ಮೊಳಕೆ ಭರಿಸಿದ ಕಡಲೆ ಕಾಳು ಮತ್ತು ಹೆಸರುಕಾಳಿನ ಸಲಾಡ್‌ ಮಾಡಿ ತಿಂದರೆ ಲಾಭ ಅಷ್ಟಿಷ್ಟಲ್ಲ

17-09-22 09:09 pm       Source: Vijayakarnataka   ಡಾಕ್ಟರ್ಸ್ ನೋಟ್

ಮೊಳಕೆ ಭರಿಸಿದ ಕಾಳುಗಳು ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತವೆ. ಅದರಲ್ಲೂ ಕಡಲೆಕಾಳು ಮತ್ತು ಹೆಸರು ಕಾಳನ್ನು ಮೊಳಕೆ ಭರಿಸಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಮತ್ತು...

ಮೊಳಕೆ ಭರಿಸಿದ ಕಾಳುಗಳು ಆರೋಗ್ಯಕ್ಕೆ ವರದಾನವಿದ್ದಂತೆ. ಅವುಗಳ ಸಲಾಡ್‌ ಮಾಡಿ ಸವಿದರಂತೂ ಮತ್ತೆ ಮತ್ತೆ ತಿನ್ನಬೇಕೆನ್ನುವ ಭಾವ.ಕಡಲೆ ಕಾಳು, ಹೆಸರು ಕಾಳುಗಳನ್ನು 8 ರಿಂದ 9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಸಾಕು ಬಿಳಿ ಬಣ್ಣದ ಮೊಳಕೆಯೊಡೆಯಲು ಆರಂಭಿಸುತ್ತದೆ. ಇದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಉತ್ತಮ ಆಹಾರವಾಗಲಿದೆ. ಅಲ್ಲದೆ ಪೋಷಕಾಂಶಯುಕ್ತ ಆಹಾರವೂ ಆಗಲಿದೆ.

ಕಡಲೆ ಕಾಳು ಮತ್ತು ಹೆಸರುಕಾಳನ್ನು ಮೊಳಕೆ ಭರಿಸಿ ಅದರ ಸಲಾಡ್‌ ತಯಾರಿಸಿ ಸೇವನೆ ಮಾಡಿದರೆ ಎಷ್ಟು ಒಳ್ಳೆಯದು ಎನ್ನುವುದು ಗೊತ್ತಾ? ಇಲ್ಲಿದೆ ನೋಡಿ ಆರೋಗ್ಯಕ್ಕೆ ಈ ಎರಡೂ ಮೊಳಕೆ ಭರಿಸಿದ ಕಾಳುಗಳ ಭರಪೂರ ಉಪಯೋಗಗಳು.

ಕಣ್ಣಿನ ಆರೋಗ್ಯ

Always Tired? Discover the Hidden Reasons Why. Sleep Tips Included

ವಿಟಮಿನ್ ಎ ದೃಷ್ಟಿ ಆರೋಗ್ಯದ ಸುಧಾರಣೆಗೆ ಸಂಬಂಧಿಸಿದೆ. ವಿಟಮಿನ್ ಎ ಇರುವ ಕಾರಣ, ಮೊಳಕೆ ಭರಿಸಿದ ಕಾಳುಗಳು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವಿಟಮಿನ್‌ ಎ ಇರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮೊಳಕೆ ಭರಿಸಿದ ಕಾಳುಗಳನ್ನು ದಿನಾ ಬಳಸುವುದು ಒಳ್ಳೆಯದು.

ಕೂದಲಿನ ಆರೋಗ್ಯಕ್ಕೆ

See what you need to do to grow hair faster and stronger | Hair Growth:  ಕೂದಲು ವೇಗವಾಗಿ ಬೆಳೆಯಲು ನೀವು ಇಷ್ಟು ಮಾಡಿದ್ರೆ ಸಾಕಂತೆ– News18 Kannada

ಮೊಳಕೆಭರಿಸಿದ ಕಾಳುಗಳಲ್ಲಿ ವಿಟಮಿನ್ ಎ ಇರುವಿಕೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ನೆತ್ತಿಯ ಮೇಲೆ ದಪ್ಪ ಮತ್ತು ಉದ್ದವಾದ ಕೂದಲು ಬೆಳೆಯುವಂತೆ ಮಾಡುತ್ತದೆ. ವಿಟಮಿನ್ ಎ ಕೊರತೆಯು ಕೂದಲು ತೆಳುವಾಗುವುದು, ಒಣ ನೆತ್ತಿ ಮತ್ತು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮೊಳಕೆ ಭರಿಸಿದ ಕಾಳುಗಳನ್ನು ಸೇವನೆ ಮಾಡುತ್ತಿರಿ.

ಡ್ಯಾಂಡ್ರಫ್‌ ನಿವಾರಿಸುತ್ತದೆ

dandruff treatment, ಡ್ಯಾಂಡ್ರಫ್‌‌ನ್ನು ಪರ್ಮನೆಂಟ್ ಆಗಿ ಹೋಗಲಾಡಿಸುವ ಮನೆಮದ್ದುಗಳು -  easy home remedies to get rid of dandruff that actually works - Vijaya  Karnataka

ಕಾಳುಗಳ ಮೊಳಕೆಯಲ್ಲಿರುವ ಸೆಲೆನಿಯಮ್ ಅಂಶ ಕೂದಲಿನ ನೆತ್ತಿಯ ಉಂಟಾಗುವ ತಲೆಹೊಟ್ಟು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುವ ಶಿಲೀಂಧ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಈ ಮೂಲಕ ಇದು ತಲೆಹೊಟ್ಟು ನಿವಾರಿಸುತ್ತದೆ ಮತ್ತು ನೆತ್ತಿಯು ನೈಸರ್ಗಿಕ ಎಣ್ಣೆಯನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ, ಇದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಣ ಕೂದಲನ್ನು ನಿವಾರಿಸಿ ಮೃದು ಕೂದಲು ಬೆಳೆಯುವಂತೆ ಮಾಡುತ್ತದೆ.

​ಹೃದಯದ ಆರೋಗ್ಯಕ್ಕೆ

diet and exercise, ಹೃದಯದ ಆರೋಗ್ಯಕ್ಕೆ ಮಾಡಬೇಕಾದ, ಮಾಡಬಾರದ ವ್ಯಾಯಾಮಗಳು -  exercising when you have heart disease,things you must know - Vijaya  Karnataka

ಮೊಳಕೆಭರಿಸಿದ ಕಾಳುಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಅದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ಹಾನಿಕಾರಕ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಹೃದಯರಕ್ತನಾಳದ ವ್ಯವಸ್ಥೆಯ ಮೇಲಿನ ಅತಿಯಾದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್‌ ಅಂಶ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಯಾವುದೇ ಹೃದಯರಕ್ತನಾಳದ ಸಮಸ್ಯೆಯ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಹೀಗಾಗಿ ದಿನನಿತ್ಯ ಒಂದು ಹೊತ್ತಾದರೂ ಮೊಳಕೆ ಭರಿಸಿದ ಕಾಳುಗಳ ಸಲಾಡ್‌ ಸೇವನೆ ಮಾಡಿ.

ಮಧುಮೇಹ ಇರುವವರಿಗೆ

Health Tips: ಮಧುಮೇಹಿಗಳಿಗೆ ಕೆಲವೊಂದು ಮುನ್ನೆಚ್ಚರಿಕೆ ಅತ್ಯಗತ್ಯ; ಹೀಗಿರಲಿ ನಿಮ್ಮ  ಆಹಾರ ಕ್ರಮ

ಸಕ್ಕರೆ ಕಾಯಿಲೆಗೆ ಇರುವವರಿಗೆ ಈ ಸಲಾಡ್‌ ಹೇಳಿ ಮಾಡಿಸಿದ ಆಹಾರವಾಗಿದೆ. ಪೋಷಕಾಂಶದ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡುತ್ತದೆ.

ಹೀಗಾಗಿ ಪ್ರತಿನಿತ್ಯ ನಿಮ್ಮ ಡಯೆಟ್‌ನಲ್ಲಿ ಕಡಲೆಕಾಳು ಮತ್ತು ಮೊಳಕೆಭರಿಸಿದ ಕಾಳುಗಳನ್ನು ಸೇರಿಸಿಕೊಳ್ಳಿ. ಇದರಿಂದ ದೇಹವೂ ಆರೋಗ್ಯವಾಗಿರುತ್ತದೆ.

Know The Health Benefits Of Soaked Chickpeas And Mung Dal.