ತೂಕ ಕಮ್ಮಿ ಮಾಡುತ್ತೆ ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಿತ ಪಾನೀಯ!

20-09-22 07:40 pm       Source: Vijayakarnataka   ಡಾಕ್ಟರ್ಸ್ ನೋಟ್

ದಿನೇದಿನೇ ನಿಮ್ಮ ದೇಹದ ತೂಕ ತುಂಬಾ ಹೆಚ್ಚಾಗಿದೆಯೇ? ಚಿಂತಿಸುವ ಅಗತ್ಯವಿಲ್ಲ. ಇಲ್ಲೊಂದು ಮ್ಯಾಜಿಕ್ ಡ್ರಿಂಕ್ ಇದೆ. ಇದನ್ನು ಕುಡಿಯಿರಿ ಸಾಕು.

ದೇಹದ ತೂಕ ಹೆಚ್ಚಾಗಿರುವವರು ಬೇರೆ ಬೇರೆ ಕಸರತ್ತುಗಳನ್ನು, ಡಯಟ್ ಪದ್ಧತಿಗಳನ್ನು ಅನುಸರಿಸಿ ಹೇಗಾದರೂ ಮಾಡಿ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದುಕೊಳ್ಳುವುದು ಸಹಜ. ಆದರೆ ಇದರಲ್ಲಿ ಅಡ್ಡಪರಿಣಾಮಗಳು ಇರಬಹುದು ಮತ್ತು ಅವುಗಳು ಗಮನಕ್ಕೆ ಬರದೆ ಕೂಡ ಇರಬಹುದು. ಇಂತಹ ಸಂದರ್ಭದಲ್ಲಿ ಒಂದು ಮಾಡಲು ಹೋಗಿ ಮತ್ತೊಂದು ಆಗುತ್ತದೆ.

ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ ನಮ್ಮ ತೂಕ ಕಡಿಮೆ ಮಾಡುವ ಪ್ರಯತ್ನ ಇದ್ದರೆ ಒಳ್ಳೆಯದು. ಇಲ್ಲಿ ಅಂತಹ ಒಂದು ವಿಧಾನವನ್ನು ನಿಮಗೆ ತಿಳಿಸಿಕೊಡಲಾಗಿದೆ. ಅದೇನೆಂದರೆ ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿದ ಒಂದು ಪಾನೀಯವನ್ನು ಕುಡಿಯುವುದರ ಮೂಲಕ ತೂಕವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು.

ಅಧ್ಯಯನದ ಪ್ರಕಾರ

Is It Bad to Lose Weight Too Quickly?

 • ಅಮೆರಿಕದ ಪ್ರತಿಷ್ಠಿತ ಜರ್ನಲ್ ಅಫ್ ಅಮೇರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ ಸಂಸ್ಥೆಯ ಅಧ್ಯಯನದ ಪ್ರಕಾರ ಜೇನುತುಪ್ಪ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ. ದೇಹವು ನಿದ್ರಾವಸ್ಥೆಯಲ್ಲಿದ್ದಾಗ ಮಲಗುವ ಮುಂಚೆ ಜೇನುತುಪ್ಪ ತಿಂದಿದ್ದರೆ, ದೇಹದಿಂದ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶವನ್ನು ಕರಗಿಸುವ ಕೆಲಸ ಮಾಡುತ್ತದೆ.
 • ಇದರ ಜೊತೆಗೆ ನೈಸರ್ಗಿಕವಾಗಿ ಸಿಹಿ ಅಂಶವನ್ನು ಒಳಗೊಂಡಿರುವ ದಾಲ್ಚಿನ್ನಿ ಕೂಡ ಇದೇ ರೀತಿ ಸಹಾಯ ಮಾಡುತ್ತದೆ. ಮುಖ್ಯವಾಗಿ ಹೊಟ್ಟೆಯ ಭಾಗದ ಕೊಬ್ಬು ಕರಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
 • ಜಪಾನ್ ದೇಶದ ಜರ್ನಲ್ ಆಫ್ ನ್ಯೂಟ್ರಿಷನಲ್ ಸೈನ್ಸ್ ಅಂಡ್ ವಿಟಮಿ ನಾಲಜಿ ಸಂಶೋಧನೆ ಹೇಳುವಂತೆ ಅವರು ಇಲಿಗಳ ಮೇಲೆ ಪ್ರಯೋಗ ಮಾಡಿದಾಗ ಇದೇ ರೀತಿಯ ಒಂದು ಫಲಿತಾಂಶ ಕಂಡು ಬಂದಿದ್ದು, ಮನುಷ್ಯರ ಮೇಲೆ ಕೂಡ ಇದನ್ನು ಪ್ರಯೋಗಿಸಬಹುದು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ.

ದಾಲ್ಚಿನ್ನಿ ಅಥವಾ ಚಕ್ಕೆಯಲ್ಲಿರುವ ಪ್ರಯೋಜನಗಳು

4 Different Ways Of Using Cinnamon Or Dalchini To Lose Weight -4 Different Ways Of Using Cinnamon Or Dalchini To Lose Weight

 • ದಾಲ್ಚಿನ್ನಿ ಅಥವಾ ಚಕ್ಕೆ ತನ್ನಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಲಕ್ಷಣಗಳನ್ನು ಒಳ ಗೊಂಡಿದೆ. ಅಧ್ಯಯನಗಳು ಹೇಳುವಂತೆ ದಾಲ್ಚಿನ್ನಿ ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಪ್ಯಾರಾಸೈಟ್ ಲಕ್ಷಣಗಳನ್ನು ಹೊಂದಿರುವುದರಿಂದ ಜೊತೆಗೆ ಬೇರೆ ಬೇರೆ ರೂಪಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಸಹ ಹೊಂದಿರುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಕಡಿಮೆ ಮಾಡಿ ರಕ್ತದೊತ್ತಡ ವನ್ನು ನಿಯಂತ್ರಣಕ್ಕೆ ತರುತ್ತದೆ.
 • ಇದರ ಜೊತೆಗೆ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಉತ್ತೇಜಿಸಿ ಮೆಟಬಾಲಿಸಮ್ ವೃದ್ಧಿಸುತ್ತದೆ. ಇದರಿಂದ ದೇಹದ ತೂಕ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.

ಜೇನುತುಪ್ಪ

Should You Use Honey for Weight Loss? Know Why, Best Tips & More

ದಾಲ್ಚಿನ್ನಿ ತರಹ ಜೇನುತುಪ್ಪ ಕೂಡ ಇದೇ ರೀತಿಯ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳ ಗೊಂಡಿದ್ದು, ಹೊಟ್ಟೆ ಹಸಿವಿನ ನಿಯಂತ್ರಣಕ್ಕೆ ಮತ್ತು ದೇಹದ ತೂಕ ನಿಯಂತ್ರಣ ಮಾಡಲು ಇದು ನೆರವಾಗುತ್ತದೆ. ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ, ದೇಹದ ತೂಕ ನಿಯಂತ್ರಣ ಮಾಡುತ್ತದೆ. ವಿಶೇಷವಾಗಿ ಟ್ರೈಗ್ಲಿಸರೈಡ್ ಪ್ರಮಾಣ ಕೂಡ ಕಡಿಮೆಯಾಗುತ್ತದೆ.

ದೇಹದ ತೂಕ ನಿಯಂತ್ರಣಕ್ಕಾಗಿ ಏನು ಮಾಡಬೇಕು?

5 easy tips to lose belly fat - Health News

 • ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ
 • ಅದಕ್ಕೆ ಅರ್ಧ ಟೀ ಚಮಚ ದಾಲ್ಚಿನ್ನಿ ಪೌಡರ್ ಹಾಕಿ ಚೆನ್ನಾಗಿ ತಿರುವಿ.
 • ಸ್ವಲ್ಪ ಹೊತ್ತು ಇದನ್ನು ಆರಲು ಬಿಡಿ.
 • ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ ಹಾಕಿ
 • ಇದನ್ನು ಚೆನ್ನಾಗಿ ತಿರುವಿ, ನಿಮ್ಮ ತೂಕ ನಿಯಂತ್ರಣ ಮಾಡುವ ಪಾನೀಯ ರೆಡಿಯಾಗಿದೆ.

ಯಾವಾಗ ಇದನ್ನು ಸೇವನೆ ಮಾಡಬೇಕು?

 • ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಣ ಮಾಡಿದ ಗ್ರೀನ್ ಟೀ ಅಥವಾ ಪಾನಿಯವನ್ನು ಊಟ ಮಾಡುವ ಮುಂಚೆ ಕುಡಿದರೆ ಒಳ್ಳೆಯದು. ಏಕೆಂದರೆ ಇದು ದೀರ್ಘಕಾಲ ನಿಮ್ಮನ್ನು ಆರೋಗ್ಯಕರವಾಗಿ ಇರಿಸುತ್ತದೆ.
 • ದಾಲ್ಚಿನ್ನಿ ಮತ್ತು ಜೇನುತುಪ್ಪ ಮಿಶ್ರಣದ ಪಾನೀಯ ಅಥವಾ ಚಹಾ ಅನ್ನು ನೀವು ಊಟದ ಮಧ್ಯೆ ಕೂಡ ಸೇವಿಸಬಹುದು. ಇದರಿಂದ ಅನಾರೋಗ್ಯಕರ ಸ್ನ್ಯಾಕ್ಸ್ ತಿನ್ನುವ ಅಭ್ಯಾಸ ಇಲ್ಲದಂತೆ ಆಗುತ್ತದೆ.
 • ಈ ಪಾನೀಯ ನಿಮಗೆ ವ್ಯಾಯಾಮ ಮಾಡಲು ಒಳ್ಳೆಯ ಶಕ್ತಿ ಮತ್ತು ಚೈತನ್ಯವನ್ನು ಕೊಡುತ್ತದೆ. ಹಾಗಾಗಿ ವ್ಯಾಯಾಮ ಮಾಡುವ ಮುಂಚೆ ಕೂಡ ಇದನ್ನು ಕುಡಿಯಬಹುದು. ನಿದ್ರೆ ಮಾಡುವ ಮುಂಚೆ, ಕುಡಿದರೆ ದೇಹದ ತೂಕ ಸುಲಭವಾಗಿ ನಿಯಂತ್ರಣವಾಗುತ್ತದೆ.

Drink The Honey And Cinnamon Drink To Reduce Weight.