ತಜ್ಞರ ಪ್ರಕಾರ ತೊಂಡೆಕಾಯಿ ತಿನ್ನುವುದರಿಂದ, ಇಂತಹ ರೋಗಗಳು ಬರುವುದಿಲ್ಲವಂತೆ!

15-10-22 09:48 pm       Source: Vijayakarnataka   ಡಾಕ್ಟರ್ಸ್ ನೋಟ್

ತುಂಬಾ ಜನರಿಗೆ ತೊಂಡೆಕಾಯಿ ಎಂದರೆ ಆಗುವುದಿಲ್ಲ. ಆದರೆ ಬಲ್ಲವನಿಗೆ ಗೊತ್ತು ತೊಂಡೆಕಾಯಿ ಕರಾಮತ್ತು! ನಿಮಗೆ ಗೊತ್ತಿಲ್ಲದ ಆರೋಗ್ಯದ ರಹಸ್ಯ ತೊಂಡೆಕಾಯಿಯಲ್ಲಿದೆ.

ತೊಂಡೆಕಾಯಿ ಒಂದು ಪೌಷ್ಟಿಕ ಸತ್ವಗಳನ್ನು ಒಳಗೊಂಡ ಆರೋಗ್ಯಕರ ತರಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಅನೇಕ ಉತ್ತಮ ಆರೋಗ್ಯವಂತ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದು. ಲವ್ನೀತ್ ರವರು ಹೇಳುವ ಹಾಗೆ ಇಲ್ಲಿ ಕೆಲವೊಂದನ್ನು ಕೊಡಲಾಗಿದೆ. ನೀವು ಸೇವನೆ ಮಾಡುವ ಇತರ ತರಕಾರಿಗಳ ಜೊತೆ ತೊಂಡೆಕಾಯಿಯನ್ನು ಸಹ ಬಳಸಬಹುದು. ತೊಂಡೆ ಕಾಯಿ ಪಲ್ಯ, ಸಾರು, ಸಾಗು ಎಲ್ಲವೂ ಸಹ ಹೋಟೆಲ್ಗಳಲ್ಲಿ ಫೇಮಸ್. ಮನೆಯಲ್ಲೂ ಸಹ ಮನೆಮಂದಿ ತೊಂಡೆಕಾಯಿ ಲಾಭವನ್ನು ಪಡೆದುಕೊಳ್ಳಬಹುದು.

ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ

remedies for constipation, ಮಲಬದ್ಧತೆ ಸಮಸ್ಯೆ ಇದ್ದವರಿಗೆ ಪವರ್‌ಫುಲ್ ಮನೆಮದ್ದುಗಳು  ಇಲ್ಲಿದೆ ನೋಡಿ - how to get rid from constipation during the winter season -  Vijaya Karnataka

ತುಂಬಾ ಜನರಿಗೆ ಇತರ ಆರೋಗ್ಯ ಸಮಸ್ಯೆಗಳ ತರಹ ಮಲಬದ್ಧತೆ ಕೂಡ ನಿರಂತರವಾಗಿ ಕಾಡುತ್ತಿರುತ್ತದೆ ಮತ್ತು ಇತ್ತೀಚಿನ ದಿನಗಳಲ್ಲಿ ಜನರಿಗೆ ಇದು ಸಾಮಾನ್ಯವಾದ ಆರೋಗ್ಯ ಸಮಸ್ಯೆ ಆಗಿದೆ. ಆದರೆ ಇದಕ್ಕೆ ಪರಿಹಾರವಾಗಿ ತೊಂಡೆಕಾಯಿ ತಿನ್ನುವುದರಿಂದ ಸುಲಭವಾಗಿ ಪರಿಹಾರ ಸಿಗುತ್ತದೆ. ಮಲಬದ್ಧತೆ ಸಮಸ್ಯೆ ಇಲ್ಲವಾಗುತ್ತದೆ.

ವಯಸ್ಸಾಗುವಿಕೆ ಪ್ರಕ್ರಿಯೆ ಇರುವುದಿಲ್ಲ

The #1 Worst Food That Ages Your Skin Faster, Says Science — Eat This Not  That

  • ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುತ್ತದೆ ಮತ್ತು ತ್ವಚೆಯ ಮೇಲೆ ಗೆರೆಗಳು ಮೂಡಿ ಬರಲು ಪ್ರಾರಂಭವಾಗುತ್ತವೆ. ಆದರೆ ಇಂತಹ ಸಂದರ್ಭವನ್ನು ನೈಸರ್ಗಿಕವಾಗಿ ದೂರ ಮಾಡಿಕೊಳ್ಳ ಬಹುದು.
  • ಅದು ಹೇಗೆಂದರೆ ಆಂಟಿಆಕ್ಸಿಡೆಂಟ್ ಅಂಶಗಳು, ವಿಟಮಿನ್ ಎ, ವಿಟಮಿನ್ ಸಿ ಅಧಿಕವಾಗಿರುವ ತೊಂಡೆಕಾಯಿ ಸೇವನೆಯಿಂದ ತ್ವಚೆಯ ಸೌಂದರ್ಯವನ್ನು ನಿರಂತರವಾಗಿ ಹಾಳು ಮಾಡುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಇದರಿಂದ ಕ್ರಮೇಣವಾಗಿ ಮುಖದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ.

ನೈಸರ್ಗಿಕವಾದ ರಕ್ತ ಶುದ್ಧಕ

ಹೌದು ತೊಂಡೆಕಾಯಿ ಕೇವಲ ನಿಮ್ಮ ದೇಹಕ್ಕೆ ಮಾತ್ರವಲ್ಲ ನಿಮ್ಮ ದೇಹದ ಒಳಗೆ ಇರುವ ರಕ್ತ ಕೂಡ ಸ್ವಚ್ಛ ಮಾಡಬಲ್ಲದು. ಇದರಲ್ಲಿ ಅಂತಹ ಗುಣಲಕ್ಷಣಗಳು ಹೇರಳವಾಗಿವೆ. ಇದರಿಂದ ಹಲವಾರು ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮಾರಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.

ಅಜೀರ್ಣತೆ- ಮಲದ್ಧತೆ ಸಮಸ್ಯೆ ಇದ್ದರೆ

Stomach Pain and Diarrhea After a Car Accident - AICA Orthopedics

ಇನ್ನು ಈ ತರಕಾರಿಯಲ್ಲಿ ನೀರಿನಾಂಶ ಹಾಗೂ ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ಮನುಷ್ಯನ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಹೀಗಾಗಿ ಪದೇ ಪದೇ ಅಜೀರ್ಣತೆ ಅಥವಾ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂಡೆಕಾಯಿ ಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

  • ಈ ತರಕಾರಿಯಲ್ಲಿ ಕಂಡು ಬರುವ ನೈಸರ್ಗಿಕ ಆಂಟಿ-ಆಕ್ಸಿಡೆಂಟ್ ಅಂಶಗಳು, ಉರಿಯೂತಕ್ಕೆ ಕಾರಣವಾಗುವ ಫ್ರೀ ರಾಡಿಕಲ್‌ಗಳ ಹಾವಳಿಯ ವಿರುದ್ಧ ಹೋರಾಡಿ, ಕ್ಯಾನ್ಸರ್‌ನಂತಹ ಮಹಾಮಾರಿ ಕಾಯಿಲೆ ಮನುಷ್ಯನ ಹತ್ತಿರಕ್ಕೂ ಕೂಡ ಬರದಂತೆ ನೋಡಿಕೊಳ್ಳುತ್ತದೆ.
  • ಹೀಗಾಗಿ ಈ ತರಕಾರಿಯನ್ನು ವಾರದಲ್ಲಿ ಒಂದೆರಡು ಬಾರಿಯಾದರೂ ಕೂಡ ಪಲ್ಯ, ಸಾರು, ಸಾಗು, ಮಾಡಿಕೊಂಡು ನಿತ್ಯ ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾನೇ ಒಳ್ಳೆಯದು.
  • ಒಟ್ಟಾರೆ ತೊಂಡೆಕಾಯಿ ಸೇವನೆಯಿಂದ ಅನೇಕ ಬಗೆಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಯಾವುದನ್ನು ಸಹ ನಿರ್ಲಕ್ಷ ಮಾಡುವಂತಿಲ್ಲ.

As Per The Nutritionist Expert,Know The Health Benefits Of Ivy Gourd.