ಲಿವರ್‌ನ ಆರೋಗ್ಯ ಕಾಪಾಡುವ ಅಲ್ಟ್ರಾ-ಪವರ್‌ಫುಲ್ ಪಾನೀಯಗಳಿವು!

12-10-22 07:57 pm       Source: Vijayakarnataka   ಡಾಕ್ಟರ್ಸ್ ನೋಟ್

ದಿನದ 24 ಗಂಟೆಗಳು ದಣಿ ವಿಲ್ಲದೆ ದುಡಿಯುವ ಪ್ರಮುಖ ಅಂಗಾಂಗಳಲ್ಲಿ ಒಂದಾದ, ನಮ್ಮ ಲಿವರ್ ಅಥವಾ ಯಾಕೃತ್‍ನ ಆರೋಗ್ಯವನ್ನು ಕಾಪಾ ಡಲು ಪ್ರತಿದಿನ ಬೀಟ್ ರೂಟ್ ಜ್ಯೂಸ್.

ನಾವೆಲ್ಲಾ ಆರೋಗ್ಯದ ವಿಚಾರದಲ್ಲಿ ಎಷ್ಟು ಕಾಳಜಿ ಹಾಗೂ ಜಾಗರೂಕತೆ ವಹಿಸುತ್ತೇವೆಯೋ ಅಷ್ಟು ಒಳ್ಳೆಯದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು ಒತ್ತಡದ ಜೀವನಶೈಲಿಯಿಂದಾಗಿ, ಆರೋಗ್ಯದ ಬಗ್ಗೆ ನಿರ್ಲಕ್ಷ ತೋರಿ ಕೊನೆಗೆ ಸಂಪೂರ್ಣವಾಗಿ ಆರೋಗ್ಯ ಹದಗೆಡುವ ಹಂತಕ್ಕೆ ಬಂದಾಗ ಎದ್ದು ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರೆ! ಆದರೆ ಮೊದಲೇ ಮುನ್ನೆಚ್ಚರಿಕೆಗಳನ್ನು ವಹಿಸಿ ಕೊಂಡು, ನಮ್ಮ ಆರೋಗ್ಯದ ರಕ್ಷಣೆಯನ್ನು ನಾವೇ ಸ್ವತಃ ಮಾಡಿಕೊಂಡರೆ, ದುಡ್ಡು ಉಳಿಯುವುದು, ನೆಮ್ಮದಿಯ ಜೀವನ ನಮ್ಮದಾಗುತ್ತದೆ

ಬನ್ನಿ ಇಂದಿನ ಲೇಖನದಲ್ಲಿ ದಿನದ 24 ಗಂಟೆಗಳು ಕೂಡ ದಣಿವಿಲ್ಲದೆ ದುಡಿದು, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವ, ಪ್ರಮುಖ ಅಂಗವಾದ ಲಿವರ್‌ನ ಆರೋಗ್ಯವನ್ನು ಕಾಪಾಡಲು ಯಾವೆಲ್ಲಾ ಪಾನೀಯಗಳು ನೆರವಿಗೆ ಬರುತ್ತದೆ ಎನ್ನುವುದನ್ನು ನೋಡೋಣ ಬನ್ನಿ...

ಬೀಟ್ರೂಟ್ ಜ್ಯೂಸ್

Bedre utholdenhet med rødbeter? - Helsemagasinet vitenskap og fornuft

  • ಬೀಟ್‌ರೂಟ್‌ನಲ್ಲಿ ಹಲವಾರು ಬಗೆಯ ಪೋಷಕಾಂಶಗಳಿರುವುದರಿಂದ, ಇದೊಂದು ಆರೋಗ್ಯಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಮುಖವಾಗಿ ಬೀಟ್‌ರೂಟ್‌ನಲ್ಲಿ ಸಿಗುವ ಬೀಟೈನ್‌ ಎನ್ನುವ ಪೌಷ್ಟಿಕಾಂಶ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ವಿಷಕಾರಿ ಅಂಶವನ್ನು ಕಡಿಮೆ ಮಾಡುವುದು.
  • ಇದರಿಂದ ಲಿವರ್ ಭಾಗದ ಕಾರ್ಯ ಚಟುವಟಿಕೆ ಅಚ್ಚಕಟ್ಟಾಗಿ ಕಾರ್ಯ ನಿರ್ವಹಿಸಲು ಪರೋಕ್ಷ ವಾಗಿ ನೆರವಿಗೆ ನಿಲ್ಲುತ್ತದೆ. ಹೀಗಾಗಿ ಈ ತರಕಾರಿಯ ಸಂಪೂರ್ಣ ಲಾಭ ಪಡೆಯ ಬೇಕೆಂದರೆ, ಒಂದು ಮಧ್ಯಮ ಗಾತ್ರದ ಬೀಟ್ರೂಟ್ ಅನ್ನು, ಸಣ್ಣಗೆ ಹೋಳುಗಳಾಗಿ ಮಾಡಿ, ಮಿಕ್ಸಿಯ ಜಾರ್‌ಗೆ ಹಾಕಿ, ಇದಕ್ಕೆ ಒಂದು ಲೋಟ ನೀರು ಹಾಕಿ, ಜ್ಯೂಸ್ ರೀತಿ ಮಾಡಿಕೊಂಡು ಕುಡಿದರೆ, ದೇಹದ ಲಿವರ್‌ನ ಆರೋಗ್ಯಕ್ಕೆಬಹಳ ಒಳ್ಳೆಯದು.

ಓಂ ಕಾಳುಗಳು ಮತ್ತು ಸೋಂಪು ಕಾಳುಗಳ ಪಾನೀಯ

ಎಣ್ಣೆಯುಕ್ತ ಆಹಾರ ತಿಂದ ನಂತರ ಈ 5 ಕೆಲಸಗಳನ್ನು ಮಾಡಿ; ಅನಾರೋಗ್ಯಕ್ಕೂ ಮುನ್ನ ಇರಲಿ  ಎಚ್ಚರ | After taking oily food You must fallow these five steps | TV9  Kannada

ಓಂಕಾಳು ಹಾಗೂ ಸೋಂಪುಕಾಳು, ಇವೆರಡು ಶಕ್ತಿಶಾಲಿ ಮಸಾಲೆ ಪದಾರ್ಥಗಳು ಅಜೀರ್ಣ ಸಮಸ್ಯೆಯನ್ನು ದೂರ ಮಾಡಿ, ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಆರೋಗ್ಯಕಾರಿ ಮಸಾಲೆ ಪದಾರ್ಥಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಇವೆರಡೂ ಕಾಳುಗಳನ್ನು ಕುದಿಸಿ ಪ್ರತಿದಿನ ಒಂದು ಲೋಟ ಕುಡಿಯುತ್ತಾ ಬರುವುದರಿಂದ, ದೇಹದ ಲಿವರ್‌ನ ಆರೋಗ್ಯವನ್ನು ಕೂಡ ಕಾಪಾಡಿದಂತಾಗುತ್ತದೆ.

ಹೀಗೆ ಮಾಡಿ

Ajwain, ಓಂ ಕಾಳಿನ ಆರೋಗ್ಯವರ್ಧಕ ಗುಣಗಳು ಹಾಗೂ ಅಡುಗೆಮನೆಯ ಉಪಯೋಗಗಳು - the use of  carom seeds in indian cuisine - Vijaya Karnataka

  • ಒಂದು ಲೋಟದಷ್ಟು ನೀರನ್ನು ಸಣ್ಣ ಉರಿಯಲ್ಲಿ ಬಿಸಿಯಾಗಲು ಬಿಡಿ. ಆಮೇಲೆ ಈ ಪಾನೀಯಕ್ಕೆ ಒಂದು ಟೀ ಚಮಚದಷ್ಟು ಓಂಕಾಳುಗಳು ಹಾಗೂ 
    ಸೋಂಪು ಕಾಳುಗಳನ್ನು ಹಾಕಿ, ಸ್ವಲ್ಪ ಹೊತ್ತಿನವರೆಗೆ ಕುದಿಯಲು ಬಿಡಿ.
  • ಆ ಬಳಿಕ ಈ ಪಾನೀಯವನ್ನು ಸೋಸಿಕೊಂಡು, ಒಂದು ಚಮಚ ಜೇನುತುಪ್ಪವನ್ನು ಬೆರೆಸಿ, ಊಟ ಆದ ಅರ್ಧಗಂಟೆ ಬಿಟ್ಟು ಕುಡಿಯುವುದರಿಂದ ಜೀರ್ಣಶಕ್ತಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಆಗುವುದು ಮಾತ್ರವಲ್ಲದೆ, ಲಿವರ್ ಭಾಗದ ಕಾರ್ಯಚಟುವಟಿಕೆ ಉತ್ತಮಗೊಳ್ಳುತ್ತದೆ.

ನಿಂಬೆ ಹಣ್ಣಿನ ಜ್ಯೂಸ್

Mosambi Juice | Aapli Khanawal, Nashik

  • ನಮಗೆಲ್ಲಾ ಗೊತ್ತೇ ಇರುವ ಹಾಗೆ, ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶಗಳನ್ನು ಒಳಗೊಂಡಿರುವ ಈ ಸಿಟ್ರಿಕ್ ಅಂಶದ ಹಣ್ಣುಗಳು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸು ವುದರ ಜೊತೆಗೆ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಹಾಗೂ ಕರುಳಿನ ಭಾಗವನ್ನು ಸ್ವಚ್ಛ ಮಾಡುವಲ್ಲಿ, ನಿಂಬೆ ಹಣ್ಣಿನ ಪಾತ್ರ ತುಂಬಾ ದೊಡ್ಡದು.
  • ಹೀಗಾಗಿ ಈ ಹಣ್ಣಿನ ಸಂಪೂರ್ಣ ಲಾಭ ಪಡೆಯಬೇಕೆಂದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿ ಖಾಲಿ ಹೊಟ್ಟೆಯಲ್ಲಿ, ಪ್ರತಿದಿನ ಕುಡಿಯುತ್ತಾ ಬಂದರೆ, ಲಿವರ್ ಭಾಗದ ಕಾರ್ಯ ಚಟುವಟಿಕೆ ಹೆಚ್ಚಾಗುವುದು ಮಾತ್ರವಲ್ಲದೆ, ಆರೋಗ್ಯ ಕೂಡ ವೃದ್ಧಿಯಾಗುತ್ತದೆ.

ನೆಲ್ಲಿಕಾಯಿ ಜ್ಯೂಸ್

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಆರೋಗ್ಯ ವರ್ಧಿಸಿಕೊಳ್ಳಿ | Benefits of  Indian Gooseberry or Amla– News18 Kannada

  • ವಿಟಮಿನ್ ' ಸಿ ' ಅಂಶ ಯಥೇಚ್ಛವಾಗಿ ಕಂಡು ಬರುವ ಈ ಪುಟ್ಟ ನೆಲ್ಲಿಕಾಯಿಯಲ್ಲಿ, ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಧುಮೇಹ ರಕ್ತದ ಒತ್ತಡ, ದೇಹದ ಲಿವರ್‌ನ ಸಮಸ್ಯೆ ಗಳನ್ನು ದೂರ ಮಾಡುವಲ್ಲಿ, ಈ ಪುಟ್ಟ ಕಾಯಿ ಉಪಯೋಗಕ್ಕೆ ಬರುತ್ತದೆ.
  • ಪ್ರಮುಖವಾಗಿ, ನೆಲ್ಲಿಕಾಯಿಯನ್ನು, ಪ್ರತಿದಿನ ಜ್ಯೂಸ್ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ದೇಹದಿಂದ ವಿಷಕಾರಿ ಅಂಶಗಳು ಬೆವರಿನ ರೂಪದಲ್ಲಿ ಅಥವಾ ಮೂತ್ರ ವಿಸರ್ಜನೆಯ ರೂಪದಲ್ಲಿ ದೂರವಾಗಿ, ದೇಹದ ಲಿವರ್‌ನ ಆರೋಗ್ಯಕ್ಕೆ ಸಮಸ್ಯೆ ಬರದೇ ಇರುವ ಹಾಗೆ ನೋಡಿ ಕೊಳ್ಳುತ್ತದೆ.

These Natural Drinks To Detox And Cleanse Your Liver.