ಹಸಿ ಬಟಾಣಿ ಕಾಳುಗಳಲ್ಲಿ ಏನ್ ಪವರ್ ಗುರು! ಇವು ಸಿಕ್ಕಾಪಟ್ಟೆ ಆರೋಗ್ಯಕಾರಿ...

13-10-22 08:07 pm       Source: Vijayakarnataka   ಡಾಕ್ಟರ್ಸ್ ನೋಟ್

ಒಣಗಿದ ಬಟಾಣಿ ಕಾಳುಗಳಿಗಿಂತ ಹಸಿ ಬಟಾಣಿ ಕಾಳುಗಳಲ್ಲಿ ತುಂಬಾನೇ ಪೌಷ್ಟಿಕ ಸತ್ವಗಳಿಂದ ಕೂಡಿರುತ್ತದೆ ಎಂದು, ಖ್ಯಾತ ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ ಅವರ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ...

ಮನೆಯಲ್ಲಿ ಚಪಾತಿ ಜೊತೆಗೆ ನಂಚಿಕೊಳ್ಳಲು ಆಲೂಗಡ್ಡೆ ಗ್ರೀವಿ ಮಾಡುವಾಗ, ಇದಕ್ಕೆ ಸ್ವಲ್ಪ ಹಸಿ ಬಟಾಣಿ ಹಾಕಿ ತಯಾರು ಮಾಡಿದರೆ, ಆಹಾ, ಏನು ರುಚಿ ಅಂತಿರಾ? ನೆನೆಸಿಕೊಂಡಾಗಲೇ ಬಾಯಲ್ಲಿ ನೀರೂರುತ್ತದೆ! ಮಕ್ಕಳಿಂದ ಹಿಡಿದು, ಹಿರಿಯರವರೆಗೂ, ಇಷ್ಟಪಟ್ಟು ಸವಿಯುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಈ ಹಸಿ ಬಟಾಣಿ ಕಾಳುಗಳು, ಕೇವಲ ಅಡುಗೆಯ ಸ್ವಾದವನ್ನು ಮಾತ್ರ ಹೆಚ್ಚಿಸುವುದಲ್ಲ, ಬದಲಿಗೆ ನಮ್ಮ ಆರೋಗ್ಯಕ್ಕೂ ಕೂಡ ಹಲವಾರು ಲಾಭಗಳನ್ನು ತಂದು ಕೊಡುತ್ತದೆ.

ಪ್ರಮುಖವಾಗಿ ಈ ಕಾಳುಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಂಶ, ನಾರನಾಂಶ, ವಿಟಮಿನ್ ಸಿ, ವಿಟಮಿನ್ ಕೆ, ಪೋಲಿಕ್ ಆಮ್ಲಗಳು, ಫಾಸ್ಫರಸ್, ಮ್ಯಾಂಗನೀಸ್ ತಾಮ್ರ ಹಾಗೂ ಥಯಾ ಮಿನ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಕ್ಕಂತೆ ಆಗುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ ಆರೋಗ್ಯ ತಜ್ಞೆ ಲವ್‍ನೀತ್ ಬಾತ್ರಾ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಹಸಿ ಬಟಾಣಿಯಲ್ಲಿ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಕಂಡು ಬರುತ್ತದೆ ಎನ್ನುವುಯದರ ಬಗ್ಗೆ ಮಾಹಿತಿ ನೀಡಿದ್ದಾರೆ ಮುಂದೆ, ಓದಿ...

ಸಕ್ಕರೆಕಾಯಿಲೆ ಇದ್ದವರಿಗೆ

How Baking Soda Affects People with Type 2 Diabetes

ಮೊದಲೇ ಹೇಳಿದ ಹಾಗೆ, ಹಸಿ ಬಟಾಣಿ ಕಾಳುಗಳಲ್ಲಿ ಪ್ರೋಟೀನ್ ಹಾಗೂ ನಾರಿನಾಂಶ ಅಧಿಕ ಪ್ರಮಾಣ ದಲ್ಲಿ ಸಿಗುವುದರ ಜೊತೆಗೆ ಗ್ಲೈಸೆಮಿಕ್ ಸೂಚ್ಯಾಂಕ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾದಂತೆ ನೋಡಿಕೊಂಡು, ಮಧುಮೇಹ ಕಾಯಿಲೆಯನ್ನುನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ತ್ವಚೆಯ ಆರೈಕೆಗೆ

Pea power: The amazing health benefits of eating protein-rich green peas

  • ಇನ್ನು ತ್ವಚೆಯ ಆರೈಕೆಯ ವಿಚಾರದಲ್ಲಿ ಹೇಳುವುದಾದರೆ, ಹಸಿ ಬಟಾಣಿ ಕಾಳುಗಳು, ತಮ್ಮಲ್ಲಿ ಚರ್ಮ ಸ್ನೇಹಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುತ್ತವೆ, ಎಂದು ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ ಅವರು ಅಭಿಪ್ರಾಯ ಪಡುತ್ತಾರೆ.
  • ಪ್ರಮುಖವಾಗಿ ಇದರಲ್ಲಿ ವಿಟಮಿನ್ b6,ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಹೇರಳವಾಗಿ ಕಂಡು ಬರುವುದರಿಂದ, ಫ್ರೀ ರಾಡಿಕಲ್ ಅಂಶಗಳ ಹಾವಳಿಯಿಂದ ಹಾನಿಯಾಗುವ ಚರ್ಮದ ಜೀವ ಕೋಶಗಳನ್ನು ರಕ್ಷಣೆ ಮಾಡುವುದು ಮಾತ್ರವಲ್ಲದೆ, ಸಣ್ಣ ವಯಸ್ಸಿನಲ್ಲಿ ಚರ್ಮ ಸುಕ್ಕುಗಟ್ಟುವುದು ಅಥವಾ ವಯಸ್ಸಾಗುವಿಕೆ ಲಕ್ಷಣಗಳನ್ನು ದೂರ ಮಾಡುತ್ತದೆ.

ಪ್ರೋಟೀನ್ ಅಂಶಗಳ ಆಗರ

What Happens To Your Body When You Eat Peas — Eat This Not That

  • ಬೇರೆ ಯಾವುದೇ ಬಗೆಯ ಕಾಳುಗಳಿಗೆ ಹೋಲಿಸಿದರೆ, ಈ ಹಸಿ ಬಟಾಣಿ ಕಾಳುಗಳು ವಿಶೇಷ ಸ್ಥಾನದಲ್ಲಿ ನಿಲ್ಲುತ್ತವೆ. ಇದಕ್ಕೆ ಪ್ರಮುಖ ಕಾರಣ, ಇದರಲ್ಲಿ ಸಿಗುವ ಅಧಿಕ ಪ್ರಮಾಣದ ನಾರಿನಾಂಶ ಹಾಗೂ ಪ್ರೋಟೀನ್ ಅಂಶಗಳು.
  • ಹೀಗಾಗಿ ಇವುಗಳನ್ನು ಆಹಾರಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ಹಲವಾರು ಪ್ರಯೋಜನ ಗಳನ್ನು ನಿರೀಕ್ಷಿಸಬಹುದು. ಉದಾಹರಣಗೆ ಮೂಳೆಗಳ ಸದೃಢತೆಗೆ, ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಪ್ರೋಟೀನ್ ಅಂಶ ಹೆಚ್ಚಿರುವ, ಆಹಾರಗಳ ಪಾತ್ರ ಮರೆಯುವ ಹಾಗಿಲ್ಲ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

What are Recommended Cholesterol Levels by Age? | Narayana Health

  • ನಮಗೆಲ್ಲಾ ಗೊತ್ತೇ ಇರುವ ಹಾಗೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳುಹೆಚ್ಚಾಗುತ್ತಾ ಹೋದರೆ, ಹೃದಯದ ಕಾರ್ಯ ಚಟುವಟಿಕೆಗೆ ತೊಂದರೆ ಉಂಟಾಗುತ್ತದೆ. ಕೊನೆಗೆ ಇದ ರಿಂದಾಗಿ ರಕ್ತದ ಸಂಚಾರ ದಲ್ಲಿ ಏರುಪೇರು ಉಂಟಾಗಿ, ಯಾವುದೇ ಸಂದರ್ಭದಲ್ಲಿ ರಕ್ತದೊತ್ತಡ ಸಮಸ್ಯೆ ಎದುರಾಗಿಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು, ಎದುರಾಗುವ ಅಪಾಯ ಹೆಚ್ಚಿರುತ್ತದೆ.
  • ಹೀಗಾಗಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಾಗದಂತೆ ನೋಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ, ಹಸಿ ಬಟಾಣಿ ಕಾಳುಗಳು ತುಂಬಾನೇ ಸಹಾಯಕ್ಕೆ ಬರುತ್ತದೆ. ಇವುಗಳನ್ನು ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಸೇರಿಸಿಕೊಂಡರೆ, ದೇಹದ ರಕ್ತ ಸಂಚಾರದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್ (ಎಲ್ ಡಿ ಎಲ್ ) ಅಂಶ ನಿಯಂತ್ರಣಕ್ಕೆ ಬರುತ್ತದೆ ಹಾಗೂ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ( ಹೆಚ್ ಡಿ ಎಲ್ ) ಅಂಶದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

Health Benefits Of Adding Green Peas In Your Diet As Per The Nutritionist Expert.