ವಾರದಲ್ಲಿ ಒಂದು ಬಾರಿ ಬಂಗುಡೆ ಮೀನು ಸಾಕು, ಇಷ್ಟೆಲ್ಲಾ ಪ್ರಯೋಜನಗಳು ಸಿಗುತ್ತೆ..

24-10-22 09:15 pm       Source: Vijayakarnataka   ಡಾಕ್ಟರ್ಸ್ ನೋಟ್

ಉತ್ತಮ ಆರೋಗ್ಯಕ್ಕೆ ಕೇವಲ ಸಸ್ಯಹಾರ ಮಾತ್ರವಲ್ಲ ಸಮುದ್ರಾಹಾರ ಅಥವಾ ಮಾಂಸಾಹಾರ ಕೂಡ ಪ್ರಯೋಜನ ಕೊಡಬಲ್ಲದು ಎಂಬುದಕ್ಕೆ ಬಾಂಗಡ ಮೀನು ಒಂದು ಉದಾಹರಣೆ!

ಆರೋಗ್ಯದ ವಿಚಾರ ಬಂದಾಗ ನಾವು ತಿನ್ನುವ ಆಹಾರ ಪದ್ಧತಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ದೀರ್ಘ ಕಾಲದ ಕಾಯಿಲೆಗಳು ನಮಗೆ ಬರಬಾರದು ಎಂದರೆ ನಾವು ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು ಅವಶ್ಯಕವಾಗಿದೆ. ಇಲ್ಲಿ ಯಾವ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಅದಕ್ಕೆ ಸಂಬಂಧಪಟ್ಟಂತೆ ಇರುವಂತಹ ಆಹಾರಗಳನ್ನು ಸೇವಿಸುವುದು ಅತ್ಯುತ್ತಮ ಎಂದು ಸಾಬೀತಾಗಿದೆ. ಬಾಂಗಡಾ ಮೀನುಗಳ ಬಗ್ಗೆ ನಿಮಗೆಲ್ಲಾ ಗೊತ್ತೆ ಇದೆ. ಈ ಲೇಖನದಲ್ಲಿ ಇವುಗಳ ಸೇವನೆಯಿಂದ ಸಿಗುವ ಆರೋಗ್ಯದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

ಹೃದಯಕ್ಕೆ ತುಂಬಾ ಒಳ್ಳೆಯದು

Inequalities in heart attack care 'costing women's lives' - BBC News

  • ಹೃದಯದ ಬಗ್ಗೆ ಕಾಳಜಿ ಹೊಂದಿರುವವರು ಸಾಮಾನ್ಯವಾಗಿ ಒಮೆಗಾ-3 ಫ್ಯಾಟಿ ಆಮ್ಲಗಳು ಇರುವಂತಹ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ.
  • ಏಕೆಂದರೆ ಇದು ಹೃದಯದ ಕಾಯಿಲೆಯನ್ನು ಬರದಂತೆ ಕಾಪಾಡುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಬಾಂಗಡ ಮೀನು ಕೂಡ ಹೃದಯಸ್ತಂಭನ, ಪಾರ್ಶ್ವವಾಯು, ಅತೆರೋಸ್ಕ್ಲೇರೋಸಿಸ್, ಹೃದಯ ರಕ್ತನಾಳದ ಕಾಯಿಲೆಗಳು ಇತ್ಯಾದಿಗಳನ್ನು ಬರದಂತೆ ತಡೆಯುವ ಶಕ್ತಿ ಹೊಂದಿದೆ.

ಮಧುಮೇಹ ತೊಂದರೆಗೆ ರಾಮಬಾಣ

9 Healthy Habits to Control Your Diabetes - Blogs - Makati Medical Center

  • ನೀವು ಒಂದು ವೇಳೆ ಮಾಂಸಾಹಾರಿ ಆಗಿದ್ದು, ನಿಮ್ಮ ಮಧುಮೇಹವನ್ನು ನಿಯಂತ್ರಣ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದೀರಿ ಎಂದಾದರೆ ನಿಮಗೆ ಬಾಂಗಡಾ ಮೀನು ಹೆಚ್ಚು ಪ್ರಯೋಜನ ಕಾರಿ ಎನಿಸುತ್ತದೆ.
  • ಏಕೆಂದರೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಣೆ ಮಾಡುವುದು ಮಾತ್ರವಲ್ಲದೆ ನಿಮ್ಮ ಸೊಂಟದ ಭಾಗದ ಬೊಜ್ಜನ್ನು ಕರಗಿಸಿ ಸಕ್ಕರೆ ಕಾಯಿಲೆ ಅತ್ಯುತ್ತಮವಾಗಿ ನಿರ್ವಹಣೆಯಾಗುವಂತೆ ಮಾಡುತ್ತದೆ.

ರಕ್ತದ ಒತ್ತಡ ನಿರ್ವಹಣೆ ಸಾಧ್ಯ

High Blood Pressure Symptoms: Emergency Symptoms, Treatments, and More

  • ಇತ್ತೀಚಿಗೆ ರಕ್ತದ ಒತ್ತಡ ಎನ್ನುವುದು ಜನರ ತೀವ್ರತರದ ಮತ್ತು ದಿನನಿತ್ಯದ ಆರೋಗ್ಯ ಸಮಸ್ಯೆ ಯಾಗಿದೆ. ಅದರಲ್ಲೂ ರಕ್ತದೊತ್ತಡ ನಿಯಂತ್ರಣಕ್ಕೆ ಬರದೇ ತೊಂದರೆಗೆ ಒಳಗಾಗಿರುವವರು ಸಾಕಷ್ಟು ಜನರಿದ್ದಾರೆ.
  • ಅಂತಹವರಿಗಾಗಿ ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಬಾಂಗಡ ಮೀನು ಸೇವನೆ ಮಾಡುವುದು ಅನು ಕೂಲಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಬಾಂಗಡಾ ಮೀನುಗಳಲ್ಲಿ ಪೊಟ್ಯಾಷಿ ಯಂ ಪ್ರಮಾಣ ತುಂಬಾ ಇದೆ. ಇದು ರಕ್ತದ ಒತ್ತಡವನ್ನು ಸಹಜಸ್ಥಿತಿಗೆ ತಲುಪಿಸುವಲ್ಲಿ ಕೆಲಸ ಮಾಡುತ್ತದೆ.

ಅರಿವಿನ ಸಾಮರ್ಥ್ಯ ಹೆಚ್ಚಿಸುತ್ತದೆ

  • ಸಂಶೋಧನೆ ಹೇಳುವಂತೆ ಬಾಂಗಡಾ ಮೀನುಗಳಲ್ಲಿ omega-3 ಫ್ಯಾಟಿ ಆಮ್ಲಗಳು ಇರುವುದರಿಂದ ಮಾನಸಿಕ ಖಿನ್ನತೆಯಿಂದ ಬಳಲುವ ಜನರಿಗೆ ತುಂಬಾ ಉಪಯೋಗವಾಗಲಿದೆ.
  • ಏಕೆಂದರೆ ಇದು ಮೆದುಳಿಗೆ ಸಹಕಾರಿಯಾದ ಆಹಾರವಾಗಿ ಕೆಲಸ ಮಾಡಲಿದ್ದು, ಮಾನಸಿಕ ಒತ್ತಡದಿಂದ ಪಾರು ಮಾಡುತ್ತದೆ. ಅಲ್ಜಿಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಜನರಿಗೂ ಸಹ ಬಾಂಗಡ ಮೀನು ಪ್ರಯೋಜನಕಾರಿ.

ಆರ್ಥರೈಟಿಸ್ ಸಮಸ್ಯೆ ಇಲ್ಲವಾಗುತ್ತದೆ

  • ಬಂಗುಡೆ ಮೀನುಗಳಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಜಾಸ್ತಿ ಇರಲಿದ್ದು, ಮೈಕೈ ನೋವು ಮತ್ತು ಕೀಲುಗಳ ನೋವಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.
  • ಇತ್ತೀಚೆಗೆ ಕೇವಲ ವಯಸ್ಸಾದವರಿಗೆ ಮಾತ್ರವಲ್ಲದೆ ಮಧ್ಯವಯಸ್ಸು ಮತ್ತು ಯುವಕ-ಯುವತಿ ಯರಿಗೆ ಕೂಡ ಆರ್ಥರೈಟಿಸ್ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಇಂತಹ ಸಮಸ್ಯೆಯಲ್ಲಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಬಾಂಗಡ ಮೀನು ಸೇರಿಸಿ ಸವಿಯುವುದು ಉತ್ತಮ.

ಕರುಳಿನ ಕ್ಯಾನ್ಸರ್ ರೋಗಿಗಳಿಗೆ ಒಳ್ಳೆಯದು

  • ಬಾಂಗಡಾ ಮೀನುಗಳಲ್ಲಿ ವಿಟಮಿನ್ ಡಿ ಪ್ರಮಾಣ ಇರುವುದರಿಂದ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಸಾಕಷ್ಟು ಪ್ರಯೋಜನಕಾರಿ ಅನಿಸುತ್ತದೆ.
  • ಅಧ್ಯಯನಗಳು ಹೇಳುವ ಹಾಗೆ ವಿಟಮಿನ್ ಡಿ ಪ್ರಮಾಣ ಹೆಚ್ಚಾಗಿರುವ ಯಾವುದೇ ಆಹಾರಗಳು ಕ್ಯಾನ್ಸರ್ ಗಂಟುಗಳು ಉಂಟಾಗದಂತೆ ನೋಡಿಕೊಂಡು ಆರೋಗ್ಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಇದು ಕರುಳಿನ ಕ್ಯಾನ್ಸರ್ ರೋಗಿಗಳಿಗೆ ಭರವಸೆ ಮೂಡಿಸುತ್ತದೆ ಎಂದು ಹೇಳಬಹುದು.

Know The Surprising Health Benefits Of Mackerel Or Bangada Fish That You Must Know.