ಸಕ್ಕರೆ ಕಾಯಿಲೆ ಇರುವವರು ಸೇಬು ಹಾಗೂ ಬಾಳೆಹಣ್ಣು ತಿನ್ನಬಹುದಾ?

19-10-22 07:55 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಇದ್ದವರು, ತಾವು ಸೇವಿಸುವ ಆಹಾರ ವಿಷ್ಯದಲ್ಲಿ ಎಷ್ಟು ಜಾಗರೂಕತೆ ವಹಿಸುತ್ತೆ ವೆಯೋ ಅಷ್ಟು ಒಳ್ಳೆಯದು. ಅಂತೆಯೇ ಸಕ್ಕರೆಯ ಅಂಶ ಇರುವ ಹಣ್ಣುಗಳನ್ನೂ ತಿನ್ನ ಬಾರದು! ಉದಾಹರಣೆಗೆ ನೈಸರ್ಗಿಕ ಸಕ್ಕರೆ ಅಂಶ ಇರುವ ಸೇಬು ಹಾಗೂ ಬಾಳೆಹಣ್ಣನ್ನು ಮಿತವಾಗಿ ಸೇವನೆ ಮಾಡಬೇಕು.

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕಾಯಿಲೆ ವ್ಯಕ್ತಿಯಲ್ಲಿಕಾಣಿಸಿಕೊಂಡ ಮೇಲೆ, ಆತನ ಸಂಪೂರ್ಣ ಜೀವನಶೈಲಿಯೇ ಬದಲಾಗಿ ಬಿಡುತ್ತದೆ ಎಂದು ಹೇಳಲಾಗುತ್ತದೆ. ಇದು ನಿಜ ಕೂಡ ಈ ಕಾಯಿಲೆ ಇದೆ ಎಂದು ಖಚಿತವಾದ ಬಳಿಕ, ಕಣ್ಣಿಗೆ ಕಾಣುವ ಹಾಗೂ ಮನಸ್ಸು ಬಯಸುವ ಆಹಾರ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಎಲ್ಲಾ ವಿಷ್ಯದಲ್ಲೂ ನೀತಿನಿಯಮ ಗಳನ್ನು ಅನುಸರಿಸಬೇಕಾಗುತ್ತದೆ.

ಹಾಗಾಗಿ ಜೀವನದಲ್ಲಿ ಇಂತಹ ಸಮಸ್ಯೆಗಳು ಬರಬಾರದೆಂದರೆ, ಈಗಿನಿಂದಲೇ ಅನಾರೋಗ್ಯಕಾರಿ ಜೀವನಶೈಲಿಯನ್ನು ಬಿಟ್ಟು ಆರೋಗ್ಯಕಾರಿ ಆಹಾರಗಳನ್ನು ಸೇವನೆ ಮಾಡುತ್ತಾ ಹೋದರೆ ಇಂತಹ ಸೈಲೆಂಟ್ ಕಿಲ್ಲರ್ ಕಾಯಿಲೆಯಿಂದ ದೂರವಿರಬಹುದು. ಬನ್ನಿ ಇಂದಿನ ಲೇಖನದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಿರುವ, ಸೇಬು ಹಣ್ಣು ಹಾಗೂ ಬಾಳೆಹಣ್ಣನ್ನು ಸಕ್ಕರೆ ಕಾಯಿಲೆ ಇದ್ದವರು ಸೇವನೆ ಮಾಡಬಹುದಾ ಎನ್ನುವುದನ್ನು ನೋಡೋಣ ಬನ್ನಿ....

ಸೇಬು ಹಣ್ಣು ಹಾಗೂ ಸಕ್ಕರೆಕಾಯಿಲೆ

Get tested for diabetes - The Portugal News

  • ಸೇಬು ಹಣ್ಣು ಬಗ್ಗೆ ಹೇಳುವುದಾದರೆ ದಿನಕ್ಕೊಂದು ಸೇಬು ಹಣ್ಣು ತಿಂದರೆ ವೈದ್ಯರಿಂದ ದೂರವಿರ ಬಹುದು ಎನ್ನುವ ಮಾತು ನಮಗೆಲ್ಲಾ ಗೊತ್ತೇ ಇದೆ. ಅದು ನಿಜ ಕೂಡ ಸೇಬಿನಲ್ಲಿರುವ ಹಲವಾರು ಬಗೆಯ ಪೌಷ್ಟಿಕಾಂಶಗಳು, ಹೆಚ್ಚಿನ ಪ್ರಮಾಣದ ವಿಟಮಿನ್ ಅಂಶಗಳು ಅಧಿಕ ಪ್ರಮಾಣದ ನಾರಿನಾಂಶ, ಸಾಕಷ್ಟು ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುವುದ ರಿಂದ, ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ!
  • ಆದರೆ ಇಲ್ಲಿ ಪ್ರಶ್ನೆ ಏನೆಂದ್ರೆ, ಇಷ್ಟೆಲ್ಲಾ ಆರೋಗ್ಯಕಾರಿ ಗುಣಗಳನ್ನು ಹೊಂದಿರುವ ಸೇಬು ಹಣ್ಣನ್ನು, ಮಧುಮೇಹ ಇರುವವರು ಸೇವನೆ ಮಾಡಬಹುದಾ ಎಂದು? ಮುಂದೆ ಓದಿ...

ಸೇಬು ಹಣ್ಣಿನಲ್ಲಿ ಕಂಡು ಬರುವ ನೈಸರ್ಗಿಕ ಸಕ್ಕರೆ ಅಂಶ..

Apple Slices Images – Browse 211,623 Stock Photos, Vectors, and Video |  Adobe Stock

ಪ್ರಮುಖವಾಗಿ ಈ ಹಣ್ಣಿನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದನ್ನೇ ಫ್ರಕ್ಟೋಸ್ ಎಂದು ಕರೆಯಲಾಗುತ್ತದೆ. ಹೀಗಾಗಿ ಮಧುಮೇಹಿ ರೋಗಿಗಳು ಈ ಹಣ್ಣನ್ನು ಅತಿಯಾಗಿ ಸೇವನೆ ಮಾಡಿದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ! ಹೀಗಾಗಿ ದಿನಕ್ಕೆ ಅರ್ಧ ತುಂಡು ಸೇಬು ಹಣ್ಣು ತಿನ್ನುವುದರಲ್ಲಿ ಅಡ್ಡಿಯಿಲ್ಲ!

ಗ್ಲೈಸೆಮಿಕ್ ಸೂಚ್ಯಂಕ

Can diabetics eat apples? | Vinmec

ತಜ್ಞರು ಹೇಳುವ ಪ್ರಕಾರ  ರಕ್ತದಲ್ಲಿನ ಸಕ್ಕರೆ ಮಟ್ಟ ಅಚ್ಚುಕಟ್ಟಾಗಿ ನಿರ್ವಹಣೆ ಆಗಬೇಕೆಂದರೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಸೇಬು ಹಣ್ಣು! ಹೀಗಾಗಿ ಸಕ್ಕರೆಕಾಯಿಲೆ ಇರುವವರು ಮಿತವಾಗಿ ಸೇವನೆ ಮಾಡುವು ದರಲ್ಲಿ ಅಡ್ಡಿಯಿಲ್ಲ

ಬಾಳೆಹಣ್ಣು ಹಾಗೂ ಮಧುಮೇಹ

Is it safe to eat bananas at night? | The Times of India

  • ವರ್ಷ ಪೂರ್ತಿ ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ ಹಣ್ಣೆಂದರೆ ಅದು ಬಾಳೆಹಣ್ಣು. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಈ ಬಾಳೆಹಣ್ಣನ್ನು ಹೆಚ್ಚಿನವರು ಇಷ್ಟಪಟ್ಟು ತಿನ್ನುತ್ತಾರೆ.
  • ಪ್ರಮುಖವಾಗಿ ನಾರಿನಾಂಶ ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಊಟದ ಬಳಿಕ ಒಂದು ಬಾಳೆಹಣ್ಣು ತಿಂದರೂ ಸಾಕು, ಜೀರ್ಣಕ್ರಿಯೆ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತದೆ
  • ಆದರೆ ಇಲ್ಲಿ ದೊಡ್ಡ ಪ್ರಶ್ನೆ ಏನೆಂದರೆ, ಸಿಹಿ ಅಂಶ ಹೆಚ್ಚಿರುವ ಈ ಹಣ್ಣನ್ನು ಸಕ್ಕರೆ ಕಾಯಿಲೆ ಇರುವ ವರು ತಿನ್ನಬಹುದಾ? ಒಂದು ವೇಳೆ ಸೇವನೆ ಮಾಡಿದರೆ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗು ತ್ತದೆಯಾ ಎನ್ನುವ ಗೊಂದಲ ಹಲವರಿಗಿದೆ..

ಬಾಳೆಹಣ್ಣು ತಿನ್ನುವ ಮೊದಲು ವೈದ್ಯರಿಂದ ಸಲಹೆಗಳನ್ನು ಪಡೆದುಕೊಳ್ಳಿ

Bananas May Improve Heart Health, Especially for Women - Perishable News

ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹಾಗೂ ಗ್ಲೈಸೆಮಿಕ್ ಸೂಚ್ಯಾಂಕ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಮಧುಮೇಹ ಕಾಯಿಲೆ ಇರುವವರು, ಈ ಹಣ್ಣನ್ನು ತಿನ್ನುವ ಮೊದಲು ವೈದ್ಯರ ಸಲಹೆಗಳನ್ನು ಪಡೆದುಕೊಂಡರೆ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ಮಧು ಮೇಹಿಗಳು, ಬಾಳೆಹಣ್ಣನ್ನು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.

Can Diabetics Eat Bananas And Apple Does Its Effect Blood Sugar Levels.