ದೇಹದಲ್ಲಿ ರಕ್ತದ ಕೊರತೆ ಇದೆ, ಎಂದು ವೈದ್ಯರು ಹೇಳಿದರೆ ಈ ಆಹಾರಗಳನ್ನು ತಿನ್ನಿ

06-10-22 08:39 pm       Source: Vijayakarnataka   ಡಾಕ್ಟರ್ಸ್ ನೋಟ್

ಮನುಷ್ಯನಿಗೆ ಕಬ್ಬಿಣದ ಅಂಶದ ಕೊರತೆ ಎದುರಾದರೆ, ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಈ ಸಮಯದಲ್ಲಿ ವೈದ್ಯರ ಸಲಹೆಗಳನ್ನು ಅನುಸರಿಸುವುದರ.

ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಕ್ಕರೆ ಮಾತ್ರ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಒಂದು ವೇಳೆ ಪೌಷ್ಟಿಕ ಸತ್ವಗಳಲ್ಲಿ ಕೊರತೆ ಉಂಟಾದರೆ, ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಇನ್ನಿಲ್ಲದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಉದಾಹರಣೆಗೆ ಹೇಳುವುದಾದರೆ, ಪದೇ ಪದೇ ಸುಸ್ತಾಗುವುದು, ತಲೆಸುತ್ತು ಬರುವುದು, ದೈಹಿಕ ನಿತ್ರಾಣ ಎದುರಾಗುವುದು, ಇವೆಲ್ಲಾವೂ ಕೂಡ ರಕ್ತದಲ್ಲಿ ಕಬ್ಬಿಣಾಂಶ ಕಡಿಮೆಯಾಗಿದೆ ಎನ್ನುವುದರ ಲಕ್ಷಣಗಳು. ಬನ್ನಿ ಇಂದಿನ ಲೇಖನದಲ್ಲಿ ಕಬ್ಬಿಣದ ಅಂಶ ಅಪಾರ ಪ್ರಮಾಣದಲ್ಲಿ ಕಂಡುಬರುವ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದ್ದೇವೆ, ಮುಂದೆ ಓದಿ...

ಅವಲಕ್ಕಿ ಸೇವನೆ ಮಾಡುವುದು

Spicy Poha Salad Recipe: How to Make Spicy Poha Salad Recipe | Homemade  Spicy Poha Salad Recipe

  • ರಕ್ತಹೀನತೆ ಸಮಸ್ಯೆ ಇದೆ ಎಂದ ವೈದ್ಯರು ಹೇಳಿದ ಬಳಿಕ, ಇವರು ನೀಡಿರುವ ಔಷಧಿಗಳನ್ನು ಸರಿಯಾಗಿ ಸೇವನೆ ಮಾಡುವುದರ ಜೊತೆಗೆ ಕಬ್ಬಿಣದ ಅಂಶ ಒಳಗೊಂಡ ಆಹಾರ ಪದಾರ್ಥ ಗಳನ್ನು ಸೇವನೆ ಮಾಡುವ ಕಡೆಗೆ ಹೆಚ್ಚು ಒತ್ತು ನೀಡಬೇಕು.
  • ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ನೋಡುವುದಾದರೆ, ಅವಲಕ್ಕಿ ಬಹಳ ಪ್ರಯೋಜನಕಾರಿ ಎಂಬ ಹೆಸರು ಪಡೆದುಕೊಂಡಿದೆ. ಹೌದು, ಅವಲಕ್ಕಿಯಲ್ಲಿ ಕಬ್ಬಿಣಾಂಶದ ಪ್ರಮಾಣ ಹೆಚ್ಚಿನ ಪ್ರಮಾಣ ಕಂಡು ಬರುತ್ತದೆ. ಹೀಗಾಗಿ ಅವಲಕ್ಕಿಯನ್ನು ನೆನೆಸಿ ತಿನ್ನುವುದು, ಒಗ್ಗರಣೆ ಹಾಕಿಕೊಂಡು ತಿನ್ನುವ ಅಭ್ಯಾಸ ಮಾಡಿಕೊಂಡರೆ, ರಕ್ತಹೀನತೆ ಸಮಸ್ಯೆಯಿಂದ ದೂರ ಇರಬಹುದು.

ಖರ್ಜೂರ

The health benefits of dates | BBC Good Food

ನೈಸರ್ಗಿಕ ಸಿಹಿ ಅಂಶ ಹೊಂದಿರುವ ಖರ್ಜೂರವನ್ನು, ಪ್ರತಿದಿನ ಎರಡು- ಮೂರು ಸೇವಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಪ್ರಮುಖವಾಗಿ ಖರ್ಜೂರಗಳಲ್ಲಿ ಪೊಟ್ಯಾಸಿಯಮ್, ಫಾಸ್ಫರಸ್, ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಂ ಹಾಗೂ ಕಬ್ಬಿಣಾಂಶ ಸಿಗುವುದರಿಂದ, ರಕ್ತಹೀನತೆಯಂತಹ ಸಮಸ್ಯೆಯಿಂದ ನಮ್ಮನ್ನು ದೂರ ಇರಿಸುತ್ತದೆ.

ಕಪ್ಪು ಎಳ್ಳು ಸೇವನೆ ಮಾಡುವುದು

Seed of the month: Sesame seeds - Harvard Health

  • ಎಳ್ಳು ಕೇವಲ ಸಂಕ್ರಾಂತಿ ಹಬ್ಬಕ್ಕೆ ಮಾತ್ರ ಸೀಮಿತ ಎಂದು ಅಂದುಕೊಳ್ಳಬೇಡಿ.. ಇದರಲ್ಲಿರುವ ಆರೋಗ್ಯಕಾರಿ ಗುಣಲಕ್ಷಣಗಳು, ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
  • ಪ್ರಮುಖವಾಗಿ ಇವುಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಸಿಗುವುದರಿಂದ,  ರಕ್ತಹೀನತೆ ಸಮಸ್ಯೆ ಇರುವವರು ಆದಷ್ಟು ಈ ಬೀಜಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು..ಆರೋಗ್ಯ ತಜ್ಞರ ಹೇಳುವ ಪ್ರಕಾರ 100 ಮಿಲಿಗ್ರಾಂ ಎಳ್ಳು ಬೀಜಗಳಲ್ಲಿ ಅರ್ಧ ಕ್ಕರ್ಧ ಕಬ್ಬಿಣದಂಶ ಸಿಗುತ್ತದೆ.

ಸೋಯಾಬೀನ್‌

Is cutting soya from your diet the secret to good health? | The Independent  | The Independent

ಸೋಯಾಬೀನ್‌ನಲ್ಲಿ ಕೂಡ ಅಷ್ಟೇ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುತ್ತದೆ. ಇದರಲ್ಲಿ ಕೇವಲ ಕಬ್ಬಿಣದ ಅಂಶದ ಪ್ರಮಾಣ ಮಾತ್ರವಲ್ಲದೆ, ಆರೋಗ್ಯಕ್ಕೆ ಬೇಕಾಗುವ ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೆಲೆನಿಯಮ್, ಸತು, ತಾಮ್ರದ ಅಂಶ ಹಾಗೂ ಇನ್ನಿತರ ಆರೋಗ್ಯಕಾರಿ ಖನಿಜಾಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ. ರಕ್ತಹೀನತೆ ಸಮಸ್ಯೆ ದೂರವಾಗುವುದರ ಜೊತೆಗೆ ಹೃದಯ ಹಾಗೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ.

ಕುಂಬಳಕಾಯಿ ಬೀಜಗಳು

Here's why you should add pumpkin seeds to your diet | Lifestyle News,The  Indian Express

ನೋಡಲು ಸಣ್ಣದಾಗಿರುವ ಈ ಕುಂಬಳಕಾಯಿ ಬೀಜಗಳು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬಿಣಾಂಶ ಮೆಗ್ನೀಸಿಯಂ, ತಾಮ್ರ, ಪ್ರೋಟೀನ್ ಮತ್ತು ಸತುವುಗಳಂತಹ ವಿವಿಧ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ಇಂತಹ ಬೀಜಗಳನ್ನು ಮಿತಪ್ರಮಾಣದಲ್ಲಿ ನಿಯಮಿತವಾಗಿ ಸೇವನೆ ಮಾಡಿದರೆ, ರಕ್ತಹೀನತೆ ಸಮಸ್ಯೆಗಳಿಂದ ದೂರ ಇರಬಹುದು.

List Of The Healthy Foods That Are Rich In Iron.