ಇವುಗಳನ್ನು ತಿನ್ನುವುದರಿಂದ ನೀವು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಬಹುದು!

19-09-22 07:46 pm       Source: Vijayakarnataka   ಡಾಕ್ಟರ್ಸ್ ನೋಟ್

ಹೆಚ್ಚು ಚುರುಕುತನ ಮತ್ತು ಬುದ್ಧಿವಂತಿಕೆ ನಿಮ್ಮದಾಗಿಸಿಕೊಳ್ಳಲು ಆಹಾರದಲ್ಲಿ ಕೆಲವು ಟಿಪ್ಸ್. ನೈಸರ್ಗಿಕವಾದ ರೂಪದಲ್ಲಿ ನಿಮ್ಮ ಆರೋಗ್ಯದ ಅಭಿವೃದ್ಧಿಗೆ ಸಹಕಾರಿ ಈ ಆಹಾರ ಪದಾರ್ಥಗಳು.

ನಮ್ಮ ಮೆದುಳಿನ ಕಾರ್ಯ ಚಟುವಟಿಕೆ ಬರೋಬ್ಬರಿ ದಿನದಲ್ಲಿ 24 ಗಂಟೆ ಕೂಡ ನಡೆಯುತ್ತಿ ರುತ್ತದೆ. ಅಂದರೆ ನಾವು ಮಲಗಿದ್ದಾಗ ಕೂಡ ನಮ್ಮ ಮೆದುಳು ದೇಹದ ಅಂಗಾಂಗಗಳಿಗೆ ಸೂಚನೆ ಕೊಡುವ ಕೆಲಸವನ್ನು ತನ್ನ ಪಾಡಿಗೆ ತಾನು ಮಾಡುತ್ತಿರುತ್ತದೆ. ನಮ್ಮ ದೇಹದಲ್ಲಿ ಇರುವಂತಹ ಇತರ ಅಂಗಂಗಗಳ ತರಹ ಮೆದುಳು ಅತ್ಯಂತ ಮುಖ್ಯವಾದ ಅಂಗವಾಗಿದೆ.

ನಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ನಾವು ವೃದ್ಧಿಸಿಕೊಳ್ಳಲು ಧ್ಯಾನ ಮತ್ತು ಇನ್ನಿತರ ಮೆದುಳಿಗೆ ಸಂಬಂಧಪಟ್ಟ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಬೇಕು. ಚುರುಕುತನ ಮತ್ತು ಬುದ್ಧಿವಂತಿಕೆ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.

ಮೆದುಳಿಗೆ ಸಹಕಾರಿಯಾದ ಆಹಾರಗಳು

4 Types of Foods to Support Memory

  • ಮೆದುಳಿನ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸಿಕೊಳ್ಳಲು ಆರೋಗ್ಯಕರವಾದ ಮತ್ತು ರುಚಿಕರ ವಾದ ಆಹಾರ ಪದಾರ್ಥಗಳನ್ನು ತಿನ್ನಬೇಕು. ಉದಾಹರಣೆಗೆ ಬ್ಲಾಕ್ಬೆರಿ ಹಣ್ಣುಗಳು. ಇವುಗಳಲ್ಲಿ ಸಾರ ಕಡಿಮೆ ಇದ್ದರೂ ಕೂಡ ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಪಾಲಿಫಿನಾಲ್ ತುಂಬಾ ಹೆಚ್ಚಾಗಿರುತ್ತದೆ.
  • ಇದು ನರಮಂಡಲದ ಉರಿಯೂತವನ್ನು ನಿಯಂತ್ರಣ ಮಾಡುವುದರ ಜೊತೆಗೆ ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಕೆಲವರಿಗೆ ಜ್ಞಾಪಕ ಶಕ್ತಿ ಕಡಿಮೆ ಇದ್ದರೆ ಅದನ್ನು ಕ್ರಮೇಣವಾಗಿ ಹೆಚ್ಚು ಮಾಡುತ್ತದೆ.

ಸೇಬು ಹಣ್ಣು

What Are the Health Benefits of Apples?

  • ದಿನಕ್ಕೊಂದು ಸೇಬು ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ವೈದ್ಯರ ಅಗತ್ಯತೆ ಇಲ್ಲದಂತೆ ಆರೋಗ್ಯ ಕಾಪಾಡುತ್ತದೆ ಎಂದು ಹೇಳುತ್ತಾರೆ. ಆದರೆ ಸೇಬುಹಣ್ಣು ಕೇವಲ ಹೃದಯಕ್ಕೆ ಮಾತ್ರವಲ್ಲದೆ ಮೆದುಳಿಗೂ ಕೂಡ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ.
  • ಏಕೆಂದರೆ ಇದರಲ್ಲಿ quercetin ಎಂಬ ವಿಶೇಷವಾದ ಆಂಟಿ ಆಕ್ಸಿಡೆಂಟ್ ಇದೆ. ಇದು ನಿಮ್ಮ ಮೆದುಳಿನ ಜೀವಕೋಶಗಳನ್ನು ಮುಂದೆ ಉಂಟಾಗಬಹುದಾದ ಹಾನಿಯಿಂದ ರಕ್ಷಣೆ ಮಾಡುತ್ತದೆ. ಆದರೆ ಮೆದುಳಿನ ಭಾಗದಲ್ಲಿ ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಹಾನಿಯನ್ನು ಸೇಬು ಹಣ್ಣು ತಡೆಗಟ್ಟುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ಪಾರ್ಕಿನ್ಸನ್ ಮತ್ತು ಅಲ್ಜಿಮರ್ ಕಾಯಿಲೆ ಬರುವಂತಹ ಸಾಧ್ಯತೆ ಇರುವುದಿಲ್ಲ.

ಪಾಲಕ್ ಸೊಪ್ಪು

Spinach Can Turn Harmful if Consumed in Excess

ವಿಟಮಿನ್ ಕೆ ಪ್ರಮಾಣ ಹೆಚ್ಚಾಗಿರುವ ಮತ್ತು ಫೋಲೆಟ್ ಇರುವಂತಹ ಪಾಲಕ್ ಸೊಪ್ಪು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಹೆಚ್ಚಾಗಿರುವ ಪಾಲಕ್ ಸೊಪ್ಪು ತನ್ನ ಫ್ರೀ ರಾಡಿಕಲ್ ಪ್ರಭಾವವನ್ನು ಕಡಿಮೆ ಮಾಡುವ ಗುಣದಿಂದ ದೇಹದ ಜೀವ ಕೋಶಗಳ ಹಾನಿಯನ್ನು ತಡೆಗಟ್ಟುತ್ತದೆ.

ಎಕ್ಸ್ಟ್ರಾ ವಿರ್ಜಿನ್ ಆಲಿವ್ ಆಯಿಲ್

Olive Oil Profiling (NMR) | Bruker

ಇದು ಸಹ ಮೆದುಳು ಸಹಕಾರಿಯಾದ ಆಹಾರ ಪದಾರ್ಥವಾಗಿದೆ. ಪ್ರಮುಖವಾಗಿ ಇದರಲ್ಲಿ oleocanthal ಎಂಬ ಪ್ರೋಟೀನ್ ಅಂಶ ಹೇರಳವಾಗಿದ್ದು, ಮೆದುಳಿನ ಜೀವಕೋಶಗಳನ್ನು ರಕ್ಷಣೆ ಮಾಡುತ್ತದೆ.

ಆಕ್ರಾನ್ ಸ್ಕ್ವ್ಯಾಷ್ (Acorn squash)

foods that improve memory, ಇವುಗಳನ್ನು ತಿನ್ನುವುದರಿಂದ ನೀವು ಜ್ಞಾಪಕ ಶಕ್ತಿ  ಹೆಚ್ಚಿಸಿಕೊಳ್ಳಬಹುದು! - eat these brain friendly foods to save your memory  for long time - Vijaya Karnataka

  • ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಜೊತೆಗೆ ಒಮೆಗ 3 ಫ್ಯಾಟಿ ಅಮ್ಲಗಳು ಹೆಚ್ಚಾಗಿವೆ. ಮನುಷ್ಯನ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯ ನಂತರ ಬಿಡುಗಡೆಯಾಗುವ ಹೋಮೊಸಿಸ್ಟೀನೆ ಪ್ರಮಾಣವು ರಕ್ತನಾಳಗಳ ಹಾನಿಗೆ ಕಾರಣವಾಗುತ್ತದೆ ಜೊತೆಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ಸಹ ತಂದು ಕೊಡುವ ಸಾಧ್ಯತೆ ಇರುತ್ತದೆ.
  • ಆದರೆ Acorn squash ನಲ್ಲಿ ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ಇರುವುದರಿಂದ ಮೆದುಳಿನ ಇಂತಹ ತೊಂದರೆಗಳು ಕಂಡು ಬಾರದಂತೆ ನೋಡಿಕೊಳ್ಳುತ್ತದೆ. ಕೆಲವೊಂದು ಮಸಾಲೆ ಪದಾರ್ಥ ಗಳು ಕೂಡ ಬೆಸ್ಟ್.

ಅರಿಶಿನ

Turmeric for skincare- How is it beneficial and how to use it | The Times  of India

  • ಅರಿಶಿನದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಕರ್ಕ್ಯುಮಿನ್ ಪ್ರಮಾಣ ಹೆಚ್ಚಾಗಿದ್ದು, ಒತ್ತಡ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದು ಅಲ್ಜಿಮರ್ ಕಾಯಿಲೆಯಿಂದ ಬಳಲುತ್ತಿರುವ ಜನರ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ನೆರವಾಗುತ್ತದೆ.
  • ಮೆದುಳಿನ ಜೀವಕೋಶಗಳಿಗೆ ಹಾನಿಕಾರಕವಾಗಿರುವ ಅಮೈಲಾಯ್ಡ್ ಬೀಟಾ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ. ಮೆದುಳನ್ನು ರಕ್ಷಣೆ ಮಾಡುತ್ತದೆ.

ಥೈಮ್ (Thyme)

-thyme

  • ಇದರಲ್ಲಿ ಆವಿಯಾಗುವ ಎಣ್ಣೆಯ ಅಂಶದ ಪ್ರಮಾಣ ಇರಲಿದ್ದು, ಒಮೇಗಾ 3 ಫ್ಯಾಟಿ ಆಮ್ಲಗಳು ಮೆದುಳಿನ ಭಾಗಕ್ಕೆ ಸಮರ್ಪಕವಾಗಿ ಸಿಗುವಂತೆ ಮಾಡುತ್ತವೆ. ಇದರಿಂದ ವಯಸ್ಸಾದಂತೆ ಬರುವಂತಹ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಬಲ್ಲದು.
  • ಆರೋಗ್ಯ ತಜ್ಞರ ಪ್ರಕಾರ ರೋಸ್ಮೆರಿಯಲ್ಲಿ ಇರುವಂತಹ ಕಾರ್ನೋಸಿಕ್ ಆಮ್ಲ (carnosic acid) ಜನರಿಗೆ ಎದುರಾಗುವ ಪಾರ್ಶ್ವವಾಯು ಮತ್ತು ಅಲ್ಜಿಮರ್ ಕಾಯಿಲೆಯನ್ನು ದೂರಮಾಡುತ್ತದೆ. ಜ್ಞಾಪಕಶಕ್ತಿಯನ್ನು ಸಹ ಹೆಚ್ಚು ಮಾಡುತ್ತದೆ.

ದಾಲ್ಚಿನ್ನಿ ಅಥವಾ ಚಕ್ಕೆ

Sugar Patients Drinking These Can Have A Control Over Diabetes | ಈ  ಪಾನೀಯಗಳನ್ನು ಕುಡಿದರೆ, ಮಧುಮೇಹದ ರೋಗಲಕ್ಷಣಗಳು ಇರುವುದೇ ಇಲ್ಲ!! | Headline  Karanataka

  • ಅಡುಗೆಯ ಸ್ವಾದವನ್ನು ಹೆಚ್ಚು ಮಾಡುವ ದಾಲ್ಚಿನ್ನಿ ಅಲ್ಜಿಮರ್ ಕಾಯಿಲೆಗೆ ರಾಮಬಾಣ ಎಂದು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂತಹ ಉತ್ತಮ ಪ್ರೊಟೀನ್ ಅಂಶಗಳು ಇರಲಿದ್ದು, ಮೆದುಳಿನ ಜೀವಕೋಶಗಳ ರಕ್ಷಣೆ ಮಾಡುತ್ತದೆ.
  • ವಿಟಮಿನ್ ಸಿ ಪ್ರಮಾಣ ಇರುವಂತಹ ಯಾವುದೇ ಆಹಾರ ಪದಾರ್ಥದ ಜೊತೆಗೆ ಇದನ್ನು ಸೇವನೆ ಮಾಡಬಾರದು. ಏಕೆಂದರೆ ಇದು ಕ್ಯಾನ್ಸರ್ಕಾರಕವಾಗಿ ಬದಲಾಗುವ ಸಾಧ್ಯತೆ ಇರುತ್ತದೆ.

Eat These Brain Friendly Foods To Save Your Memory For Long Time.