ಟೊಮೆಟೊ ಜ್ಯೂಸ್ ಕುಡಿದ್ರೆ ಮೂಳೆ ಗಟ್ಟಿಯಾಗಿರುತ್ತಂತೆ

23-09-22 07:42 pm       Source: Vijayakarnataka   ಡಾಕ್ಟರ್ಸ್ ನೋಟ್

ಟೊಮೆಟೊ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ತಿಳಿಯೋಣ.

ಆರೋಗ್ಯಕರವಾಗಿರಲು ಹಣ್ಣುಗಳ ಸೇವನೆ ಎಷ್ಟು ಮುಖ್ಯವೋ ಹಾಗೆಯೇ ಜ್ಯೂಸ್‌ಗಳ ಸೇವನೆಯೂ ಅಷ್ಟೇ ಮುಖ್ಯ. ಹಾಗಂತ ಕೆಲವೊಮ್ಮೆ ಶಕ್ತಿ ಪಾನೀಯಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಟೊಮೆಟೊ ಜ್ಯೂಸ್‌ ನಿಮ್ಮ ಆರೋಗ್ಯಕ್ಕೆ ಉತ್ತಮವಾದುದು ಎನ್ನಲಾಗುತ್ತದೆ. ವ್ಯಾಯಾಮದ ನಂತರವೂ ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ಟೊಮೆಟೊ ರಸವು ತುಂಬಾ ಪ್ರಯೋಜನಕಾರಿಯಾಗಿದೆ.

ಟೊಮೆಟೊ ಜ್ಯೂಸ್‌ನ ಪೋಷಕಾಂಶಗಳು

Tomato Juice, A Wonder Drink: Benefits, Risks, Recipes, and More -  Tastylicious

ಟೊಮೆಟೊ ಜ್ಯೂಸ್‌ನಲ್ಲಿ ಆಂಟಿ-ಆಕ್ಸಿಡೆಂಟ್‌ಗಳು, ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು ಮತ್ತು ಪೊಟ್ಯಾಸಿಯಮ್, ಫಾಸ್ಪರಸ್‌ನಂತಹ ಅಗತ್ಯ ಖನಿಜಗಳು ಸಮೃದ್ಧವಾಗಿವೆ. ಆದ್ದರಿಂದ ಈ ರಸವು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಮೂಳೆಗಳಿಗೆ ಬಲವನ್ನು ನೀಡುತ್ತದೆ

ಟೊಮೆಟೊ ಜ್ಯೂಸ್‌ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಟೊಮೇಟೊ ಜ್ಯೂಸ್ ಸೇವಿಸಿದರೆ ಮೂಳೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ.

ಧೂಮಪಾನದ ಪರಿಣಾಮಗಳನ್ನು ಹಿಮ್ಮೆಟ್ಟಿಸುತ್ತದೆ

Smoking harms not just your physical health, but your mental health too

ಟೊಮೆಟೊ ಜ್ಯೂಸ್‌ ಧೂಮಪಾನದಿಂದ ದೇಹಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಟೊಮ್ಯಾಟೋಸ್ ಕ್ಲೋರೊಜೆನಿಕ್ ಆಮ್ಲ ಮತ್ತು ಕ್ಯೂಮರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಸಿಗರೇಟ್‌ನಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಸಿನೋಜೆನ್‌ಗಳ ವಿರುದ್ಧ ಹೋರಾಡುತ್ತದೆ.

​ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ

Causes, Symptoms Of Heart Attack And How They Can Be Prevented | Explained

ಟೊಮೆಟೊ ಜ್ಯೂಸ್‌ನಲ್ಲಿ ವಿಟಮಿನ್ ಬಿ-3, ಇ ಮತ್ತು ಲೈಕೋಪೀನ್ ಇದ್ದು ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ

8 SUPER HEALTH BENEFITS OF TOMATOES - HEALTH & NUTRITION

ಟೊಮೆಟೊ ರಸವು ಉತ್ತಮ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದರಿಂದಾಗಿ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಟೊಮೆಟೊ ರಸವು ಶೀತ ಮತ್ತು ಜ್ವರದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಟೊಮೆಟೊಗಳನ್ನು ಸೇವಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ

5 reasons why tomatoes is good for your skin | Pulse Nigeria

  • ನಿಮಗೆ ಮೂತ್ರಪಿಂಡದ ಸಮಸ್ಯೆ ಇದ್ದರೆ, ನೀವು ಟೊಮೆಟೊ ರಸವನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
  • ಟೊಮೆಟೊದಿಂದ ಅಲರ್ಜಿ ಇರುವವರು ಟೊಮೆಟೊ ಜ್ಯೂಸ್ ಕುಡಿಯುವುದನ್ನು ತಪ್ಪಿಸಬೇಕು.
  • ನೀವು ಗರ್ಭಿಣಿಯಾಗಿದ್ದರೆ ಅಥವಾ ಹಾಲುಣಿಸುವವರಾಗಿದ್ದರೆ ಟೊಮೆಟೋ ಜ್ಯೂಸ್ ಕುಡಿಯುವ ಮೊದಲು ನಿಮಮ್ ಡಾಕ್ಟರ್‌ನ್ನು ಭೇಟಿಯಾಗಿ.

Health Benefits Of Tomato Juice.