ಯಾರಿಗೆಲ್ಲಾ ಬಿಪಿ-ಹೃದಯದ ಸಮಸ್ಯೆ ಇದೆಯೋ, ಅವರು ಬೀಟ್ರೂಟ್ ತಿನ್ನಲೇಬೇಕು...

11-10-22 08:53 pm       Source: Vijayakarnataka   ಡಾಕ್ಟರ್ಸ್ ನೋಟ್

ಹೆಚ್ಚು ಕಡಿಮೆ ನೆಮ್ಮದಿ ಇಲ್ಲದ ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಿರುವ ಎಲ್ಲರೂ ಸಹ ಬೀಟ್ರೂಟ್‌ ಎನ್ನಬಹುದು. ಏಕೆಂದರೆ ಇದರಿಂದ ಬಂದಿ ರುವ ತೊಂದರೆ ದೂರವಾಗುತ್ತದೆ ಜೊತೆಗೆ ಹೆಚ್ಚುವರಿ ಆರೋಗ್ಯ ಲಾಭಗಳು ಕೂಡ ಸಿಗುತ್ತವೆ.

ಕೆಂಪಗಿನ ಬೀಟ್ರೂಟ್ ಒಂದು ಆರೋಗ್ಯಕರವಾದ ತರಕಾರಿ. ಇದು ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡ ಮತ್ತು ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಪ್ರಮಾಣ ಮತ್ತು ಖನಿಜಾಂಶ ಗಳ ಸಹಿತ, ಹಲವಾರು ಬಗೆಯ ವಿಟಮಿನ್ಸ್ ಗಳು, ಪೊಟಾಷಿಯಂ, ನಾರಿನಾಂಶ ಕೂಡ ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ, ಇದೊಂದು ಆರೋಗ್ಯ ವೃದ್ಧಿಸುವ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ!

ಇನ್ನು ಈ ಒಂದೊಂದು ಆರೋಗ್ಯ ಪ್ರಯೋಜನಗಳನ್ನು ನೋಡುತ್ತಾ ಹೋದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ, ಜೊತೆಗೆ ತುಂಬಾನೇ ಖುಷಿನೂ ಆಗುತ್ತೆ! ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು ಕೂಡ ಈ ತರಕಾರಿಯಲ್ಲಿ ಕಂಡು ಬರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಬೀಟ್ರೂಟ್ ಪ್ರಯೋಜನಗಳ ಕುರಿತಾಗಿ ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ ಅವರು ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಈ ತರಕಾರಿಯ ಬಗ್ಗೆ ಕೆಲವೊಂದು ಮಾಹಿತಿ ಯನ್ನು ಹಂಚಿಕೊಂಡಿದ್ದಾರೆ ಮುಂದೆ ಓದಿ...

ಬಿಪಿ ಕಡಿಮೆಯಾಗುತ್ತದೆ

High Blood Pressure Symptoms: Emergency Symptoms, Treatments, and More

  • ಹೈ ಬಿಪಿ ಇರುವ ಜನರು ಬೀಟ್ರೂಟ್ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ನೈಸರ್ಗಿಕವಾಗಿ ನೈಟ್ರೇಟ್ ಇರುತ್ತದೆ ಅದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ.
  • ಇದರಿಂದ ರಕ್ತ ನಾಳಗಳಲ್ಲಿ ಸರಾಗವಾಗಿ ರಕ್ತ ಸಂಚಾರ ಆಗುವುದು ಮಾತ್ರವಲ್ಲದೆ ಒಟ್ಟಾರೆ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ಹೀಗಾಗಿ ಇದರ ಸಂಪೂರ್ಣ ಲಾಭ ಪಡೆಯಬೇಕೆಂದ್ರೆ, ದಿನಾ ಒಂದು ಲೋಟ ಬೀಟ್‌ರೂಟ್‌ ಜ್ಯೂಸ್‌ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಉರಿಯೂತ ಕಡಿಮೆಯಾಗುತ್ತದೆ

Mamta's Kitchen » How to Cook Beetroot?

ಬೀಟ್ರೂಟ್ ತನ್ನಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಉರಿಯೂತದ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಇದು ಬಲು ಲಾಭಕಾರಿ. ಬೀಟಾಲೈನ್ಸ್ ಎನ್ನುವ ಆಂಟಿ ಇನ್ಫಾ ಮೇಟರಿ ಪ್ರಮಾಣ ಇದರಲ್ಲಿ ಹೇರಳವಾಗಿರುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ.

ಮಧುಮೇಹಿ ಸ್ನೇಹಿ

9 Healthy Habits to Control Your Diabetes - Blogs - Makati Medical Center

  • ಹೌದು ಬೀಟ್ರೂಟ್ ತನ್ನಲ್ಲಿ ಆಲ್ಫಾ ಲಿಪೋಇಕ್ ಪ್ರಮಾಣ ಹೊಂದಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗುತ್ತದೆ.
  • ಪ್ರಮುಖವಾಗಿ ಈ ತರಕಾರಿಯಲ್ಲಿ ನಿಸರ್ಗದತ್ತವಾದ ಸಕ್ಕರೆ ಅಂಶದ ಜೊತೆಗೆ, ಅ‍ಧಿಕ ಪ್ರಮಾಣದಲ್ಲಿ ನಾರಿನಾಂಶ ಕೂಡ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ಇನ್ನು ಇವೆಲ್ಲಾದರ ಜೊತೆಗೆ ಪೊಟಾಶಿ ಯಂ ಹಾಗೂ ಫೋಲೆಟ್ ಎನ್ನುವ ಎರಡು ಸಂಯುಕ್ತ ಅಂಶಗಳು ಸಹ ಇರುವುದ ರಿಂದ, ಈ ಕಾಯಿಲೆ ಯನ್ನು ಕಂಟ್ರೋಲ್ ನಲ್ಲಿಡಲು ನೆರವಾಗುತ್ತದೆ.

ಜೀರ್ಣಶಕ್ತಿ ವೃದ್ಧಿಸುತ್ತದೆ

ಬೀಟ್ರೂಟ್ ನಲ್ಲಿ ನಾರಿನ ಪ್ರಮಾಣ ತುಂಬಾ ಇದೆ. ಹಾಗಾಗಿ ಇದು ಕರುಳಿನ ಆರೋಗ್ಯದಲ್ಲಿ ಚೇತರಿಕೆ ಯನ್ನು ತಂದುಕೊಡುತ್ತದೆ. ಕರುಳಿನ ಭಾಗದ ಬ್ಯಾಕ್ಟೀರಿಯಾ ಇಲ್ಲವಾಗಿ ಆರೋಗ್ಯಕರವಾದ ಜೀರ್ಣ ಶಕ್ತಿಯನ್ನು ಪಡೆಯುವಂತೆಮಾಡುತ್ತದೆ. ಒಟ್ಟಾರೆ ಬೀಟ್ರೂಟ್ ಸೇವನೆಯಿಂದ ನಿಮ್ಮ ಆರೋಗ್ಯಕರ ವಾದ ಜೀವನ ನಿಮಗೆ ವಾಪಸ್ ಸಿಗುತ್ತದೆ.

As Per The Nutritionist Expert People Who Suffering From These Diseases Must Eat Beetroot .