ಸ್ವೀಟ್ಸ್ ತಿಂದು ನೀರು ಕುಡಿಯಬೇಡಿ! ಇಲ್ಲಾಂದ್ರೆ ಮಧುಮೇಹ ಬರಬಹುದು!!

04-10-22 08:32 pm       Source: Vijayakarnataka   ಡಾಕ್ಟರ್ಸ್ ನೋಟ್

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಸಿಹಿ ತಿಂದ ಬಳಿಕ ಸ್ವೀಟ್ಸ್ ತಿನ್ನಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಸಿಹಿ ತಿಂದ ಕೂಡಲೇ ನೀರು ಕುಡಿದರೆ, ರಕ್ತದಲ್ಲಿ ಸಕ್ಕರೆ ಅಂಶ ಒಮ್ಮಿಂದ ಲೊಮ್ಮೆಲೆ ಏರಿಕೆ ಆಗುವ ಸಾಧ್ಯತೆ ಇರುತ್ತದೆಯಂತೆ, ಜೊತೆಗೆ ಮಧುಮೇಹ ಕೂಡ ಬರಬಹುದಂತೆ!

ಸಿಹಿ ಪದಾರ್ಥ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ... ಅದರಲ್ಲೂ ಸ್ವಲ್ಪ ತುಪ್ಪ ಹಾಕಿ ಮಾಡಿದ ಸಿಹಿ ತಿಂಡಿ ಗಳಂತೂ ಎಲ್ಲರನ್ನೂ ಕೂಡ ಕೈ ಕೈಬೀಸಿ ಕರೆಯುತ್ತದೆ. ಕೇವಲ ಹತ್ತರಲ್ಲಿ ಒಬ್ಬರು ಮಾತ್ರ ಸಿಹಿಯಿಂದ ದೂರ ಉಳಿಯುತ್ತಾರೆ!

ಅದು ಬಿಟ್ಟರೆ ಸಕ್ಕರೆಕಾಯಿಲೆ ಇರುವವರು ಸಿಹಿ ಪದಾರ್ಥ ಗಳಿಂದ ದೂರ ಇರುತ್ತಾರೆ. ಹೇಳಿಕೇಳಿ ಆಯುಧ ಪೂಜೆ ಬಂದು ಬಿಟ್ಟಿದೆ, ಸಿಹಿ ತಿಂಡಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡು! ಆದರೆ ಒಂದು ವಿಚಾರ ನೆನಪಿರಲಿ, ತಪ್ಪಿಯೂ ಕೂಡ ಸಿಹಿತಿಂದ ಕೂಡಲೇ ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಯಾಕೆಂದರೆ ಸಿಹಿತಿಂಡಿ ತಿಂದು ನೀರು ಕುಡಿಯುತ್ತಾ ಬಂದ್ರೆ ಮುಂದಿನ ದಿನಗಳಲ್ಲಿ ಮಧುಮೇಹ ಕಾಯಿಲೆಯ ಎಲ್ಲಾ ಲಕ್ಷಣಗಳು ಕೂಡ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ! ಇದಕ್ಕೆ ಹೇಳುವುದು ದಾರಿಯಲ್ಲಿ ಹೋಗುತ್ತಿರಬೇಕಾದರೆ, ರಸ್ತೆಯ ಪಕ್ಕದ ಕಲ್ಲನ್ನು ಮೈಮೇಲೆ ಎಳೆದು ಕೊಂಡಂತೆ! ಮುಂದೆ ಓದಿ...

ಸಿಹಿ ಪದಾರ್ಥಗಳನ್ನು ತಿಂದ ಕೂಡಲೇ ನೀರು ಕುಡಿಯಬಾರದು!

Wonder Water: Here Are The Key Benefits Of Drinking Water | Femina.in

  • ಸಾಮಾನ್ಯವಾಗಿ ಬೇಕರಿಗಳಲ್ಲಿ ಅಥವಾ ಹಬ್ಬದ ಸಮಯದಲ್ಲಿ ಅಲ್ಲಲ್ಲಿ ಟೆಂಟ್ ಹಾಕಿ ಮಾರುವ ಸಿಹಿ ಪದಾರ್ಥಗಳಿಗೆ, ಈಗ ಎಲ್ಲಿಲ್ಲದ ಬೇಡಿಕೆ! ತಮ್ಮ ಲಾಭಗೋಸ್ಕರ ಹೆಚ್ಚಿನವರು, ಕೃತಕ ಸಿಹಿ ಅಂಶಗಳನ್ನು ಹಾಕಿ, ಸಿಹಿ ತಿಂಡಿಗಳನ್ನು ರೆಡಿ ಮಾಡಿ, ಮಾರುತ್ತಿರುತ್ತಾರೆ.
  • ಹೀಗಾಗಿ ಈಗಾಗಲೇ ಮಧುಮೇಹ ಕಾಯಿಲೆ ಇರುವವರು ಆದಷ್ಟು ಇಂತಹ ಸಿಹಿ ತಿಂಡಿಗಳಿಂದ ದೂರ ಇರಬೇಕು. ಕೇವಲ ಸಿಹಿತಿಂಡಿಗಳಿಂದ ಮಾತ್ರವಲ್ಲ, ಸಿಹಿ ಅಂಶ ಇರುವ ಎಲ್ಲಾ ತಿಂಡಿಗಳಿಂದ ಕೂಡ ದೂರ ಇರಬೇಕು.
  • ಅದರಲ್ಲೂ ಪ್ರಮುಖವಾಗಿ ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ, ಯಾವುದೇ ಸಿಹಿ ಪದಾರ್ಥಗಳನ್ನು ತಿಂದ ನಂತರ, ಕೂಡಲೇ ನೀರು ಕುಡಿದು ಬಿಟ್ಟರೆ, ಅವರ ರಕ್ತದಲ್ಲಿ ಇದ್ದಕ್ಕಿದ್ದಂತೆ ಸಕ್ಕರೆ ಮಟ್ಟ, ಒಮ್ಮಿಂದಲೊಮ್ಮೆಲೆ ಹೆಚ್ಚಾಗಿ, ಈ ಕಾಯಿಲೆ ಕೈಮೀರಿ ಹೋಗುವ ಸಾಧ್ಯತೆ ಇರುತ್ತದೆ.

ಯಾವುದೇ ಕಾರಣಕ್ಕೂ ಕೂಡ ಸಿಹಿ ತಿಂದ ಕೂಡಲೇ ನೀರು ಕುಡಿಯಬಾರದು!

How to stop sugar cravings instantly? | Sweet tooth reasons & Simple tricks  - friendlyyours

  • ಈ ಮಾತು ಕೇವಲ ಸಕ್ಕರೆ ಕಾಯಿಲೆ ಇರುವವರಿಗೆ ಮಾತ್ರ ಅನ್ವಯವಾಗುವುದಿಲ್ಲ ಬದಲಿಗೆ ಮಧುಮೇಹ ಸಮಸ್ಯೆ ಇಲ್ಲದವರೂ ಕೂಡ, ಈ ವಿಷ್ಯಗಳು ಗೊತ್ತಿರಬೇಕು.
  • ಅದೇನೆಂದರೆ ಸಿಹಿ ತಿಂದ ಮೇಲೆ ತಕ್ಷಣವೇ ನೀರು ಕುಡಿಯುವುದರಿಂದ, ಆರೋಗ್ಯವಂತ ಮನುಷ್ಯ ನಿಗೂ ಕೂಡ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ! ಹೀಗೆಂದು ನಾವು ಹೇಳುತ್ತಿಲ್ಲ, ಸ್ವತಃ ಸಂಶೋಧನೆಯ ಮೂಲಗಳು ತಮ್ಮ ವರದಿಯಲ್ಲಿ ಎಚ್ಚರಿಸುತ್ತಿದ್ದಾರೆ!

ಮಧುಮೇಹ ಸಮಸ್ಯೆ ಹೊಂದಿದವರಿಗೆ ಆಹಾರಕ್ರಮ ಬಹಳ ಮುಖ್ಯ

Digital Technologies: Creating New Care Modalities for Diabetes Management -

  • ಸಕ್ಕರೆಕಾಯಿಲೆ ಇದೆ ಎಂದು ಗೊತ್ತಾದ ಬಳಿಕ, ಆಹಾರಪದ್ಧತಿಯಲ್ಲಿ ಆದಷ್ಟು ಎಚ್ಚರಿಕೆ ವಹಿಸ ಬೇಕು. ಕೆಲವೊಂದು ಆಹಾರಗಳನ್ನು ಮಿತ ಪ್ರಮಾಣದಲ್ಲಿ ತಿನ್ನಬೇಕು. ಇನ್ನು ಕೆಲವು ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು.
  • ಯಾವುದೇ ಕಾರಣಕ್ಕೂ ಈ ಸಮಯ ದಲ್ಲಿ ಸಿಹಿ ಪದಾರ್ಥಗಳನ್ನು ತಿನ್ನಬಾರದು. ವೈದ್ಯರು ಸೂಚಿಸಿ ರುವ ಸಲಹೆಗಳನ್ನು ಹಾಗೂ ಅವರು ನೀಡಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ನಿಯಮಿತವಾದ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳುವುದರಿಂದ ಮಧುಮೇಹ ಸಮಸ್ಯೆ ಯಿಂದ ತಕ್ಕ ಮಟ್ಟಿಗೆ ಪಾರಾಗಬಹುದು.

ನೆನಪಿಡಿ ಸಕ್ಕರೆಕಾಯಿಲೆ, ಇದ್ದವರು ವೈದ್ಯರ ಮಾತನ್ನು ಮೀರಬಾರದು

ಸಕ್ಕರೆಕಾಯಿಲೆ ಗೊತ್ತಾದ ಬಳಿಕ ಕಟ್ಟುನಿಟ್ಟಿನ ಆಹಾರ ಪದ್ಧತಿಯ ಜೊತೆಗೆ ವೈದ್ಯರು ಕೊಡುವ ಔಷಧಿ ಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದನ್ನು ಮರೆಯಬಾರದು. ಜೊತೆಗೆ ಅವರ ಸಲಹೆಗಳ ಮೇರೆಗೆ ಸಮಯಕ್ಕೆ ಸರಿಯಾಗಿ, ರಕ್ತದಲ್ಲಿ ಸಕ್ಕರೆಯ ಮಟ್ಟ ಎಷ್ಟಿದೆ ಎನ್ನುವುದನ್ನು ಪರೀಕ್ಷೆ ಮಾಡಿ ಕೊಳ್ಳಬೇಕು.

ಕೊನೆಯ ಮಾತು

How Baking Soda Affects People with Type 2 Diabetes

  • ಅನುವಂಶೀಯವಾಗಿ ಮಧುಮೇಹ ಬಂದಿರುತ್ತದೆ! ಕೆಲವರಿಗೆ ಹುಟ್ಟಿದಾಗಿನಿಂದಲೂ ಕೂಡ ಈ ಕಾಯಿಲೆ ಬಂದಿರುತ್ತದೆ. ಅಂದ್ರೆ ಕೆಲವೊಮ್ಮೆ ತಂದೆ-ತಾಯಿಯರಿಗೆ ಈ ಕಾಯಿಲೆ ಇದ್ದರೆ, ಮಕ್ಕಳಿಗೂ ಕೂಡ, ಈ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
  • ಇನ್ನು ಕೆಲವರಿಗೆ ಅರ್ಧ ವಯಸ್ಸಿನ ನಂತರ ಮಧುಮೇಹ ಬರುತ್ತದೆ. ಇದಕ್ಕೆಲ್ಲಾ ಕೆಟ್ಟ ಜೀವನ ಶೈಲಿಯ ಜೊತೆಗೆ ಅನಾರೋಗ್ಯಕಾರಿ ಆಹಾರಪದ್ಧತಿಗಳು ಕಾರಣ ಎಂದು ನೇರವಾಗಿ ಹೇಳ ಬಹುದಾಗಿದೆ.
  • ಆದಷ್ಟು ಈ ಸಮಯದಲ್ಲಿ ಉಪ್ಪಿನಾಂಶ ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳಿಂದ ದೂರ ಇರಬೇಕು.. ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು ಜಾಸ್ತಿ ಸೇವನೆ ಮಾಡಬೇಕು. ಉದಾಹರಣೆಗೆ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರಗಳಿಂದ ದೂರ ಇರಬೇಕು.
  • ರಾತ್ರಿ ಊಟಕ್ಕೆ ಅನ್ನದ ಬದಲು ಚಪಾತಿ ತಿನ್ನಬೇಕು, ಪ್ರೋಟೀನ್ ಅಂಶಗಳು, ನಾರಿನಾಂಶ, ಹೆಚ್ಚಿರುವ ಆಹಾರಗಳು ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಬೇಕು.

What Will Happen If We Drink Water After Eating Sweets These Things You Must Know.