ಗ್ಯಾಸ್ರ್ಟ್ರಿಕ್, ಬಿಪಿ ಸಮಸ್ಯೆ ಇದ್ದವರು, ಜಾಸ್ತಿ ಒಣದ್ರಾಕ್ಷಿಯನ್ನು ತಿನ್ನಬಾರದು!

18-10-22 06:53 pm       Source: Vijayakarnataka   ಡಾಕ್ಟರ್ಸ್ ನೋಟ್

ಒಣದ್ರಾಕ್ಷಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಹಾಗಂತ ಬಾಯಿಗೆ ರುಚಿಕರವೆಂದು ಅತಿಯಾಗಿ ತಿಂದರೆ, ಇತರ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಹುಳಿ-ಸಿಹಿ ಮಿಶ್ರಿತ ದ್ರಾಕ್ಷಿ ಹಣ್ಣುಗಳು ಹಸಿಯಾಗಿದ್ದರೂ, ತಿನ್ನಲು ಇಷ್ಟವಾಗುತ್ತದೆ, ಅಂತೆಯೇ ಒಣಗಿದ ಮೇಲೂ ಕೂಡ ಅಷ್ಟೇ ತಿನ್ನಲು ಬಾಯಿಗೆ ತುಂಬಾ ರುಚಿ ಕೊಡುತ್ತವೆ. ಅದರಲ್ಲೂಒಣದ್ರಾಕ್ಷಿಯಂತೂ ಬೆಲೆಯಲ್ಲಿ ದುಬಾರಿಯಾದರೂ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ನಮಗೆಲ್ಲಾ ಗೊತ್ತೇ ಇರುವ ಹಾಗೆ, ಒಣ ಹಣ್ಣುಗಳ ಗುಂಪಿಗೆ ಸೇರ್ಪಡೆ ಆಗುವ ಒಣ ದ್ರಾಕ್ಷಿ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಡ್ರೈ ಫ್ರೂಟ್ಸ್‌ಗಳು ಒದಗಿಸುವ ಆರೋಗ್ಯ ಪ್ರಯೋಜನಗಳನ್ನು ಉಂಟು ಮಾಡುತ್ತವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. 

ಉದಾಹರಣೆಗೆ, ಅಜೀರ್ಣತೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಮಹಿಳೆಯರ ಋತುಸ್ರಾವದ ಸಮಸ್ಯೆಗಳು ಹೀಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಣ ದ್ರಾಕ್ಷಿ ಹಣ್ಣುಗಳು ಉಪಯೋಗಕ್ಕೆ ಬರುತ್ತದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ ಕೂಡ, ಒಂದು ವೇಳೆ ಮಿತಿಮಿರಿ ಈ ಒಣಹಣ್ಣನ್ನು ಸೇವನೆ ಮಾಡಿದರೆ, ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಕಂಡು ಬರುವ ಅಪಾಯ ಹೆಚ್ಚಿರುತ್ತದೆಯಂತೆ...

ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗೆ

  • ಒಣದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಕಂಡು ಬರುವುದರಿಂದ, ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ. ಉದಾಹರಣೆಗೆ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುವುದರ ಜೊತೆಗೆ, ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು.
  • ಅಷ್ಟೇ ಅಲ್ಲದೆ ಹೊಟ್ಟೆ ನೊವು, ಗ್ಯಾಸ್ರ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ, ಇತ್ಯಾದಿ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವುದು. ಇಷ್ಟೆಲ್ಲಾ ಆರೋಗ್ಯಕಾರಿ ಗುಣ ಲಕ್ಷಣಗಳು, ಇದರಲ್ಲಿ ಕಂಡು ಬಂದರೂ ಕೂಡ, ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು, ಇಲ್ಲಾಂದರೆ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅತಿಯಾದ ಆಂಟಿಆಕ್ಸಿಡೆಂಟ್ ಕೂಡ ಒಳ್ಳೆಯದಲ್ಲ

Why You Should Drink Soaked Black Raisin Water On An Empty Stomach - Why  You Should Drink Soaked Black Raisin Water On An Empty Stomach

  • ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ ಹಾಗೂ ಪ್ರಬಲವಾದ ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವುಗಳು ದೇಹಕ್ಕೆ ಫ್ರೀ ರ್ಯಾಡಿಕಲ್ ನಿಂದಾಗಿ ಆಗುವಂತಹ ಆಕ್ಸಿಡೇಟಿವ್ ಹಾನಿಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು, ಅಷ್ಟೇ ಅಲ್ಲದೆ ಮೂತ್ರ ವಿಸರ್ಜನೆಯ ಮೂಲಕದೇಹದ ವಿಷಕಾರಿ ಅಂಶಗಳು ಹೊರಹಾಕುವಲ್ಲಿ ನೆರವಿಗೆ ಬರುತ್ತದೆ.
  • ಇದರಿಂದಾಗಿ ದೇಹದೊಳಗಿನ ಪ್ರಮುಖ ಅಂಗಗಳಾದ ಕಿಡ್ನಿ ಹಾಗೂ ಲಿವರ್‌ನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.ಆದರೆ ನೆನಪಿರಲಿ, ಇದನ್ನು ಮಿತವಾಗಿ ಸೇವಿಸಿ ಇಲ್ಲಾಂದರೆ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅಲರ್ಜಿ ಸಮಸ್ಯೆ ಇದ್ದವರು

11 Things Your Skin Says About Your Health—Does Your Skin Feel Itchy All  The Time?

  • ಸಾಮಾನ್ಯವಾಗಿ ಹೆಚ್ಚಿನವರಿಗೆ, ಕೆಲವೊಂದು ಆಹಾರಗಳನ್ನು, ಸೇವನೆ ಮಾಡುವುದರಿಂದ, ಅಲರ್ಜಿ ಯಂತಹ ಸಮಸ್ಯೆಗಳು ಕಂಡು ಬರುತ್ತದೆ. ಅಲ್ಲದೆ ಚರ್ಮದ ಮೇಲೆ ದದ್ದುಗಳು, ಕೆಂಪು ಗುಳ್ಳೆಗಳು, ಸೀನುವಿಕೆ ಸೇರಿದಂತೆ ಇತರ ರೋಗಲಕ್ಷಣಗಳು ಕಂಡು ಬರುತ್ತದೆ.
  • ಹೀಗಾಗಿ ಕೆಲವೊಂದು ಆಹಾರಗಳು, ಎಷ್ಟೇ ಆರೋಗ್ಯಕಾರಿ ಆಗಿದ್ದರೂ ಕೂಡ, ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದಕ್ಕೆ ಒಣದ್ರಾಕ್ಷಿ ಕೂಡ ಹೊರತಲ್ಲ!
  • ಒಂದು ವೇಳೆ ಅತಿಯಾಗಿ ಒಣದ್ರಾಕ್ಷಿಯನ್ನು ಸೇವನೆ ಮಾಡುತ್ತಾ ಬಂದರೆ, ಮೂಗು ಕಟ್ಟುವಿಕೆ, ಮೂಗು ಸೋರುವಿಕೆ, ಶ್ವಾಸಕೋಶದ ಕಫ ಹೆಚ್ಚಳ, ಉಸಿರಾಟದ ತೊಂದರೆ, ಕೆಮ್ಮು, ಅತಿಸಾರ, ವಾಂತಿ, ಹೊಟ್ಟೆ ನೋವು ಚರ್ಮದ ದದ್ದು ಹಾಗೂ  ಇಸಬು ನಂತಹ ಚರ್ಮದ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ.

ರಕ್ತದೊತ್ತಡ

High Blood Pressure Symptoms: Emergency Symptoms, Treatments, and More

  • ರಕ್ತದೊತ್ತಡ ಕಾಯಿಲೆ ಎಷ್ಟು ಅಪಾಯಕಾರಿ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಈ ಕಾಯಿಲೆ ಕೈಮೀರಿ ಹೋಗದಂತೆ, ಎಚ್ಚರಿಕೆ ವಹಿಸಿಕೊಳ್ಳಬೇಕು. ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ ಒಣ ದ್ರಾಕ್ಷಿಯಲ್ಲಿ ಪೊಟಾಶಿಯಂ ಅಂಶ ಕಂಡು ಬರುವುದರಿಂದ, ಇದು ದೇಹದಲ್ಲಿ ಉಪ್ಪಿನ ಅಂಶದಲ್ಲಿ ಸಮತೋಲನವನ್ನು ಕಾಪಾಡಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಿಗೆ ಬರುತ್ತದೆ. ಆದರೆ ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.
  • ಒಂದು ವೇಳೆ ಒಣದ್ರಾಕ್ಷಿಯನ್ನು ಅತಿಯಾಗಿ ಸೇವನೆ ಮಾಡಿದರೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಅಪಧಮನಿ ಸಮಸ್ಯೆ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ರಕ್ತನಾಳದಲ್ಲಿ ಸಮಸ್ಯೆ ಗಳು ಕಂಡು ಬರುವ ಅಪಾಯ ಹೆಚ್ಚಿರುತ್ತದೆ!

If You Suffering From Bp And Allergy Symptoms, Dont Eat Too Many Raisins.