಾದರೆ ಉಸಿರಾಟ ವ್ಯವಸ್ಥೆಗೆ ತೀವ್ರ ತೊಂದರೆ ಎದುರಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ದೇಹದ ರೋಗನಿರೋಧಕ ಶಕ್ತಿಗಳನ್ನು ಹೆಚ್ಚು ಮಾಡಿ ಶ್ವಾಸಕೋಶದ ಸೋಂಕುಗಳನ್ನು ದೂರ ಮಾಡಬಲ್ಲ ಹಾಗೂ ಉಸಿರಾಟ ವ್ಯವಸ್ಥೆಗೆ ಸಮಸ್ಯೆ ಎದುರಾಗದೇ ಇರುವ ನೋಡಿಕೊಳ್ಳುವ ಕೆಲವೊಂದು ಆಹಾರಗಳ ಬಗ್ಗೆ ನೀಡಿದ್ದೇವೆ ಮುಂದೆ ಓದಿ..

ಸೀಬೆಹಣ್ಣು

Pink Guava: This is why the famous pink guava is losing its colour

  • ಪ್ರಕೃತಿದತ್ತವಾಗಿ ಸಿಗುವಂತಹ ಕೆಲವೊಂದು ಹಣ್ಣು ಹಾಗೂ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ, ಖಂಡಿತವಾಗಿಯೂ ಕೂಡ ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ದಿನಕ್ಕೊಂದು ಸೀಬೆಹಣ್ಣು ಸೇವನೆ ಮಾಡುವುದು.
  • ಹೌದು ಈಗಂತೂ ಸೀಬೆಹಣ್ಣು ಎಲ್ಲ ಕಡೆಗಳಲ್ಲೂ ಸಿಗುತ್ತದೆ. ಮುಖ್ಯವಾಗಿ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ತಾನಾಗಿಯೇ ಬಲಗೊಳ್ಳುತ್ತದೆ.
  • ಅಷ್ಟೇ ಅಲ್ಲದೆ ಈ ಸೀಬೆಹಣ್ಣಿನಲ್ಲಿ ಈಗಾಗಲೇ ಹೇಳಿದ ಹಾಗೆ ವಿಟಮಿನ್ ಸಿ ಯ ಜೊತೆಗೆ ಆಂಟಿ ಆಕ್ಸಿಡೆಂಟ್ ಅಂಶಗಳು, ಪೊಟ್ಯಾಷಿಯಂ ಮತ್ತು ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದ ರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿರ್ವಹಣೆ ಮಾಡುವುದರ ಜೊತೆಗೆ, ಶ್ವಾಸಕೋಶದ ಆರೋಗ್ಯ ವನ್ನು ಕೂಡ ಕಾಪಾಡುತ್ತದೆ.

ದೊಣ್ಣೆಮೆಣಸು

Green Capsicam Bonsai Vegetable Seeds- 15 pcs Seeds: Buy Online at Best  Prices in Bangladesh | Daraz.com.bd

  • ದೊಣ್ಣೆ ಮೆಣಸು ಅಥವಾ ಕ್ಯಾಪ್ಸಿಕಂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮುಖ್ಯವಾಗಿ ಈ ತರಕಾರಿ ಯಲ್ಲಿ ಕ್ಯಾಲೋರಿ ಅಂಶ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಅಷ್ಟೇ ಅಲ್ಲದೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕೂಡ ದೂರ ಮಾಡುತ್ತದೆ.
  • ಇನ್ನು ಮುಖ್ಯವಾಗಿ ಈ ತರಕಾರಿಯಲ್ಲಿ ವಿಟಮಿನ್ ಎ ಮತ್ತು ಸಿ ಅಂಶ ಹೇರಳವಾಗಿ ಸಿಗುವುದರ ಜೊತೆಗೆ ಆಂಟಿಆಕ್ಸಿಡೆಂಟ್ ಕೂಡ ಸಮೃದ್ಧವಾಗಿರುವುದರಿಂದ ಹಾನಿಕಾರಕ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವಲ್ಲಿ ಇವುಗಳ ಪಾತ್ರ ಮರೆಯುವ ಹಾಗಿಲ್ಲ. ಹೀಗಾಗಿ ಈ ತರಕಾರಿ ಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ ಶ್ವಾಸಕೋಶದ ಸಮಸ್ಯೆ ಮತ್ತು ಉಸಿರಾಟದ ತೊಂದರೆಗಳು ಸುಲಭವಾಗಿ ಬಗೆ ಹರಿಸಿಕೊಳ್ಳಬಹುದಾಗಿದೆ.

ಬ್ರಾಕೋಲಿ

BROCOLI | rungismarket.com

  • ಹಸಿರೆಲೆ ತರಕಾರಿಗಳು, ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಆದರೆ ನಿಮಗೆ ತಿಳಿದಿರಲಿ, ಇವೆಲ್ಲಾ ಹಸಿರೆಲೆ ಸೊಪ್ಪುಗಳು ಅಥವಾ ತರಕಾರಿ ಗಳಿಂದ, ಒಂದೆರಡು ಪಟ್ಟು ಹೆಚ್ಚೇ ಆರೋಗ್ಯಕಾರಿ ಪ್ರಯೋಜನಗಳು ಈ ಕೋಸುಗಡ್ಡೆ ಅಥವಾ ಬ್ರಾಕೋಲಿಯಲ್ಲಿ ಸಿಗುತ್ತದೆ ಎಂದರೇ ನಂಬಲೇಬೇಕು! ಆದರೆ ಈ ತರಕಾರಿಯ ಒಂದೇ
  • ಸಮಸ್ಯೆ ಏನೆಂದರೆ ಬೆಲೆಯಲ್ಲಿ ತುಂಬಾನೇ ದುಬಾರಿ. ಇದೇ ಕಾರಣಕ್ಕೆ ಹೆಚ್ಚಿನವರು ಈ ತರಕಾರಿ ಯಿಂದ ದೂರ ನಿಲ್ಲುತ್ತಾರೆ. ಇನ್ನು ಈ ತರಕಾರಿಯಲ್ಲೂ ಕೂಡ ಅಷ್ಟೇ ವಿಟಮಿನ್ ಸಿ ಯಥೇಚ್ಛವಾಗಿ ಕಂಡು ಬರುವುದರ ಜೊತೆಗೆ ಫಾಲಟೆ, ಕ್ಯಾರೊಟೆನಾಯ್ಡ್ ಮತ್ತು ಪೈಥೋಕೆ ಮಿಕಲ್ ಅಂಶ ಕೂಡ ಹೆಚ್ಚಿನ ಪ್ರಾಮಾಣದಲ್ಲಿರುವುದರಿಂದ, ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ದಾಳಿಂಬೆ ಹಣ್ಣು

Top 15 Pomegranate Benefits (Anar) for Skin, Hair & Health

  • ವರ್ಷದ ಎಲ್ಲಾ ದಿನಗಳಲ್ಲಿ ದಾಳಿಂಬೆ ಹಣ್ಣುಗಳು ಸಿಗುತ್ತದೆ. ಆದರೆ ಬೆಲೆಯಲ್ಲಿ ಮಾತ್ರ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಉಳಿದೆಲ್ಲಾ ವಿಷ್ಯದಲ್ಲೂ ಕೂಡ ಈ ಹಣ್ಣು ಬಹಳ ಒಳ್ಳೆಯದು.
  • ಮುಖ್ಯವಾಗಿ ಈ ಹಣ್ಣಿನಲ್ಲಿ ದೇಹದಲ್ಲಿ ಕಂಡು ಬರುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಸಿಗುವುದರ ಜೊತೆಗೆ, ವಿಟಮಿನ್ ಸಿ, ಪೊಟಾಷಿಯಂ ನಾರಿನಾಂಶ ಹಾಗೂ ಫೋಲೆಟ್ ಅಂಶ ಕೂಡ ಯಥೇಚ್ಛವಾಗಿ ಸಿಗುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ವೈರಸ್ ಹಾಗೂ ಬ್ಯಾಕ್ಟೀರಿಯಗಳು ನಿಮ್ಮ ದೇಹದ ಮೇಲೆ ದಾಳಿ ಮಾಡದಂತೆ ನಿಮ್ಮ ಆರೋಗ್ಯವನ್ನು ದಾಳಿಂಬೆ ಹಣ್ಣು ರಕ್ಷಣೆ ಮಾಡುತ್ತದೆ. ಇದರಿಂದಾಗಿ ಶ್ವಾಸಕೋಶದ ಆರೋಗ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡುವಲ್ಲಿ ಸಹಾಯವಾಗುತ್ತದೆ.

Here Is A Lists Of Foods For Healthy Lungs And Improved Breathing.