ಸೀಬೆಹಣ್ಣನ್ನು ಸಿಪ್ಪೆ ಸಮೇತ ತಿಂದ್ರೆ, ಮಧುಮೇಹ-ಕೊಲೆಸ್ಟ್ರಾಲ್ ಕಂಟ್ರೋಲ್‌ಗೆ ಬರುತ್ತೆ!

30-09-22 08:19 pm       Source: Vijayakarnataka   ಡಾಕ್ಟರ್ಸ್ ನೋಟ್

ಸೀಬೆ ಹಣ್ಣು ಎಂದ್ರೆ ಇಷ್ಟಾನಾ? ಹಾಗಾದ್ರೆ ಈ ಹಣ್ಣನ್ನು ತಿನ್ನುವಾಗ ಸಿಪ್ಪೆ ತೆಗೆದು ತಿನ್ನುವ ಬದಲು, ಸಿಪ್ಪೆ ಸಮೇತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಬರುವು.

ಬಹಳಷ್ಟು ಜನರಿಗೆ, ಸಣ್ಣ ವಯಸ್ಸಿನಿಂದಲೂ ಕೂಡ ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಎಂದರೆ ಬಹಳ ಇಷ್ಟ. ಆದರೆ ಸೀಬೆಹಣ್ಣು ಅತಿಯಾಗಿ ಸೇವನೆ ಮಾಡಿದರೆ, ಶೀತದ ಸಮಸ್ಯೆ ಎದುರಾ ಗುತ್ತದೆ ಎನ್ನುವ ಕಾರಣಕ್ಕೆ ತುಂಬಾ ಜನರು, ಈ ಹಣ್ಣಿನಿಂದ ದೂರ ಉಳಿಯುತ್ತಾರೆ! ಆದರೆ ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು! ಯಾಕೆಂದರೆ ತಜ್ಞರು ಹೇಳುವ ಪ್ರಕಾರ ದಿನ ಕ್ಕೊಂದು ಸೀಬೆ ಹಣ್ಣು ತಿಂದರೆ, ದೇಹದಲ್ಲಿ ರೋಗನಿರೋಧಕ ಶಕ್ತಿ ತಾನಾಗಿಯೇ ಬಲಗೊಳ್ಳುತ್ತದೆ, ಇದರಿಂದ ಸಣ್ಣ-ಪುಟ್ಟ ಸಮಸ್ಯೆಗಳು ನಮ್ಮ ಹತ್ತಿರನೂ ಕೂಡ ಸುಳಿಯುವುದಿಲ್ಲ ಎಂದು ಹೇಳುತ್ತಾರೆ.

ಪ್ರಮುಖವಾಗಿ ಈ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್‌ಗಳು, ಖನಿಜಾಂಶಗಳು, ನಾರಿನಾಂಶಗಳು, ಕಬ್ಬಿಣಾಂಶ, ಪೊಟಾಶಿಯಂ, ಮೆಗ್ನಿಶಿಯಂ ಹಾಗೂ ಪೋಸ್ಪರಸ್ ಅಂಶಗಳು, ಯಥೇಚ್ಛ ವಾಗಿ ಸಿಗುವುದರಿಂದ, ಎಲ್ಲಾ ಹಣ್ಣುಗಳಂತೆ ಸೇಬೆ ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬನ್ನಿ ಇಂದಿನ ಲೇಖನದಲ್ಲಿ ಮಧುಮೇಹ ಸಮಸ್ಯೆ, ಇರುವವರು ಹೇಗೆ ತಮ್ಮ ಆಹಾರ ಪದ್ಧತಿಯಲ್ಲಿ ಸೀಬೆ ಹಣ್ಣಿನ ಸಿಪ್ಪೆಯನ್ನು ಸೇರಿಸಿಕೊಂಡರೆ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನೋಡೋಣ...

ದೇಹದಲ್ಲಿ ಮಧುಮೇಹ ಏರುಪೇರು ಆಗಲು ಕಾರಣಗಳು

9 Healthy Habits to Control Your Diabetes - Blogs - Makati Medical Center

  • ಕೆಲವರಿಗೆ ಹುಟ್ಟಿದಾಗಿನಿಂದಲೇ  ಮಧುಮೇಹ ಸಮಸ್ಯೆ ಅಥವಾ ಸಕ್ಕರೆ ಕಾಯಿಲೆ ಕಂಡು ಬಂದರೆ(ಅಂದರೆ ಅನುವಂಶೀಯವಾಗಿ) ಇನ್ನು ಕೆಲವರಿಗೆ ಅರ್ಧ ವಯಸ್ಸಿನ ನಂತರ ಈ ಕಾಯಿಲೆ ಬರುತ್ತದೆ. ಇದಕ್ಕೆಲ್ಲಾ ಮುಖ್ಯ ಕೆಟ್ಟ ಜೀವನಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿ
  • ಆದರೆ ಮಧುಮೇಹ ಬಂದ ಮೇಲೆ, ಈ ಕಾಯಿಲೆ ಆತನನ್ನು ಬಿಟ್ಟು ಹೋಗುವ ಮಾತೇ ಇಲ್ಲ! ಹೀಗಾಗಿ ಇಂತಹ ಸಮಯದಲ್ಲಿ ಮಧುಮೇಹ ಕಾಣಿಸಿಕೊಂಡ ಬಳಿಕ ಕಟ್ಟುನಿಟ್ಟಿನ ಆಹಾರ ಪದ್ಧತಿ, ಪ್ರೊಟೀನ್, ನಾರಿನಾಂಶ ಹೆಚ್ಚಿರುವ ಹಣ್ಣು ತರಕಾರಿಗಳ ಸೇವನೆ ಮಾಡಬೇಕು. ಕಡಿಮೆ ಕೊಬ್ಬಿನಾಂಶ ಇರುವ ಡೈರಿ ಉತ್ಪನ್ನಗಳು, ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಬೇಕು, ಜೊತೆಗೆ ಕಾರ್ಬೋ ಹೈಡ್ರೇಟ್ ಅಂಶಗಳು ಕಡಿಮೆ ಇರುವ ಆಹಾರವನ್ನು ಸೇವನೆ ಮಾಡಬೇಕು.

ಮಧುಮೇಹಿಗಳ ಆಹಾರ ಪದ್ಧತಿ

  • ಮೊದಲೇ ಹೇಳಿದ ಹಾಗೆ ಮಧುಮೇಹಿ ರೋಗಿಗಳು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಕೂಡ ಎಣ್ಣೆಯಾಂಶ, ಜಂಕ್ ಫುಡ್, ಸಿಹಿ ಪದಾರ್ಥಗಳು ಇದರ ಜೊತೆಗೆ ಕೃತಕ ಸಕ್ಕರೆ ಅಂಶ ಇರುವ ಆಹಾರಗಳನ್ನು ಸೇವನೆ ಮಾಡಲೇಬಾರದು.
  • ಆದಷ್ಟು ಕೆಫಿನ್ ಅಂಶ ಹೆಚ್ಚಿರುವ ಟೀ-ಕಾಫಿ ಕುಡಿಯುವುದರಿಂದ ದೂರ ಇದ್ದರೆ ಒಳ್ಳೆಯದು. ಇಷ್ಟು ಮಾತ್ರವಲ್ಲ, ಕ್ಯಾಲೋರಿ ಅಂಶ ಹೆಚ್ಚಿರುವ ಆಹಾರಗಳಿಂದ ದೂರ ಇರಬೇಕು. ಯಾವುದೇ ಕಾರಣಕ್ಕೂ ಸಿಹಿ ತಿಂಡಿಗಳನ್ನು ಸೇವನೆ ಮಾಡಬಾರದು. ಇನ್ನೂ ರಾತ್ರಿ ಊಟಕ್ಕೆ ಅನ್ನದ ಬದಲು ಚಪಾತಿ ಸೇವನೆ ಮಾಡಿದರೆ ಒಳ್ಳೆಯದು. ಒಟ್ಟಾರೆಯಾಗಿ ಒಂದೇ ಮಾತಿನಲ್ಲಿ ಹೇಳುವುದಾದರೆ,
  • ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಆಹಾರಗಳಿಂದ ದೂರ ಇದ್ದರೆ ಒಳ್ಳೆಯದು. ಯಾಕೆಂದರೆ ಇಂತ ಆಹಾರಗಳು, ಬಹಳ ಬೇಗನೇ ಜೀರ್ಣ ಆಗುವುದಿಲ್ಲ. ಇದರಿಂದ ಬಹಳ ಅಲ್ಪ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆ ಕಾಣುತ್ತದೆ.

ಇವುಗಳ ಬದಲು ಸೀಬೆ ಹಣ್ಣು ಸಿಪ್ಪೆ ಸಮೇತ ತಿನ್ನಿ!

10 Surprising Benefits of Guava Leaves for Skin, Hair and Overall Health

ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಅವುಗಳು ಇದ್ದ ರೂಪದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ. ಅದರಲ್ಲೂ ತಮ್ಮಲ್ಲಿ ನೈಸರ್ಗಿಕ ಸಿಹಿ ಅಂಶ ಹೊಂದಿರುವ ಕೆಲವೊಂದು ಹಣ್ಣುಗಳನ್ನು ಸಿಪ್ಪೆ ಸಮೇತವಾಗಿ ಸೇವನೆ ಮಾಡುವುದರಿಂದ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಕಾಣದೆ,ಮಧುಮೇಹ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕೊಂದು ಒಳ್ಳೆಯ ಉದಾಹರಣೆ, ಎಂದ್ರೆ ಸೀಬೆ ಹಣ್ಣು.

ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುವ ಗುಣ ಸೀಬೆ ಹಣ್ಣಿನ ಸಿಪ್ಪೆಯಲ್ಲಿದೆ!

ಹೌದು! ಸೀಬೆಹಣ್ಣಿನ ಸಿಪ್ಪೆಯಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ನೋಡಿಕೊಳ್ಳುವ ಗುಣಗಳು ಇರುವ ಹಾಗೆ, ರಕ್ತದ ಕಣಗಳಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ದೂರ ಮಾಡುವ ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು ಕೂಡ ಈ ಹಣ್ಣಿನಲ್ಲಿ ಸಿಗುತ್ತವೆ.

ದೇಹದ ಲಿವರ್‌ನ ಆರೋಗ್ಯಕ್ಕೆ!

  • ಸಂಶೋಧನೆಗಳು ಹೇಳುವ ಹಾಗೆ ಸೀಬೆಹಣ್ಣಿನಲ್ಲಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಲಿವರ್ ಅಥವಾ ಯಕೃತ್ ಭಾಗದ ಆರೋಗ್ಯವನ್ನು ಕಾಪಾಡುವಂತಹ ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು ಕೂಡ ಈ ಹಣ್ಣಿನಲ್ಲಿ ಕಂಡು ಬರುತ್ತದೆ ಎಂದರೆ ನಿಜಕ್ಕೂ ಸಂತಸವಾಗುತ್ತದೆ.
  • ನೋಡಿ ಇಷ್ಟೆಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳನ್ನು ಒಳಗೊಂಡಿರುವ ಈ ಸೀಬೆ ಹಣ್ಣನ್ನು ತಿನ್ನುವಾಗ ಅದರ ಸಿಪ್ಪೆಯನ್ನು ತೆಗೆದು ಬಿಸಾಡಬೇಡಿ! ಅದರ ಬದಲು, ಸೀಬೆ ಹಣ್ಣು ತಿನ್ನುವ ಮೊದಲು, ಈ ಹಣ್ಣನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಆ ಬಳಿಕ ಸಿಪ್ಪೆ ಸಮೇತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!

Guava Fruits And Its Peel Fights Against Bad Cholesterol And Control Your Diabetes.