ಜೋಳದಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ, ಆರೋಗ್ಯಕ್ಕೆ ಇದು ಯಾಕೆ ಒಳ್ಳೆಯದು

10-10-22 08:00 pm       Source: Vijayakarnataka   ಡಾಕ್ಟರ್ಸ್ ನೋಟ್

ಜೋಳ ಆರೋಗ್ಯಕ್ಕೆ ಉತ್ತಮವಾದ ಧಾನ್ಯವಾಗಿದೆ. ಜೋಳ ಸೇವಿಸುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳಿವೆ ಎಂದು ಪೌಷ್ಟಿಕತಜ್ಞೆ ರುಜುತಾ ದಿವೇಕರ್ ತಿಳಿಸಿದ್ದಾರೆ.

ಮೆಕ್ಕೆಜೋಳವು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಕೆಲವರು ಇದನ್ನು ಹಾಗೆಯೇ ಸುಟ್ಟು, ಉಪ್ಪು, ಖಾರ ಹಾಕಿ ತಿಂದರೆ ಇನ್ನೂ ಕೆಲವರು ಮೆಕ್ಕೆಜೋಳವನ್ನು ಹುಡಿ ಮಾಡಿ ರೊಟ್ಟಿ ತಟ್ಟುತ್ತಾರೆ.ಮೆಕ್ಕೆಜೋಳವು ಮಳೆಯಲ್ಲಿ ನಿಮ್ಮನ್ನು ಬೆಚ್ಚಗಿಡುವುದಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಯೋಜನಗಳನ್ನು ತರುತ್ತದೆ ಎಂಬುದು ನಿಮಗೆ ತಿಳಿದಿದೆಯೇ.

ಮೆಕ್ಕೆ ಜೋಳವು ಪ್ರಪಂಚದ ಅತ್ಯಂತ ಜನಪ್ರಿಯ ಧಾನ್ಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ನಾವು ಹೆಚ್ಚಾಗಿ ನೋಡುವುದು ಹಳದಿ ಹಾಗೂ ಬಿಳಿ ಬಣ್ಣಗಳಲ್ಲಿನ ಮೆಕ್ಕೆಜೋಳ. ಮೆಕ್ಕೆಜೋಳವು ಅನೇಕ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ, ಇದರಿಂದಾಗಿ ಪೌಷ್ಟಿಕಾಂಶ ತಜ್ಞರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ.

​ಪೌಷ್ಟಿಕತಜ್ಞೆ ಏನಂತಾರೆ?

9 Proven Benefits of Corn | Organic Facts

ಇತ್ತೀಚೆಗೆ, ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಮೆಕ್ಕೆಜೋಳವನ್ನು ಸೂಪರ್‌ಫುಡ್ ಎಂದು ಕರೆದಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಜೋಳದ ಸೇವನೆಯ ವಿಧಾನದೊಂದಿಗೆ ಆರೋಗ್ಯ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ.

ಕಾರ್ನ್ ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮುಖ ಮತ್ತು ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಕಾರ್ನ್ ಯಾಕೆ ಸೂಪರ್ಫುಡ್ ಆಗಿದೆ?

15 Health Benefits Of Eating Sweet Corn - Boldsky.com

ಕಾರ್ನ್ ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಜೊತೆಗೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದರ ಸಹಾಯದಿಂದ ದೇಹಕ್ಕೆ ವಿವಿಧ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ.

ಇದರೊಂದಿಗೆ, ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಲ್ಲಿ ಅಗತ್ಯ ಸಹಾಯವನ್ನು ಒದಗಿಸಲು ಸಹ ಇದು ಕಾರ್ಯನಿರ್ವಹಿಸುತ್ತದೆ. ಜೋಳವನ್ನು ಸೂಪರ್‌ಫುಡ್ ಎಂದು ಕರೆಯಲು ಇದೇ ಕಾರಣ.

ಯಾವ ರೋಗಗಳಿಗೆ ಜೋಳವು ಪ್ರಯೋಜನಕಾರಿಯಾಗಿದೆ?

Shape-shifting red blood cells respond to shear forces – Physics World

  • ಮಧುಮೇಹವನ್ನು ನಿಯಂತ್ರಿಸುತ್ತದೆ
  • ಕಣ್ಣುಗಳಿಗೆ ಪ್ರಯೋಜನಕಾರಿ
  • ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ
  • ಕಬ್ಬಿಣದ ಕೊರತೆಯನ್ನುನಿವಾರಿಸುತ್ತದೆ
  • ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ
  • ಹೃದಯದ ಆರೋಗ್ಯಕ್ಕೆ ಉಪಯುಕ್ತ
  • ಜೀರ್ಣಕ್ರಿಯೆಯನ್ನು ನಿರ್ವಹಿಸುತ್ತದೆ
  • ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ
  • ಮೂಳೆಗಳನ್ನು ಗಟ್ಟಿಗೊಳಿಸುತ್ತದೆ
  • ಆಲ್ಝೈಮರ್‌ನಲ್ಲಿ ಸಹಾಯಕವಾಗಿದೆ

ಸೆಲೆಬ್ರಿಟಿ ಪೌಷ್ಟಿಕತಜ್ಞೆ ಕಾರ್ನ್ ತಿನ್ನುವಂತೆ ಸಲಹೆ ನಿಡಿದ್ದಾರೆ

Is Corn a Vegetable? 10 Health Benefits, 3 Types & 6 Risks

ಜೋಳದ ಕಾಳುಗಳು ವಿಟಮಿನ್ ಬಿ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ನಿಮ್ಮ ಕೂದಲನ್ನು ಸುಧಾರಿಸುತ್ತದೆ ಮತ್ತು ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಇದರಲ್ಲಿರುವ ನಾರಿನ ಸಹಾಯದಿಂದ ನಿಮಗೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ. ಇದಲ್ಲದೆ, ಈ ಧಾನ್ಯವನ್ನು ಸೇವಿಸುವುದರಿಂದ ನಿಮ್ಮ ರುಚಿಯನ್ನು ಹಾಳು ಮಾಡದೆ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.

ಮೆಕ್ಕೆಜೋಳವನ್ನು ಹೇಗೆ ಸೇವಿಸಬೇಕು?

corn health benefits, ಜೋಳದಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ, ಆರೋಗ್ಯಕ್ಕೆ ಇದು ಯಾಕೆ  ಒಳ್ಳೆಯದು - health benefits of eating corn according to nutritionist -  Vijaya Karnataka

ನಿಮ್ಮ ಅನುಕೂಲಕ್ಕೆ ಮತ್ತು ಆಯ್ಕೆಗೆ ಅನುಗುಣವಾಗಿ ಜೋಳವನ್ನು ಹುರಿದು, ಕುದಿಸಿ ತಿನ್ನಬಹುದು ಎನ್ನುತ್ತಾರೆ ಪೌಷ್ಟಿಕತಜ್ಞರು. ಇದಲ್ಲದೆ, ಅದರ ಹಿಟ್ಟಿನಿಂದ ಮಾಡಿದ ಬ್ರೆಡ್ ಅಥವಾ ರೊಟ್ಟಿಯನ್ನು ಸೇವಿಸಬಹುದು.

ಯಾವ ಜೋಳ ಆರೋಗ್ಯಕರ

Beyond Makki ki Roti: 3 Delicious Maize Flour Recipes - NDTV Food

ನೀವು ಅಮೇರಿಕನ್ ಕಾರ್ನ್, ಪಾಪ್ ಕಾರ್ನ್‌ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಹುಡುಕುತ್ತಿದ್ದರೆ, ಯಾವ ಕಾರ್ನ್ ಆರೋಗ್ಯಕರ ಎಂದು ತಿಳಿಯಿರಿ. ಅಮೇರಿಕನ್ ಕಾರ್ನ್, ಪಾಪ್ ಕಾರ್ನ್ ಮತ್ತು ಇತರ ಕಾರ್ನ್ ಬದಲಿಗಳಿಗಿಂತ ದೇಸಿ ಕಾರ್ನ್ ಅನ್ನು ತಿನ್ನುವುದು ಆರೋಗ್ಯಕರ ಎಂದು ಪೌಷ್ಟಿಕತಜ್ಞೆ ರುಜುಟಾ ಸಲಹೆ ನೀಡುತ್ತಾರೆ.

Health Benefits Of Eating Corn According To Nutritionist.